ಕಾಸರಗೋಡು : ಜಾನುವಾರು ಸಾಗಾಟ ವಾಹನ ತಡೆದು ಕೊಲೆಗೆ ಯತ್ನ
ಕಾಸರಗೋಡು : ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವ್ಯಾನನ್ನು ತಡೆದ ತಂಡವೊಂದು ಅದರಲ್ಲಿದ್ದ ಮೂವರ ಕೊಲೆಗೆ ಯತ್ನಿಸಿದ ಘಟನೆ ಆದಿತ್ಯವಾರ ಸಂಜೆ ಉಳಿಯತ್ತಡ್ಕ ಭಗವತಿ ನಗರದಲ್ಲಿ ನಡೆದಿದೆ .
ಗಾಯಗೊಂಡ ಮಂಜತ್ತಡ್ಕ ದ ಅಶ್ರಫ್ ( ೨೮) ,ಚಟ್ಟ೦ಚಾಲ್ ನ ಹಮೀದ್ ( ೫೦) ಮತ್ತು ಚಾಲಕ ಮುಹಮ್ಮದ್ ಕುನ್ಚಿ ( ೩೨) ಯವರ ಕೊಲೆಗೆ ಯತ್ನಿಸಿದೆ.
ಉಳಿಯತ್ತಡ್ಕ ದಿಂದ ಕುಂಬಳೆ ಆರಿಕ್ಕಾಡಿಗೆ ಜಾನುವಾರು ಹೇರಿಕೊಂಡು ಹೋಗುತ್ತಿದ್ದಾಗ ಉಳಿಯತ್ತಡ್ಕ ಭಗವತಿ ನಗರದಲ್ಲಿ ತಂಡವೊಂದು ತಡೆದು ಮೂವರನ್ನು ಪಿಕಪ್ ನಿಂದ ಹೊರಗೆಳೆದು ಥಳಿಸಿದ್ದು , ಮಾರಕಾಸ್ತ್ರದಿಂದ ಹಲ್ಲೆಗೂ ಯತ್ನಿಸಿದೆ. ಈ ಸಂದರ್ಭದಲ್ಲಿ ಪೊಲೀಸ್ ಜೀಪ್ ಬರುವುದನ್ನು ಗಮನಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದು , ತಂಡದಲ್ಲಿನ ಉದಯ ಕುಮಾರ್ ಎಂಬಾತನನ್ನು ಪೊಲೀಸರು ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡಿದ್ದಾರೆ . ಇತರ ನಾಲ್ವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಕಾಸರಗೋಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
Next Story





