Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. * ಭಾರತ ನೀಡಿದ್ದು ಆಧ್ಯಾತ್ಮಿಕತೆಯನ್ನು,...

* ಭಾರತ ನೀಡಿದ್ದು ಆಧ್ಯಾತ್ಮಿಕತೆಯನ್ನು, ಕೋಮುವಾದವನ್ನಲ್ಲ.

ವಾರ್ತಾಭಾರತಿವಾರ್ತಾಭಾರತಿ17 Jan 2016 11:15 PM IST
share
* ಭಾರತ ನೀಡಿದ್ದು ಆಧ್ಯಾತ್ಮಿಕತೆಯನ್ನು, ಕೋಮುವಾದವನ್ನಲ್ಲ.

- ನರೇಂದ್ರ ಮೋದಿ, ಪ್ರಧಾನಿ
-ಗುಜರಾತ್ ಯಾವ ದೇಶಕ್ಕೆ ಸೇರಿದೆ?
..................................................
* ಮೋದಿ ದೂರದೃಷ್ಟಿಯ ನಾಯಕ.
- ಪ್ರೊ.ಸಿ.ಎನ್.ಆರ್. ರಾವ್, ಭಾರತರತ್ನ ಪುರಸ್ಕೃತ ವಿಜ್ಞಾನಿ


- ಆದಷ್ಟು ಬೇಗ ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಸರಿ ಅನ್ನಿಸುತ್ತದೆ

. .................................................. 

* ಸಂಸ್ಕೃತ ಭಾಷಾ ಜ್ಞಾನವಿಲ್ಲದ್ದರಿಂದ ಕನ್ನಡದ ಬಹುತೇಕ ಲೇಖಕರು ಪ್ರಥಮ ದರ್ಜೆ ಲೇಖಕರಾಗಿ ರೂಪುಗೊಂಡಿಲ್ಲ.
- ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ
-ತಲೆಯಿಂದ ಹುಟ್ಟಿದವರಷ್ಟೇ ಪ್ರಥಮ ದರ್ಜೆಯ ಲೇಖಕರು ಎನ್ನುವುದನ್ನು ಹೇಳುತ್ತಿದ್ದೀರಿ, ಅಲ್ಲವೇ?

..................................................

* ಪಂಚಾಯತ್ ಚುನಾವಣೆಗೆ ಸಾಮೂಹಿಕ ನಾಯಕತ್ವವೇ ಲೇಸು.
- ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
 
-ಸೋಲನ್ನು ಸಾಮೂಹಿಕವಾಗಿ ಸ್ವೀಕರಿಸುವಾಗ ಅವಮಾನ ಇರುವುದಿಲ್ಲ

. ..................................................
* ಪಾಕಿಸ್ತಾನದ ಮೇಲೆ ಅಪನಂಬಿಕೆ ಇಲ್ಲ.
- ರಾಜ್‌ನಾಥ್ ಸಿಂಗ್, ಕೇಂದ್ರ ಗೃಹ ಸಚಿವ


-ಮೋದಿ ಕುರಿತಂತೆ ಅಪನಂಬಿಕೆ ಭಾರತೀಯರಲ್ಲಿ ಶುರುವಾಗಿದೆ.

..................................................

* ನಾನು ಮತ್ತು ಧರ್ಮಸ್ಥಳದ ಹೆಗ್ಗಡೆ ವಿಷ್ಣು ಹಾಗೂ ಶಿವ ಇದ್ದಂತೆ.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ


-ರಾಮಚಂದ್ರಪುರ ಮಠದಲ್ಲಿರುವ ಬ್ರಹ್ಮ, ನ್ಯಾಯಾಲಯಕ್ಕೆ ಹೆದರಿ ನಿಮ್ಮ ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಿದ್ದಾರೆ ಎಂದಾಯಿತು. ..................................................

* ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಆಯ್ಕೆ.
- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

-ಬಹುಶಃ ಯಡಿಯೂರಪ್ಪ ಅವರಿಗೆ ಶಾಕ್ ಕೊಡುವುದಕ್ಕೆ ಸಂಚು ನಡೆಯುತ್ತಿರಬೇಕು

. ..................................................
*ಭಾರತವೂ ಮೂಲಭೂತವಾದ ಅಥವಾ ಭಯೋತ್ಪಾದನೆಯಿಂದ ಮುಕ್ತವಾಗಿಲ್ಲ.
- ಪರ್ವೇಝ್ ಮುಶರ್ರಫ್, ಪಾಕ್ ಮಾಜಿ ಅಧ್ಯಕ್ಷ
 
-ಪಾಕಿಸ್ತಾನವಂತೂ ಭಯೋತ್ಪಾದಕರಿಂದ ಮುಕ್ತಾಯವಾಗುವ ಹಂತದಲ್ಲಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಿ

. ..................................................
* ಮಲ್ಲಿಕಾರ್ಜುನ ಖರ್ಗೆ ವಿಧಾನಸೌಧಕ್ಕೆ ಬಂದರೆ ಹೆಣವೂ ಎದ್ದು ನಿಲ್ಲಬೇಕು.
- ಕಾಗೋಡು ತಿಮ್ಮಪ್ಪ, ಸ್ಪೀಕರ್
-ವಿಧಾನಸೌಧದೊಳಗೆ ಹೆಣಗಳೂ ಇವೆ ಎಂದಾಯಿತು.
..................................................
* ಅಲ್‌ಖಾಯಿದಾ ಗತಿಯನ್ನೇ ಐಸಿಸ್‌ಗೂ ಕಾಣಿಸಲಿದ್ದೇವೆ.
- ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

-ಒಟ್ಟಿನಲ್ಲಿ ವಿಶ್ವದ ಗತಿ ಅಧೋಗತಿ

. ..................................................
* ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಜೀವಂತ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ
-ಆದುದರಿಂದ ಜಾತಿವ್ಯವಸ್ಥೆಯನ್ನು ಜೀವಂತ ಇಡಲೇಬೇಕು ಎಂದು ತೀರ್ಮಾನಿಸಿದ್ದೀರಾ?
..................................................
* ಭಾರತದಲ್ಲಿ ಎಲ್ಲ ಧರ್ಮಗಳನ್ನೂ ಸ್ವೀಕರಿಸಲಾಗುತ್ತದೆ.
- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
-ಸ್ವೀಕರಿಸಿದ ಮೇಲೆ, ವಾಪಸ್ ಕರೆಸುವ ಯೋಜನೆಗಳನ್ನು ಯಾಕೆ ಹಮ್ಮಿಕೊಂಡಿದ್ದೀರಿ?
..................................................
* ನಾನು ಕೆಲವೊಂದು ಜನರ ಕಾಲು ಹಿಡಿದು, ಸೇವೆ ಮಾಡಿ, ಕಣ್ಣೀರು ಹಾಕಿ ಜನಪ್ರತಿನಿಧಿಯಾಗಿಲ್ಲ.
- ನಳಿನ್ ಕುಮಾರ್ ಕಟೀಲ್, ಸಂಸದ

-ನಿಮಗೆ ಪ್ರಭಾಕರ ಭಟ್ಟರ ಕಾಲೊಂದೇ ಸಾಕು ಬಿಡಿ.

..................................................
* ದೇಶದ ಘನತೆಯನ್ನು ಹೇಗೆ ರಕ್ಷಿಸಬೇಕು ಎಂದು ಆಮಿರ್ ಖಾನ್ ತಮ್ಮ ಪತ್ನಿಗೂ ಬೋಧನೆ ಮಾಡಲಿ.
- ರಾಮ್ ಮಾಧವ್, ಬಿಜೆಪಿ ಪ್ರ.ಕಾರ್ಯದರ್ಶಿ

-ನಿಮ್ಮಿಂದ ಈ ದೇಶವನ್ನು ರಕ್ಷಿಸುವುದೇ ಈಗ ಜನರ ಸಮಸ್ಯೆಯಾಗಿದೆ

. ..................................................
* ಪರ್ಯಾಯಕ್ಕೆ ಬರುವ ಭಕ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು.
- ಯು.ಟಿ. ಖಾದರ್, ಆರೋಗ್ಯ ಸಚಿವ
-ವಿಶೇಷ ಮಡೆಸ್ನಾನವನ್ನು ಅದಕ್ಕಾಗಿ ಹಮ್ಮಿಕೊಳ್ಳಲಾಗುವುದೇ?
..................................................
* ಗೋವಿನೊಂದಿಗೆ ಒಡನಾಡುವ ಭಾಗ್ಯದಿಂದ ಇಂದಿನ ಮಕ್ಕಳು ವಂಚಿತರಾಗುತ್ತಿದ್ದಾರೆ.
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ


-ಬರೇ ಗೋವಿನೊಂದಿಗೆ ಒಡನಾಡಿದ್ದರೆ ನಿಮಗೆ ಕೋರ್ಟ್ ಮೆಟ್ಟಿಲೇರುವ ಅಗತ್ಯ ಬೀಳುತ್ತಿರಲಿಲ್ಲ ಬಿಡಿ

. .................................................. *

ಉತ್ತರಪ್ರದೇಶದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯವರು ರಾಮಮಂದಿರ ನಾಟಕ ಶುರು ಮಾಡಿದ್ದಾರೆ.
- ಮಾಯಾವತಿ, ಬಿಎಸ್ಪಿ ನಾಯಕ
-ಅದಕ್ಕೆ ಪರ್ಯಾಯವಾಗಿ ನಿಮ್ಮ ನಾಟಕ ಯಾವಾಗ ಶುರುವಾಗುತ್ತೆ?
..................................................

share
ವಾರ್ತಾಭಾರತಿ
ವಾರ್ತಾಭಾರತಿ
Next Story
X