Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಎಡ ಪಕ್ಷಗಳ ಪುನಶ್ಚೇತನ: ಮೈತ್ರಿಯೊಂದೇ...

ಎಡ ಪಕ್ಷಗಳ ಪುನಶ್ಚೇತನ: ಮೈತ್ರಿಯೊಂದೇ ಸಾಧನ

ರಾಮ್ ಪುನಿಯಾನಿರಾಮ್ ಪುನಿಯಾನಿ17 Jan 2016 11:17 PM IST
share
ಎಡ ಪಕ್ಷಗಳ ಪುನಶ್ಚೇತನ: ಮೈತ್ರಿಯೊಂದೇ ಸಾಧನ

ಸ್ವತಂತ್ರ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಬಳಿಕ ಅಂದಿನ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಅಮೆರಿಕದ ಮೆಕ್‌ಕ್ಯಾಥ್ರಿ ಎಡಪಂಥೀಯರ ಮೇಲೆ ವಾಗ್ದಾಳಿ ನಡೆಸುತ್ತಿದ್ದ ಕಾಲ ಅದು. ಭಾರತದಲ್ಲಿ ಎಡಪಕ್ಷಗಳ ಪಿಡುಗನ್ನು ದೂರವಿಡುವ ಸಲುವಾಗಿ ಆಡಳಿತದ ಜತೆ ಸಹಕರಿಸಲು ಸಿದ್ಧ ಎಂದು ಆರೆಸ್ಸೆಸ್, ಕಾಂಗ್ರೆಸ್ ಪಕ್ಷಕ್ಕೆ ಅಭಯ ನೀಡಿತ್ತು. ಇದಕ್ಕೆ ಆರೆಸ್ಸೆಸ್ ಸಿದ್ಧಾಂತ ಪ್ರತಿಪಾದಕ ಎಂ.ಎಸ್.ಗೋಳ್ವಾಳ್ಕರ್ ಅವರ ಸೈದ್ಧಾಂತಿಕ ಹಿನ್ನೆಲೆಯೂ ಇದೆ. ಅವರು ತಮ್ಮ ಬಂಚ್ ಆಫ್ ಥಾಟ್ಸ್ ಕೃತಿಯಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಕಮ್ಯುನಿಸ್ಟ್ ಜೊತೆಗೆ ಸೇರಿಸಿ, ಹಿಂದೂ ದೇಶಕ್ಕೆ ಇವರು ಆಂತರಿಕ ಅಪಾಯಗಳು ಎಂದು ಬಣ್ಣಿಸಿದ್ದರು.
ಕಾಲ ಬದಲಾದಂತೆ ಪರಿಸ್ಥಿತಿಯೂ ಬದಲಾಯಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ವಿವಿಧ ಪಕ್ಷಗಳ ಒಕ್ಕೂಟವಾದ ಎನ್‌ಡಿಎ ರಚಿಸಿಕೊಂಡು ಆಡಳಿತ ನಡೆಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ತನ್ನ ಪೋಷಕ ಸಂಸ್ಥೆಯಾದ ಆರೆಸ್ಸೆಸ್‌ನ ಕಾರ್ಯಸೂಚಿಗೆ ಅನುಗುಣವಾಗಿ ಅಧಿಕಾರ ನಡೆಸುತ್ತಿದೆ. ಕಳೆದ ಚುನಾವಣೆಯಲ್ಲಿ ಎಡಪಕ್ಷಗಳು ಹೀನಾಯ ಸೋಲು ಅನುಭವಿಸಿದ್ದು, ಸಂಸತ್ತಿನಲ್ಲಿ ಎಡಪಕ್ಷಗಳ ಬಲ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ 2015ರ ದೇಶದ ದೊಡ್ಡ ಎಡಪಕ್ಷವಾದ ಸಿಪಿಎಂನ ಸಂಸದೀಯ ಮಂಡಳಿ ಅಧಿವೇಶನಕ್ಕೆ ವಿಶೇಷ ಮಹತ್ವವಿದೆ.
ಈ ಅಧಿವೇಶನದ ತುಣುಕುಗಳನ್ನು ಪಕ್ಷದ ಹಿಂದಿನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ನೀಡಿದ್ದಾರೆ. ಅಧಿವೇಶನದಲ್ಲಿ ವಾಸ್ತವವಾಗಿ ಏನು ನಡೆಯಿತು ಹಾಗೂ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯತಂತ್ರ ಏನು ಎಂಬ ಸುಳಿವು ನೀಡಿದ್ದಾರೆ. ವಿನ್ನಿಂಗ್ ಬ್ಯಾಕ್ ದ ಪೀಪಲ್ (ಇಂಡಿಯನ್ ಎಕ್ಸ್‌ಪ್ರೆಸ್, ಜನವರಿ 7, 2016) ಲೇಖನದಲ್ಲಿ ಇದರ ತಿರುಳನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಪಕ್ಷದ ಪ್ರಕಾರ, ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಏನು; ಅದರ ವಿರುದ್ಧ ಸಿಪಿಎಂ ಹೇಗೆ ಹೋರಾಟ ರೂಪಿಸುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಅಧಿವೇಶನದ ಹಲವು ಕಾರ್ಯಕಲಾಪಗಳು, ಉಸಿರಾಟಕ್ಕೆ ತಾಜಾ ಗಾಳಿಯನ್ನು ಒದಗಿಸುವ ನಿರೀಕ್ಷೆ ಮೂಡಿಸಿದ್ದು, ಬದಲಾಗುವ ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆ ಮಾಡಿಕೊಳ್ಳಲು, ಜನರ ಜತೆ ನಿಕಟ ಸಂಬಂಧ ಹೊಂದಲು, ಮಧ್ಯಮ ವರ್ಗ ಹಾಗೂ ಮೂಲೆಗುಂಪಾದ ವರ್ಗಗಳ ಜತೆ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಆದರೆ ಅದರ ಕೋಮು ರಾಜಕೀಯದ ವಿಶ್ಲೇಷಣೆ, ಕೋಮುವಾದದ ಒಂದು ಪ್ರಮುಖ ಆಯಾಮವನ್ನು ಕಡೆಗಣಿಸಿದಂತಿದೆ. ಅದು ಚುನಾವಣಾ ರಾಜಕೀಯಕ್ಕೆ ಸಂಬಂಧಿಸಿದ್ದು.
 ಕಾರಟ್ ಸರಿಯಾಗಿ ಗುರುತಿಸಿದಂತೆ, ಕೋಮುವಾದ ಅಂದರೆ ಬಿಜೆಪಿಯನ್ನು ಸೋಲಿಸುವುದು ಎಂಬ ತಪ್ಪುಕಲ್ಪನೆ ಇದೆ. ಇದು ಖಂಡಿತ ನಿಜ. ಆದರೆ ಅದರ ನಂತರದ ವಾಕ್ಯದ ಪ್ರಕಾರ, ಅಧಿಕಾರದಲ್ಲಿರುವ ಬಿಜೆಪಿಗೆ ಸಂಬಂಧಿಸಿದಂತೆ ಸಿಪಿಎಂ ಚುನಾವಣಾ ರಾಜಕೀಯದ ಪಾತ್ರವನ್ನು ಕೀಳಂದಾಜು ಮಾಡುತ್ತಿದೆ; ಚುನಾವಣಾ ಸೋಲು ಖಂಡಿತವಾಗಿಯೂ ಕೋಮುವಾದಿಗಳನ್ನು ದುರ್ಬಲಗೊಳಿಸದು ಅಥವಾ ಅವರನ್ನು ದೂರವಿಡದು ಎಂಬ ಕಾರಟ್ ಹೇಳಿಕೆಯಲ್ಲಿ ಇದು ಸ್ಪಷ್ಟವಾಗಿ ತಿಳಿಯುತ್ತದೆ. ನಿರಂತರವಾಗಿ ಮುಂದುವರಿಯುತ್ತಿರುವ ಕೋಮುಶಕ್ತಿಗಳ ವಿರುದ್ಧದ ಹೋರಾಟ ಅತ್ಯಂತ ಪ್ರಸ್ತುತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಲು ತೀರಾ ಅನಿವಾರ್ಯ. ಆದರೆ ಪ್ರತಿಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ, ಬಿಜೆಪಿಯ ಚುನಾವಣಾ ಯಶಸ್ಸು ಕೋಮು ಶಕ್ತಿಗಳಿಗೆ ದೊಡ್ಡ ಬಲ ತುಂಬಿದೆ ಎನ್ನುವ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ. ಸಹಜವಾಗಿಯೇ ಚುನಾವಣಾ ಸೋಲುಗಳು ಕೋಮು ಕಾರ್ಯಸೂಚಿಯನ್ನು ದುರ್ಬಲಗೊಳಿಸುತ್ತವೆ. ಎರಡನೆ ವಿಷಯದ ಬಗ್ಗೆ ಗಮನ ಹರಿಸುವುದಾದರೆ, ಬಿಜೆಪಿ 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಏನಾಗುತ್ತಿತ್ತು ಎಂದು ಕಲ್ಪಿಸಿಕೊಳ್ಳೋಣ. ಅದು ಕೋಮುವಾದವನ್ನು ಮತ್ತಷ್ಟು ಬಲಗೊಳಿಸುತ್ತಿತ್ತೇ ಅಥವಾ ಇಲ್ಲವೇ?
ಕೋಮುವಾದ ಇಂದಿನ ಆರೆಸ್ಸೆಸ್ ಕಾರ್ಯಸೂಚಿಯ ಬಲವಾದ ಅಸ್ತ್ರ ಇದಕ್ಕೆ ಮುಖ್ಯ ಕಾರಣವೆಂದರೆ ಬಿಜೆಪಿ ಹಿಂದೆ 1998 ಹಾಗೂ 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದದ್ದು. ಕೋಮು ಕಾರ್ಯಸೂಚಿ ಸಾಮಾಜಿಕ, ಶೈಕ್ಷಣಿಕ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದರೆ, ಸರಕಾರದ ತೆಕ್ಕೆಗೆ, ಆಡಳಿತ ವರ್ಗಕ್ಕೆ ಅದರಲ್ಲೂ ಮುಖ್ಯವಾಗಿ ಪೊಲೀಸ್ ಪಡೆಗೆ ಇದು ನುಸುಳುವಂತೆ ಮಾಡಿದೆ. ಇತರ ಸಾಂಸ್ಕೃತಿಕ ವ್ಯವಸ್ಥೆಗಳ ಮೂಲಕ ಮಾತ್ರವಲ್ಲದೇ ಶಿಕ್ಷಣ ಹಾಗೂ ಮಾಧ್ಯಮದ ಮೂಲಕ ಕಾರ್ಯಾಚರಿಸುವ ಕಾರ್ಯಸೂಚಿಯನ್ನೂ ಹೊಂದಿದೆ. ಈ ಕಾರ್ಯಸೂಚಿಗಳು ಬಿಜೆಪಿ ಹಿಂದೆ 1996 ಮತ್ತು 1998ರಲ್ಲಿ ಅಧಿಕಾರಕ್ಕೆ ಬರುವ ಮುನ್ನವೂ ಕಾರ್ಯ ನಿರ್ವಹಿಸುತ್ತಿದ್ದವು ಎಂಬ ನಿರ್ಣಯಕ್ಕೆ ಬರಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದು ಬಾರಿ ಅವರು ನೇರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ಗೌಣ ಎನಿಸಿಕೊಂಡಿದ್ದ ಬಿಜೆಪಿ ಸಹವರ್ತಿಗಳ ಚಟುವಟಿಕೆಗೆ ಅನುಕೂಲ ಕಲ್ಪಿಸಿದರು. ವಾಸ್ತವವಾಗಿ ಇವು ಆರೆಸ್ಸೆಸ್ ಯೋಜನೆಯ ಬಗ್ಗೆ ನಿಕಟ ನಂಟು ಹೊಂದಿದ್ದು, ಹಿಂದುತ್ವ ಛತ್ರಿಯಡಿಯ ಶ್ರಮ ಹಂಚಿಕೆಯ ಅಂಗಗಳು.
ಈ ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದ ಅವಧಿಯಲ್ಲೂ, ಇತರ ಕೋಮುವಾದಿ ಕಾರ್ಯಸೂಚಿಯ ಜತೆಗೆ ರಾಜಾರೋಷವಾಗಿ ಶಿಕ್ಷಣದ ಕೇಸರೀಕರಣ ವ್ಯಾಪಕವಾಗಿ ಆಗಿರುವುದನ್ನು ಕಾಣಬಹುದು. 2014ರ ಮೇ ತಿಂಗಳಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಹಿಂದೂ ರಾಷ್ಟ್ರೀಯತೆಯ ಒಡಕಿನ ಕಾರ್ಯಸೂಚಿ ಗುಣಾತ್ಮಕವಾಗಿ ಮುನ್ನಡೆ ಪಡೆದಿರುವುದನ್ನು ಕಾರಟ್ ಅರ್ಥ ಮಾಡಿಕೊಳ್ಳಬಹುದು. 2014ರ ಮೇ ಬಳಿಕ ಈ ಕಾರ್ಯಸೂಚಿಯ ನಡಿಗೆ, ಉಸಿರುಗಟ್ಟಿಸುವಂತೆ ಮತ್ತು ಭೀತಿಪಡಿಸುವಂತಿದೆ. ಈ ಕೋಮು ರಾಜಕೀಯದ ತೀವ್ರತೆಯೇ ಗಣ್ಯ ನಾಗರಿಕರ ಪ್ರಶಸ್ತಿ ವಾಪಸಿ ಚಳವಳಿಗೆ ಮುಖ್ಯ ಕಾರಣ. 1977ರಲ್ಲಿ ಜನತಾ ಪಕ್ಷ ಸರಕಾರ ರೂಪುಗೊಂಡಾಗ, ಬಿಜೆಪಿ ಹಿಂದಿನ ಅವತಾರವಾದ ಜನಸಂಘದಿಂದ ಮೂವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕು. ಇಲ್ಲಿ ಸ್ಪಷ್ಟವಾಗಿ ಗೋಚರವಾಗುವ ಅಂಶವೆಂದರೆ, ಇಂಥ ವಿಧಾನಗಳ ಮೂಲಕ ಆರೆಸ್ಸೆಸ್ ಪದಾಧಿಕಾರಿಗಳು ಅಥವಾ ಆ ಸಂಘಟನೆ ಬಗ್ಗೆ ಒಲವು ಹೊಂದಿರುವವರು ಇತರ ಸಾಮಾಜಿಕ ಸಂಸ್ಥೆಗಳ ಜತೆಗೆ ಮಾಧ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ನುಸುಳಿ, ಹಿಂದೆಂದಿಗಿಂತಲೂ ಪ್ರಬಲರಾದರು.


2014ರ ಮೇ ತಿಂಗಳಿನಿಂದೀಚೆಗೆ ಹೇಗೆ ರಾಷ್ಟ್ರೀಯ ಮಹತ್ವದ ಸಂಸ್ಥೆಗಳನ್ನು, ಹೇಗೆ ಹಿಂದೂ ರಾಷ್ಟ್ರೀಯವಾದಿಗಳು ಅತಿಕ್ರಮಿಸಿಕೊಂಡರು ಎನ್ನುವುದನ್ನು ಕಾರಟ್ ಅರ್ಥ ಮಾಡಿ ಕೊಳ್ಳಬೇಕಿದೆ. ಉದಾಹರಣೆಗೆ ಎಫ್‌ಟಿಟಿಐ, ನ್ಯಾಶನಲ್ ಬುಕ್‌ಟ್ರಸ್ಟ್ ಇತ್ಯಾದಿ. ಗೋಮಾಂಸ ಸೇವನೆ, ಲವ್ ಜಿಹಾದ್ ಹಾಗೂ ಘರ್ ವಾಪಸಿ ಆಂದೋಲನಗಳನ್ನು ತೀವ್ರಗೊಳಿಸುವ ಪ್ರಯತ್ನ ನಡೆಯಿತು. ಪಠಾಣ್‌ಕೋಟ್ ದಾಳಿಯ ಮುನ್ನವೇ ಪಾಕ್ ವಿರೋಧಿ ಧೋರಣೆಯ ಸಮೂಹಸನ್ನಿ ತೀವ್ರತೆ ಪಡೆದಿತ್ತು.


ಕಾಮ್ರೇಡ್‌ಗಳು ಹೊಂದಿರುವ ವಿನೂತನ ಯೋಚನೆ ಸ್ವಾಗತಾರ್ಹ. ಆದರೆ ಇದಕ್ಕೆ ಪೂರಕವಾಗಿ ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಹೆಚ್ಚುವರಿ ಗುರಿಯನ್ನು ಕೂಡಾ ಹಾಕಿಕೊಳ್ಳಬೇಕಾಗುತ್ತದೆ. ಸಿಪಿಎಂ ಹಾಗೂ ಸಂಸತ್ತಿನಲ್ಲಿರುವ ಇತರ ಎಡಪಕ್ಷಗಳು, ಹಿಂದೆ ಎಡಪಕ್ಷಗಳು ಒಂದು ಸಂಘಟಿತ ಬಲವಾಗಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದವು ಎನ್ನುವ ವಾಸ್ತವವನ್ನು ನೆನಪಿಸಿಕೊಳ್ಳಬೇಕು. ಇವು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ಉಳಿಸಲು ಪ್ರಯತ್ನಿಸುವ ಜತೆಗೆ ಸರಕಾರದ ಹಲವು ನೀತಿಗಳ ಬಗ್ಗೆ ಪ್ರಭಾವ ಹೊಂದಲೂ ಶಕ್ತವಾಗಿದ್ದವು. ಇಂದು ಕೂಡಾ ರಾಜಕೀಯ ಪಕ್ಷಗಳಿಗೆ ಹೊರತಾದ ಜಾತ್ಯತೀತ ಗುಂಪುಗಳು ಹಾಗೂ ವ್ಯಕ್ತಿಗಳು ಕೋಮುವಿರೋಧಿ ಹೋರಾಟಕ್ಕೆ ಕೊಡುಗೆ ನೀಡಿದರು ಎನ್ನುವುದನ್ನು ಎಡಪಕ್ಷಗಳು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅದು ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವ ಕುರಿತ ಹೋರಾಟವಾಗಿರಬಹುದು ಅಥವಾ ಜಾತ್ಯತೀತತೆ ಅರ್ಥಮಾಡಿಕೊಳ್ಳಲು ಜನರನ್ನು ವಿಸ್ತೃತವಾಗಿ ತಲುಪುವ ವಿಚಾರವಾಗಿರಬಹುದು; ವೈವಿಧ್ಯತೆ ಹಾಗೂ ಬಹುತ್ವವನ್ನು ಉತ್ತೇಜಿಸುವ ಸಾಂಸ್ಕೃತಿಕ ಯೋಜನೆಗಳ ಮೂಲಕ ಕೋಮುವಾದದ ದಾಳಿಯ ವಿರುದ್ಧ ಪ್ರತಿರೋಧವನ್ನು ಬೆಳೆಸಲು ಮಹತ್ವದ ಕೊಡುಗೆ ನೀಡಿದವು. ಸಮಾಜದಲ್ಲಿ ಬಹುತ್ವ ಹಾಗೂ ಸಾಮರಸ್ಯವನ್ನು ಬೆಳೆಸುವ ಸಾಂಸ್ಕೃತಿಕ ಪ್ರಯತ್ನಗಳು, ಸಾಮಾಜಿಕ ಪ್ರಜ್ಞೆಯಲ್ಲಿ ಸೇರಿಕೋಂಡಿರುವ ಇಂಥ ವಿಭಜನವಾದಿ, ಏಕರೂಪತೆಯ ಮನೋಭಾವದ ವಿರುದ್ಧದ ಹೋರಾಟದ ಅವಿಭಾಜ್ಯ ಅಂಗವಾಗಬೇಕು. ತುಳಿತಕ್ಕೊಳಗಾದ ವರ್ಗಗಳ ಸಮಸ್ಯೆಗಳನ್ನು ತೆಗೆದುಕೊಳ್ಳುವಾಗ, ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು. ಮಹಿಳೆಯರ ಸಮಸ್ಯೆಗಳು, ಜಾತಿ, ಆದಿವಾಸಿಗಳು ಹಾಗೂ ಇತರ ದುರ್ಬಲ ವರ್ಗದವರ ಸಮಸ್ಯೆಗಳ ನಿವಾರಣೆಯ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುವುದು ಸ್ವಾಗತಾರ್ಹ. ಇದರ ಜತೆಗೆ ಎಡಪಕ್ಷಗಳು ಚುನಾವಣಾ ಕದನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕು. ಆಗ ಮಾತ್ರ ಹಿಂದೂ ರಾಷ್ಟ್ರೀಯತೆ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದವರ ವಿರುದ್ಧ ಹೋರಾಟ ನಡೆಸಬಹುದಾಗಿದೆ ಹಾಗೂ ಅವರ ಚುನಾವಣಾ ವಿಜಯಗಳು ಕೋಮು ವಾದ ವನ್ನು ಮತ್ತಷ್ಟು ಬಲಗೊಳಿಸುತ್ತವೆ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಅಂದರೆ ಎಡಪಕ್ಷಗಳು ಚುನಾವಣಾ ಮೈತ್ರಿ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಭಾರತೀಯತೆಯನ್ನು ಗುರಿಯಾಗಿ ಹೊಂದಿರುವ ಪಕ್ಷಗಳಲ್ಲಿ ಕೆಲ ಲೋಪಗಳು ಇದ್ದರೂ ಅವುಗಳನ್ನು ಬೆಂಬಲಿಸುವ ಅಥವಾ ಅವುಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ದೀರ್ಘಕಾಲ ದಿಂದಲೂ ಎಡಪಕ್ಷಗಳು ಈ ನಡೆಯಿಂದ ದೂರ ಸರಿದಿವೆ.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X