ಭಾರತೀಯ ಮೂಲದ ‘ಡಾಕ್ಟರ್‌ಡೆತ್’ ಬಂಧನ
ವಾಶಿಂಗ್ಟನ್, ಜ. 17: ‘ಡಾಕ್ಟರ್ ಡೆತ್’ ಎಂಬುದಾಗಿ ಪೊಲೀಸರು ಬಣ್ಣಿಸಿರುವ ಭಾರತೀಯ ಮೂಲದ ಮನಃಶಾಸ್ತ್ರ ವೈದ್ಯರೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅವರ ರೋಗಿಗಳ ಪೈಕಿ 36 ಮಂದಿ ಮೃತಪಟ್ಟಿದ್ದಾರೆ ಹಾಗೂ ಆ ಪೈಕಿ ಕನಿಷ್ಠ 12 ಮಂದಿ ಔಷಧದ ಪ್ರಮಾಣ ಅತಿಯಾಗಿ ಸಾವನ್ನಪ್ಪಿದ್ದಾರೆ.
ಜಾರ್ಜಿಯದ ಕ್ಲೇಟನ್ ಕೌಂಟಿಯ ಮನಃಶಾಸ್ತ್ರಜ್ಞ ನರೇಂದ್ರ ನಾಗರೆಡ್ಡಿಯನ್ನು ರೋಗಿಗಳಿಗೆ ಅತಿಯಾಗಿ ಔಷಧ ನೀಡುತ್ತಿದ್ದ ಸಂಶಯದಲ್ಲಿ ಬಂಧನದಲ್ಲಿಡಲಾಗಿದೆ.
ಸುಮಾರು 40 ಫೆಡರಲ್ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳು ನಾಗರೆಡ್ಡಿಯ ಕಚೇರಿಗಳ ಮೇಲೆ ದಾಳಿ ನಡೆಸಿದರು ಹಾಗೂ ಬಳಿಕ ಹೆಚ್ಚಿನ ದಾಖಲೆಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿ ಶೋಧ ನಡೆಸಿದ್ದರು.
‘‘ಅವರು ಜೋನ್ಸ್‌ಬೋರೊದ ಮನಃಶಾಸ್ತ್ರಜ್ಞರಾಗಿದ್ದು ತನ್ನ ರೋಗಿಗಳಿಗೆ ಒಪಿಯೇಟ್‌ಗಳು ಮತ್ತು ಬೆಂರೊಡಯಾಝೆಪೈನ್ ಗುಳಿಗೆಗಳನ್ನು ಅತಿಯಾಗಿ ನೀಡುತ್ತಿದ್ದರು. ಕಳೆದ ಹಲವು ವರ್ಷಗಳಲ್ಲಿ ಅತಿ ಔಷಧ ಸೇವನೆಯಿಂದಾಗಿ ಅವರ ಹಲವು ರೋಗಿಗಳು ಸಾವನ್ನಪ್ಪಿದ್ದಾರೆ’’ ಎಂದು ಕ್ಲೇಟನ್ ಕೌಂಟಿಯ ಪೊಲೀಸ್ ಮುಖ್ಯಸ್ಥ ಮೈಕ್ ರಿಜಿಸ್ಟರ್ ಹೇಳಿದರು.
ಮುಸ್ಲಿಮ್ ವಿದ್ಯಾರ್ಥಿಯ ಇಮೇಲ್ ಖಾತೆಯಿಂದ ಬಾಂಬ್ ಬೆದರಿಕೆ: ಇಬ್ಬರು ವಿದ್ಯಾರ್ಥಿಗಳ ಉಚ್ಚಾಟನೆ ವಾಶಿಂಗ್ಟನ್, ಜ. 17: ಮುಸ್ಲಿಮ್ ವಿದ್ಯಾರ್ಥಿಯೋರ್ವನ ಇಮೇಲ್ ಖಾತೆಯಿಂದ 600ಕ್ಕೂ ಅಧಿಕ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳಿಗೆ ‘‘ಬಾಂಬ್ ಬೆದರಿಕೆ’’ಯ ಇಮೇಲ್‌ಗಳನ್ನು ಕಳುಹಿಸಿದ ಆರೋಪದಲ್ಲಿ ಅಮೆರಿಕದ ಶಾಲೆಯೊಂದರಿಂದ ಇಬ್ಬರು ವಿದ್ಯಾರ್ಥಿಗಳನ್ನು ಉಚ್ಚಾಟಿಸಲಾಗಿದೆ.
ವಾಶಿಂಗ್ಟನ್ ಲ್ಯಾಟಿನ್ ಪಬ್ಲಿಕ್ ಚಾರ್ಟರ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು, ವಿಷಯದ ಸ್ಥಳದಲ್ಲಿ ‘ಬಾಂಬ್’ ಎಂದು ಬರೆದು ಇಮೇಲ್‌ಗಳನ್ನು ಕಳುಹಿಸಿದ್ದರು. ಮುಸ್ಲಿಮ್‌ವಿದ್ಯಾರ್ಥಿಯೋರ್ವನ ಖಾತೆಯಿಂದ ಇಮೇಲ್‌ಗಳನ್ನು ಕಳುಹಿಸಲಾಗಿತ್ತು.
ವಾಸ್ತವವಾಗಿ ಇಮೇಲ್‌ನ್ನು ಬರೆದವರು ಇಬ್ಬರು ಕಿಡಿಗೇಡಿ ವಿದ್ಯಾರ್ಥಿಗಳು ಎಂಬುದಾಗಿ ಶಾಲಾ ಅಧಿಕಾರಿಗಳನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಶಾಲೆಯಲ್ಲಿ ಸೀನಿಯರ್ ಹೈಸ್ಕೂಲ್ ವಿದ್ಯಾರ್ಥಿಗಳಾಗಿರುವ ಇಬ್ಬರನ್ನೂ ಹಿಂಸಾಚಾರದ ಬೆದರಿಕೆ ಹಾಕಿರುವುದಕ್ಕಾಗಿ ಉಚ್ಚಾಟಿಸಲಾಗಿದೆ ಎಂದು ಶಾಲೆಯ ಮುಖ್ಯಸ್ಥೆ ಮಾರ್ತಾ ಕಟ್ಸ್ ತಿಳಿಸಿದರು.







