ಅಂಚೆ ಇಲಾಖೆಯಿಂದ ಈ ವರ್ಷ ಮಾರ್ಚ್‌ನೊಳಗೆ 1 ಸಾವಿರ ಎಟಿಎಂ
ಹೊಸದಿಲ್ಲಿ, ಜ.17: ಅಂಚೆ ಇಲಾಖೆಯು, 1 ಸಾವಿರ ಎಟಿಎಂಗಳನ್ನು ಆರಂಭಿಸಿ ಈ ವರ್ಷದ ಮಾರ್ಚ್‌ನೊಳಗೆ ಎಲ್ಲ 25 ಸಾವಿರ ಇಲಾಖಾ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ತರಲು ಯೋಜನೆ ಹಾಕಿಕೊಂಡಿದೆ.
ಅದು ಈಗಾಗಲೇ 12,441 ಅಂಚೆ ಕಚೇರಿಗಳನ್ನು 300 ಎಟಿಎಂಗಳೊಂದಿಗೆ ಕೋರ್ ಬ್ಯಾಕಿಂಗ್ ವ್ಯವಸ್ಥೆಗೊಳಪಡಿಸಿ (ಸಿಬಿಎಸ್) ಚಾಲನೆ ನೀಡಲಾಗಿದೆಯೆಂದು ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷ ಮಾರ್ಚ್‌ನೊಳಗೆ ದೇಶಾದ್ಯಂತ 1ಸಾವಿರ ಎಟಿಎಂಗಳನ್ನು ಆರಂಭಿಸಲಾಗುವುದುದೆಂದು ಅವರು ಹೇಳಿದ್ದಾರೆ.
ಅಂಚೆ ಇಲಾಖೆಯು ದೇಶಾದ್ಯಂತ 25 ಸಾವಿರ ಇಲಾಖಾ ಅಂಚೆ ಕಚೇರಿಗಳು ಹಾಗೂ 1,,30,000 ಗ್ರಾಮೀಣ ಅಂಚೆ ಕಚೇರಿಗಳನ್ನು ಹೊಂದಿದೆ.
ಗ್ರಾಹಕರ ಖಾತೆಗಳು ಎಲ್ಲೇ ಇದ್ದರೂ, ಸಿಬಿಎಸ್ ಜಾಲದ ಯಾವುದೇ ಅಂಚೆ ಕಚೇರಿಯಿಂದ ತಮ್ಮ ಖಾತೆಗಳಲ್ಲಿ ವ್ಯವಹಾರ ನಡೆಸುವುದಕ್ಕೆ ಹಾಗೂ ಬ್ಯಾಂಕಿಂಗ್ ಸೇವೆಯನ್ನು ಪಡೆಯುವುದಕ್ಕೆ ಸಿಬಿಎಸ್ ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತದೆ.
ಎಲ್ಲ 1,30,000 ಗ್ರಾಮೀಣ ಅಂಚೆ ಕಚೇರಿಗಳಿಗೆ ಸೌರ ಶಕ್ತಿ ಚಾಲಿತ, ಬಯೊಮೆಟ್ರಿಕ್ ಕೈಯಲ್ಲಿ ಹಿಡಿಯುವ ಸಾಧನಗಳನ್ನು 2017ರ ಮಾರ್ಚ್‌ನೊಳಗೆ ಒದಗಿಸಲಾಗುವುದೆಂದು ಅಧಿಕಾರಿ ತಿಳಿಸಿದ್ದಾರೆ.
20 ಸಾವಿರ ಗ್ರಾಮೀಣ ಶಾಖಾ ಅಂಚೆ ಕಚೇರಿಗಳಿಗೆ ಈ ಉಪಕರಣಗಳ ಪೂರೈಕೆಯನ್ನು ಈ ವರ್ಷ ಮಾರ್ಚ್ 32ರೊಳಗೆ ಪೂರ್ಣಗೊಳಿಸಲಾಗುವುದು.
ಆರ್ಥಿಕ ಒಳಗೊಳಿಸುವಿಕೆಯನ್ನು ಉತ್ತೇಜಿಸುವುದಕ್ಕಾಗಿ ಅಂಚೆ ಇಲಾಖೆಯು 2017ರ ಮಾರ್ಚ್‌ನೊಳಗೆ ಪಾವತಿ ಬ್ಯಾಂಕ್‌ಗಳನ್ನು ಸ್ಥಾಪಿಸಲಿದೆ. ಈ ತಿಂಗಳ ಅಂತ್ಯದೊಳಗೆ ಪಾವತಿ ಬ್ಯಾಂಕ್‌ಗಳಿಗೆ ಸಮಾಲೋಚಕರನ್ನು ಅಂತಿಮಗೊಳಿಸಲಾಗುವುದೆಂದು ಅವರು ವಿವರಿಸಿದ್ದಾರೆ.





