ಸುರಿಬೈಲ್ ಉಸ್ತಾದ್‌ರ 14ನೆ ಅನುಸ್ಮರಣೆ

ಬಂಟ್ವಾಳ, ಜ. 17: ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆಯ ಶಿಲ್ಫಿ ಮರ್‌ಹೂಂ ಸುರಿಬೈಲ್ ಉಸ್ತಾದ್‌ರ 14ನೆ ಅನುಸ್ಮರಣೆ ಕಾರ್ಯಕ್ರಮ ರವಿವಾರ ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಡೆಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಎನ್.ಸುಲೈಮಾನ್ ಹಾಜಿ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಲೆಮಂಡೋವು ಉಸ್ತಾದ್ ಮಖ್‌ಬರ ಝಿಯಾರತ್‌ಗೆ ನೇತೃತ್ವ ವಹಿಸಿ ಮಾತನಾಡಿದರು. ಅಶ್-ಅರಿಯ್ಯಾದ ಪ್ರಾಂಶುಪಾಲ ಪಿ.ಎ. ಉಸ್ತಾದ್ ಜಲಾಲಿಯ್ಯ ರಾತೀಬ್‌ನ ನೇತೃತ್ವ ವಹಿಸಿದರು. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣಗೈದರು. ಈ ಸಂದರ್ಭದಲ್ಲಿ ಅಶ್-ಅರಿಯ್ಯಾ ವಿದ್ಯಾರ್ಥಿಗಳು ಹೊರತಂದ ಸ್ಮರಣ ಸಂಚಿಕೆಯನ್ನು ಪೇರೋಡ್ ಉಸ್ತಾದ್ ಬಿಡುಗಡೆಗೊಳಿಸಿದರು.
ಅಶ್-ಅರಿಯ್ಯ ಮುದರ್ರಿಸ್ ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್, ಮಾಜಿ ಮುದರ್ರಿಸ್ ಆದಂ ಅಹ್ಸನಿ, ಹಮೀದ್ ಮುಸ್ಲಿಯಾರ್ ಸೇರಾಜೆ, ಕೆ.ಕೆ. ಸಖಾಫಿ ಸುರಿಬೈಲ್, ಸುನ್ನಿ ಅಬೂಬಕರ್ ಫೈಝಿ, ಸಾಮಣಿಗೆ ಮದನಿ ಮೊದಲಾದವರು ಉಪಸ್ಥಿತರಿದರು. ಸಂಸ್ಥೆಯ ವ್ಯವಸ್ಥಾಪಕ ಸಿ.ಎಚ್.ಮುಹಮ್ಮದಾಲಿ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.





