ಪ್ರವಾದಿಯ ತ್ಯಾಗದಿಂದ ಇಸ್ಲಾಮ್ ನೆಲೆ ನಿಂತಿದೆ: ಎ.ಪಿ.ಉಸ್ತಾದ್

ಉಳ್ಳಾಲ, ಜ.17: ಪ್ರವಾದಿಯವರ ಕಾಲದಲ್ಲಿ ಇಸ್ಲಾಮ್ ಧರ್ಮ ಪ್ರಚಾರಕ್ಕೆ ಬಹಳಷ್ಟು ಅಡ್ಡಿ, ಆತಂಕ, ವಿರೋಧಗಳು ವ್ಯಕ್ತವಾಗಿತ್ತು. ಆದರೆ ಪ್ರವಾದಿಯವರು ಇಸ್ಲಾಮ್‌ನ ಬಗ್ಗೆ ಪ್ರಚಾರ ಮತ್ತು ಜನತೆಗೆ ಉಪದೇಶ ನೀಡುವುದನ್ನು ನಿಲ್ಲಿಸಿರಲಿಲ್ಲ. ಅವರ ಅಂದಿನ ಹೋರಾಟ, ತ್ಯಾಗದಿಂದ ಇಸ್ಲಾಮ್ ಲೋಕದಲ್ಲಿ ನೆಲೆನಿಂತಿದೆ ಎಂದು ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಎಸ್‌ವೈಎಸ್ ಫಲಾಹ್ ಮದನಿ ನಗರ ಕುತ್ತಾರ್ ಇದರ 23ನೆ ವಾರ್ಷಿಕೋತ್ಸವದ ಪ್ರಯುಕ್ತ ರವಿವಾರ ನಡೆದ ಸುನ್ನಿ ಸಮಾವೇಶದಲ್ಲಿ ಅವರು ಮುಖ್ಯಭಾಷಣ ಮಾಡುತ್ತಿದ್ದರು.
ಅಖಿಲ ಭಾರತ ಸುನ್ನಿ ಜಂಇಯ್ಯತ್ತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಆಲಿಕುಂಞಿ ಉಸ್ತಾದ್ ಶಿರಿಯ ದುಆ ನೆರವೇರಿಸಿದರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ, ದ.ಕ. ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು.
ವೇದಿಕೆಯಲ್ಲಿ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಮ್ ಮುಸ್ಲಿಯಾರ್, ಸೈಯದ್ ಮದನಿ ಅರೆಬಿಕ್ ಕಾಲೇಜ್‌ನ ಪ್ರೊ. ಚೆರುಕುಂಞಿ ತಂಙಳ್, ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್, ಅಸ್ಸೈಯದ್ ಜಲಾಲುದ್ದೀನ್ ತಂಙಳ್ ಉಜಿರೆ, ಸಚಿವ ಯು.ಟಿ. ಖಾದರ್, ಮದನಿ ನಗರ ಖತೀಬ್ ಸೈಯದ್ ಅಹ್ಮದ್ ಶರಫುದ್ದೀನ್ ಸಖಾಫಿ ಅಲ್‌ಹಾದಿ ತಂಙಳ್, ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ,ಯೆನೆಪೊಯ ವಿವಿ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಮ್. ರಶೀದ್ ಹಾಜಿ, ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ, ಝಿಯಾದ್ ತಂಙಳ್, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಅಶ್ರಫ್ ಸಅದಿ ಮಲ್ಲೂರು, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ, ಇಸ್ಹಾಕ್ ಝುಹ್‌ರಿ ದೇರಳಕಟ್ಟೆ, ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಕೊಟ್ಟಾರಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಸೋಮೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಉಚ್ಚಿಲ, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಏಷ್ಯನ್ ಬಾವ ಹಾಜಿ, ಎಸ್‌ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಜಿಪಂ ಸದಸ್ಯ ಎನ್. ಎಸ್. ಕರೀಂ, ಅಬ್ದುಲ್ ಅಝೀಝ್ ಹಾಜಿ ಉಪಸ್ಥಿತರಿದ್ದರು.
ಮದನಿ ನಗರ ಜುಮಾ ಮಸೀದಿಯ ಕಾರ್ಯದರ್ಶಿ ಎಂ.ಎಚ್. ಮಲಾರ್ ಸ್ವಾಗತಿಸಿದರು. ಅಹ್ಮದ್ ಪುತ್ತುಬಾವ ವಂದಿಸಿದರು.







