ಅಮಾನತುಗೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ನೇಣಿಗೆ ಶರಣು !

ಹೈದರಾಬಾದ್, ಜ.18: ಎಬಿವಿಪಿ ಮುಖಂಡನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಅಮಾನತುಗೊಂಡಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಹೈದರಾಬಾದ್‌ನ ಕೇಂದ್ರ ವಿವಿ ಕ್ಯಾಂಪಸ್‌ನಲ್ಲಿರುವ ಹಾಸ್ಟಲ್‌ನ ಕೋಣೆಯಲ್ಲಿ ವಿದ್ಯಾರ್ಥಿ ರೋಹಿತ್ ವೆಮುಲಾ (28) ಅವರ ಮೃತದೇಹ ರವಿವಾರ ರಾತ್ರಿ ಪತ್ತೆಯಾಗಿದೆ.
ರೋಹಿತ್ ಸೇರಿದಂತೆ ಹೈದರಾಬಾದ್ ಕೇಂದ್ರ ವಿವಿಯ ಐದು ವಿದ್ಯಾರ್ಥಿಗಳನ್ನು ಕಳೆದ ಆಗಸ್ಟ್‌ನಲ್ಲಿ ಎಬಿವಿಪಿ ಮುಖಂಡನಿಗೆ ಹಲ್ಲೆ ನಡೆಸಿದ್ದಾರೆಂಬ ಆರೋಪದಲ್ಲಿ ಅಮಾನತು ಮಾಡಲಾಗಿತ್ತು.
ವಿದ್ಯಾರ್ಥಿ ರೋಹಿತ್ ಸಾವಿನ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Next Story





