Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪೇಜಾವರ ಶ್ರೀಗಳಿಂದ ಇತಿಹಾಸದ ರಚನೆ...

ಪೇಜಾವರ ಶ್ರೀಗಳಿಂದ ಇತಿಹಾಸದ ರಚನೆ ದಾಖಲೆಯ 5ನೇ ಬಾರಿಗೆ ಪರ್ಯಾಯ ‘ಸರ್ವಜ್ಞ’ ಪೀಠಾರೋಹಣ

ವಾರ್ತಾಭಾರತಿವಾರ್ತಾಭಾರತಿ18 Jan 2016 1:45 PM IST
share
ಪೇಜಾವರ ಶ್ರೀಗಳಿಂದ ಇತಿಹಾಸದ ರಚನೆ ದಾಖಲೆಯ 5ನೇ ಬಾರಿಗೆ ಪರ್ಯಾಯ ‘ಸರ್ವಜ್ಞ’ ಪೀಠಾರೋಹಣ

ಉಡುಪಿ: ದ್ವೈತ ಮತ ಸಂಸ್ಥಾಪಕ ಮಧ್ವಾಚಾರ್ಯರಿಂದ ಸ್ಥಾಪನೆಗೊಂಡ ಉಡುಪಿ ಶ್ರೀಕೃಷ್ಣ ಮಠದ 800 ವರ್ಷಗಳ ಇತಿಹಾಸದಲ್ಲಿ 2016ನೇ ಜ.18ರ ಮುಂಜಾನೆ 5:45ರ ಸುಮಾರಿಗೆ ಹೊಸ ದಾಖಲೆಯೊಂದು ಸ್ಥಾಪನೆಗೊಂಡಿತು.

ದ್ವೆತಮತಸಂಸ್ಥಾಪಕಮ್ವಾಚಾರ್ಯರಿಂದ ಸ್ಥಾಪನೆಗೊಂಡ ಉಡುಪಿ ಶ್ರೀಕೃಷ್ಣ ಮಠದ 800 ವರ್ಷಗಳ ಇತಿಹಾಸದಲ್ಲಿ 2016ನೇ ಜ.18ರ ಮುಂಜಾನೆ 5:45ರ ಸುಮಾರಿಗೆ ಹೊಸ ದಾಖಲೆಯೊಂದು ಸ್ಥಾಪನೆಗೊಂಡಿತು. ಸೋದೆ ಮಠದ ಶ್ರೀವಾದಿರಾಜರು 1522ರಲ್ಲಿ ಅದುವರೆಗೆ ಎರಡು ತಿಂಗಳುಗಳ ಕಾಲ ನಡೆಯುತಿದ್ದ ಪರ್ಯಾಯ ವ್ಯವಸ್ಥೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಿದ ಬಳಿಕ ಇಲ್ಲಿ ಶ್ರೀಕೃಷ್ಣ ಪೂಜೆಗಾಗಿ ಪರ್ಯಾಯ ‘ಸರ್ವಜ್ಞ’ ಪೀಠವನ್ನೇರಿದ ಯಾವೊಬ್ಬ ಯತಿಯೂ ಇದುವರೆಗೆ ಐದು ಬಾರಿ ಪೀಠಾರೋಣ ಮಾಡಿದ್ದಿಲ್ಲ.

ಆದರೆ ಇಂದು ಬೆಳಗ್ಗೆ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಐದನೇ ಬಾರಿಗೆ ಈ ಪೀಠವನ್ನು ಅಲಂಕರಿಸುವ ಮೂಲಕ ಹೊಸ ಇತಿಹಾಸವನ್ನು ಬರೆದರು.

ಕಳೆದೆರಡು ವರ್ಷಗಳಿಂದ ಪರ್ಯಾಯ ಪೀಠದಲ್ಲಿದ್ದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು 84ರ ಹರೆಯದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ಇಂದು ಬೆಳಗ್ಗೆ ಅಧಿಕಾರ ಹಸ್ತಾಂತರದ ಪ್ರತೀಕವಾದ ಅಕ್ಷಯಪಾತ್ರೆ ಹಾಗೂ ಸಟ್ಟುಗವನ್ನು ನೀಡುವ ಮೂಲಕ ಇನ್ನೆರಡು ವರ್ಷಗಳ ಅವಧಿಗೆ ಶ್ರೀಕೃಷ್ಣ ಪೂಜೆಯ ಅಧಿಕಾರವನ್ನು ಹಸ್ತಾಂತರಿಸಿದರು.

ಬಳಿಕ ಪರ್ಯಾಯದ ಉಳಿದ ಸಂಪ್ರದಾಯಗಳು ನಡೆದ ಬಳಿಕ ರಾಜಾಂಗಣದ ಹಿಂಭಾಗದ ವಾಹನಪಾರ್ಕಿಂಗ್ ಸ್ಥಳದಲ್ಲಿ ನಿರ್ಮಿಸಲಾದ ಬೃಹತ್ ಆನಂದತೀರ್ಥ ಮಂಟಪದಲ್ಲಿ ಪರ್ಯಾಯ ದರ್ಬಾರ್ ಸಭೆ ನಡೆಯಿತು.

ರವಿವಾರ ಮಧ್ಯರಾತ್ರಿ ಕಳೆದ ಬಳಿಕ 1:10ರ ಸುಮಾರಿಗೆ ಪೇಜಾವರ ಹಿರಿಯ ಮಠಾಧೀಶರು, ತಮ್ಮ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ಕಾಪು ದಂಡತೀರ್ಥಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿ ಬಂದರು. ಅಲ್ಲಿಂದ ಉಡುಪಿಯ ಜೋಡುಕಟ್ಟೆಗೆ ಆಗಮಿಸಿದಾಗ, ಜೋಡುಕಟ್ಟೆ ಮಂಟಪದ ಬಳಿ ಉಳಿದ ಅಷ್ಟಮಠಗಳ ಯತಿಗಳನ್ನು ಅವರನ್ನು ಎದುರುಗೊಂಡು ಭವ್ಯ ಮೆರವಣಿಗೆಯಲ್ಲಿ ರಥಬೀದಿಗೆ ಕರೆದುಕೊಂಡು ಬರಲಾಯಿತು.

ಈ ಬಾರಿಯ ಮೆರವಣಿಗೆ ಅತ್ಯಂತ ವೈಭವಯುತವಾಗಿ ನಡೆಯಿತು. ಮೆರವಣಿಗೆಯಲ್ಲಿ ಕಾಣಿಯೂರು ಮಠಾಧೀಶರನ್ನು ಹೊರತು ಪಡಿಸಿ, ಪುತ್ತಿಗೆ ಹಾಗೂ ಅದಮಾರು ಹಿರಿಯ ಯತಿಗಳು ಭಾಗವಹಿಸಿರಲಿಲ್ಲ.
ಪೇಜಾವರ ಹಿರಿಯ ಮತ್ತು ಕಿರಿಯ, ಕೃಷ್ಣಾಪುರ ಹಾಗೂ ಪಲಿಮಾರು ಮಠಾಧೀಶರು ವಾಹನಗಳಲ್ಲಿರಿಸಿದ ಮೇನೆಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿಬಂದರೆ, ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಿಂಗರಿಸಿದ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯನ್ನಿರಿಸಿದರೆ, ತಾನು ರಥದ ಮಾದರಿಯ ವಾಹನದಲ್ಲಿ ಕುಳಿತು ಭಾಗವಹಿಸಿದರು.

ಆದರೆ ಸೋದೆ ಹಾಗೂ ಅದಮಾರು ಕಿರಿಯ ಮಠಾಧೀಶರು ಮತ್ತೆ ಹಿಂದಿದ್ದಂತೆ ಮಾನವ ಹೊತ್ತ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯೊಂದಿಗೆ ಸಾಗಿ ಬಂದರು.
ಮೆರವಣಿಗೆ ರಥಬೀದಿಗೆ ಬಂದ ಬಳಿಕ ವಾಹನಗಳಿಂದ ಇಳಿದ ಪೇಜಾವರ ಶ್ರೀಗಳು, ಉಳಿದ ಯತಿಗಳೊಂದಿಗೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಪಡೆದರಲ್ಲದೇ ಶ್ರೀಚಂದ್ರವೌಳೀಶ್ವರ ಹಾಗೂ ಅನಂತೇಶ್ವರನ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಅವರು ಶ್ರೀಕೃಷ್ಣ ಮಠ ಪ್ರವೇಶಿಸಿದರು.ಪ್ರವೇಶ ದ್ವಾರದಲ್ಲಿ ಹಾಲಿ ಪರ್ಯಾಯ ಪೀಠಾಧಿಪತಿ ಕಾಣಿಯೂರು ಶ್ರೀಗಳು ಅವರನ್ನು ಸ್ವಾಗತಿಸಿ ಒಳಗೆ ಕರೆದೊಯ್ದರು.


 ಇಬ್ಬರೂ ಗರ್ಭಗುಡಿಯೊಳಗೆ ಹೋಗಿ ದೇವರ ದರ್ಶನ ಮಾಡಿದ ಬಳಿಕ ನಿರ್ಗಮನ ಪೀಠಾಧೀಶರು, ಆಗಮನ ಪೀಠಾಧೀಶರನ್ನು ಕೈಹಿಡಿದು ಸಿಂಹಾಸನದ ಬಳಿ ಕರೆದೊಯ್ದು ಅವರನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿದರೆ ಅಲ್ಲಿಗೆ ಒಂದು ಹಂತ ಮುಗಿಯಿತು. ಬಳಿಕ ಆಚಾರ್ಯ ಮದ್ವರ ಪ್ರತಿಮೆ ಎದುರು ಅಕ್ಷಯಪಾತ್ರೆ ಹಾಗೂ ಸೆಟ್ಟುಗವನ್ನು ಕಾಣಿಯೂರು ಶ್ರೀಗಳು, ಪೇಜಾವರ ಶ್ರೀಗಳಿಗೆ ಹಸ್ತಾಂತರಿಸಿದರು.

ಅಲ್ಲಿಂದ ಇಬ್ಬರೂ ಬಡಗುಮಳಿಗೆಗೆ ಬಂದು ಅರಳಿನ ಎಲ್ಲಾ ಸ್ವಾಮೀಜಿಗಳಿಗೆ ಗಂಧಾದ್ಯುಪಚಾರ ನಡೆಯಿತು.
 ಬಳಿಕ ನೂತನ ಪರ್ಯಾಯ ಪೀಠಾರೋಹಣ ಮಾಡಿದ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಷ್ಟಮಠಗಳ ಸ್ವಾಮೀಜಿಗಳು ದರ್ಬಾರ್ ಸಭಾಂಗಣಕ್ಕೆ ಬಂದು ಅಲ್ಲಿ ಆಗಲೇ ಸೇರಿದ್ದ ದೇಶದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ದರ್ಬಾರ್ ಸಭೆ ನಡೆಯಿತು.
 

ಇಂದಿನ ದರ್ಬಾರ್ ಸಭೆಯಲ್ಲಿ ಎಂಟು ಮಂದಿ ಸ್ವಾಮೀಜಿಗಳು ಉಪಸ್ಥಿತರಿದ್ದು, ಎಂದಿನಂತೆ ಪುತ್ತಿಗೆ ಹಾಗೂ ಅದಮಾರು ಮಠಾಧೀಶರು ಸಭೆಗೆ ಗೈರುಹಾಜರಾಗಿದ್ದರು. ಸಭೆಯಲ್ಲಿ ಗಣ್ಯರು, ದಾನಿಗಳಿಗೆ ಸನ್ಮಾನ, ನೂತನ ಪೇಜಾವರ ಮಠದ ಅಧಿಕಾರ ವರ್ಗದ ಘೋಷಣೆ ನಡೆಯಿತು.

ಸಭೆಯಲ್ಲಿ ದೇಶದ ಮಾಜಿ ಉಪಪ್ರದಾನಿ ಲಾಲ್‌ಕೃಷ್ಣ ಅಧ್ವಾನಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಸ್ಕರ್ ಫೆರ್ನಾಂಡೀಸ್, ಕೇಂದ್ರ ಸಚಿವರಾದ ಉಮಾ ಭಾರತಿ, ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸಚಿವರಾದ ಆರ್.ವಿ.ದೇಶಪಾಂಡೆ, ಎ.ಮಂಜು ಎಚ್.ಕೆ.ಪಾಟೀಲ್, ವಿನಯಕುಮಾರ್ ಸೊರಕೆ, ಅಭಯಚಂದ್ಞರ ಜೈನ್,ಎ.ಮಂಜು, ಪ್ರಹ್ಲಾದ್ ಜೋಶಿ, ಸಿಎಂ ಇಬ್ರಾಹಿಂ ಅಲ್ಲದೇ ನಿವೃತ್ತ ಹಿರಿಯ ಪೋಲೀಸ್ ಅಧಿಕಾರಿಗಳು, ನ್ಯಾಯಾಧೀಶರು ಪಾಲ್ಗೊಂಡಿದ್ದರು.
 

ಗಣ್ಯರಿಗೆ ಹಾಗೂ ದಾನಿಗಳಿಗೆ ಪೇಜಾವರ ಮಠದ ವತಿಯಿಂದ ಸ್ವಾಮೀಜಿ ಸನ್ಮಾನಿಸಲಾಯಿತು. ಡಾ.ಪ್ರಹ್ಲಾದ್ ರಾಮರಾವ್ ಅವರಿಗೆ ವಿಜ್ಞಾನ ರತ್ನ’ ಹಾಗೂ ಅಶೀಶ್ ಗೌತಮ್ ಜೀ ಅವರಿಗೆ ‘ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X