ಎಐಐಬಿ ಆಡಳಿತ ಮಂಡಳಿಗೆ ಭಾರತ ಆಯ್ಕೆ

ಬೀಜಿಂಗ್, ಜ.18: ಚೀನಾ ನೇತೃತ್ವದಲ್ಲಿ 10 ಸಾವಿರ ಕೋಟಿ ಡಾಲರ್ ಮೊತ್ತದಲ್ಲಿ ಸ್ಥಾಪನೆಯಾಗಿರುವ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ನ(ಎಐಐಬಿ) 12 ಮಂದಿ ಸದಸ್ಯರ ನೂತನ ಆಡಳಿತ ಮಂಡಳಿಗೆ ಭಾರತ ಆಯ್ಕೆಯಾಗಿದೆ.
ಭಾರತದ ಹಣಕಾಸು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ದಿನೇಶ್ ಶರ್ಮ ಶನಿವಾರ ನಡೆದ ಗುಪ್ತ ಮತದಾನದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.
ರವಿವಾರ ನಡೆದ ವಿಶೇಷ ಸಮಾರಂಭದಲ್ಲಿ ಬ್ಯಾಂಕ್‌ಗೆ ಚಾಲನೆ ನೀಡಲಾಗಿತ್ತು. ಬ್ಯಾಂಕಿನಲ್ಲಿ ಒಟ್ಟು 57 ಮಂದಿ ಸ್ಥಾಪಕ ಸದಸ್ಯರಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಬ್ಯಾಂಕಿನ ಗವರ್ನರ್ ಆಗಿರುತ್ತಾರೆ. ಇವರ ಜೊತೆ ಇನ್ನು ಮುಂದೆ ಆಡಳಿತ ಮಂಡಳಿಯ ಸಭೆಗಳಲ್ಲಿ ದಿನೇಶ್ ಶರ್ಮ ಭಾಗವಹಿಸಲಿದ್ದಾರೆ.
Next Story





