ಜ. 24: ವಿಟ್ಲ ಫ್ರೆಂಡ್ಸ್ ಅಳಕೆಮಜಲು ವತಿಯಿಂದ ಕ್ರಿಕೆಟ್ ಪಂದ್ಯಾಟ
ವಿಟ್ಲ : ಫ್ರೆಂಡ್ಸ್ ಅಳಕೆಮಜಲು ಇದರ ಆಶ್ರಯದಲ್ಲಿ 7 ಜನರ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟವು ಜ. 24 ರಂದು ಇಲ್ಲಿನ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪಂದ್ಯಾಟವನ್ನು ಪತ್ರಕರ್ತ ಲತೀಫ್ ನೇರಳಕಟ್ಟೆ ಉದ್ಘಾಟಿಸಲಿದ್ದು, ಅಶ್ರಫ್ ಕೆಜಿಎನ್ ಅಧ್ಯಕ್ಷತೆ ವಹಿಸುವರು.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಬಹುಮಾನ ವಿತರಿಸುವರು.
ವಿಜೇತ ತಂಡಗಳಿಗೆ ಪ್ರಥಮ ರೂ. 5,016/-, ದ್ವಿತೀಯ ರೂ. 3,016/- ಹಾಗೂ ಶಾಶ್ವತ ಫಲಕ ಮತ್ತು ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9740402424 ಅಥವಾ 7760717108 ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





