Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕೋಮುಶಕ್ತಿಗಳ ವಿರುದ್ಧ ಕೆಚ್ಚೆದೆಯ ಹೋರಾಟ...

ಕೋಮುಶಕ್ತಿಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸುತ್ತಿರುವ ತೀಸ್ತಾ ಸೆಟಲ್ವಾಡ್

ಗುಲಾಬಿ ಬಿಳಿಮಲೆಗುಲಾಬಿ ಬಿಳಿಮಲೆ18 Jan 2016 4:12 PM IST
share
ಕೋಮುಶಕ್ತಿಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸುತ್ತಿರುವ ತೀಸ್ತಾ ಸೆಟಲ್ವಾಡ್

2002 ರ ಗುಜರಾತ್ ನರಮೇಧ ವಿಷಯ ಪ್ರಸ್ತಾಪವಾದಾಗಲೆಲ್ಲ ಉಲ್ಲೇಖವಾಗುವ ಮತ್ತು ನೆನಪಾಗುವ ಅನೇಕ ಹೆಸರುಗಳಲ್ಲಿ ತೀಸ್ತಾ ಸೆಟಲ್ವಾಡ್ರದ್ದೂ ಒಂದು. ಆ ಗಲಭೆಯ ಸಂಬಂಧ ಉಲ್ಲೇಖವಾಗುವ ಬಹುತೇಕ ಹೆಸರುಗಳು ಗಲಭೆಯಲ್ಲಿ ಪಾಲ್ಗೊಂಡ ಅಥವಾ ಅದಕ್ಕೆ ಪ್ರಚೋದನೆ ನೀಡಿದ, ಅಪರಾಧಿಗಳಿಗೆ ರಕ್ಷಣೆ ನೀಡಿದ ನಕಾರಾತ್ಮಕ ಕಾರಣಗಳಿಗಾಗಿಯಾದರೆ ತೀಸ್ತಾರ ಹೆಸರು ಉಲ್ಲೇಖವಾಗುವುದು ಸಕಾರಾತ್ಮಕ ಕಾರಣಗಳಿಗಾಗಿ. ಗುಜರಾತ್ ಗಲಭೆಯಲ್ಲಿ ಸಂತ್ರಸ್ತರಾದ ಧ್ವನಿರಹಿತರಿಗೆ ನ್ಯಾಯ ಒದಗಿಸಲು ಬಲಾಢ್ಯರಲ್ಲಿ ಬಲಾಢ್ಯರನ್ನು ಎದುರು ಹಾಕಿಕೊಂಡು ನ್ಯಾಯಾಲಯದ ಬಾಗಿಲು ತಟ್ಟಿ ಬಾಬು ಬಜರಂಗಿ, ಮಾಯಾ ಕೊಡ್ನಾನಿಯಂತಹ ಅತ್ಯಂತ ಪ್ರಭಾವಿಗಳೂ ಸೇರಿದಂತೆ ೧೧೭ಕ್ಕೂ ಅಧಿಕ ಮಂದಿ  ಸೆರೆಮನೆ ಸೇರುವಂತೆ ಮಾಡಿರುವುದಕ್ಕಾಗಿ. ಸರ್ವರೀತಿಯ ಸಂಪನ್ಮೂಲಗಳನ್ನು ಹೊಂದಿರುವ ಬಲಾಢ್ಯ ಪ್ರಭುತ್ವವೊಂದರ ವಿರುದ್ಧ ಪ್ರಜ್ಞಾವಂತ ಕೆಲವೇ ಮಂದಿಯ ಬೆಂಬಲ ಹೊರತುಪಡಿಸಿದರೆ ಏನೇನೂ ಶಕ್ತಿಯಿಲ್ಲದ ಸಣ್ಣ ಸಂಘಟನೆಯೊಂದು ಕಾನೂನು ಹೋರಾಟ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಊಹಿಸಿಕೊಂಡರೂ ಸಾಕು, ತೀಸ್ತಾ ಮಾಡಿದ ಸಾಧನೆಯ ಮಹತ್ತ್ವ ನಮಗೆ ಅರಿವಾಗುತ್ತದೆ.

ಗುಜರಾತಿ ಹೆಣ್ಣುಮಗಳು ತೀಸ್ತಾ ಹುಟ್ಟಿದ್ದು ಮುಂಬಯಿಯಲ್ಲಿ. ಓದಿದ್ದು ತತ್ತ್ವಶಾಸ್ತ್ರ (ಮುಂಬೈ ವಿಶ್ವವಿದ್ಯಾಲಯ, ೧೯೮೩). ಆರಿಸಿಕೊಂಡದ್ದು ಸಮಾಜಸೇವೆ. ಅಪ್ಪ ಅತುಲ್ ಸೆತಲ್‌ವಾಡ್ ವೃತ್ತಿಯಲ್ಲಿ ವಕೀಲ. ಅಜ್ಜ ಎಂ ಸಿ ಸೆತಲ್‌ವಾಡ್ ಸ್ವತಂತ್ರ ಭಾರತದ ಮೊಟ್ಟ ಮೊದಲ ಅಟಾರ್ನಿ ಜನರಲ್. ಆಕೆಯ ಮೇಲೆ ಅಪಾರ ಪ್ರಭಾವ ಬೀರಿ ಆಕೆಯ ವ್ಯಕ್ತಿತ್ವವನ್ನು ತಿದ್ದಿ ತೀಡಿ ಆಕೆಯನ್ನು ದಿಟ್ಟೆಯಾಗಿ ಬೆಳೆಸಿದ್ದು ತಾಯಿ ಸೀತಾ ಸೆಟಲ್ವಾಡ್.

ಮುಂಬಯಿಯಲ್ಲೇ ಹುಟ್ಟಿಬೆಳೆದ, ತೀಸ್ತಾಗೆ ಚಿಕ್ಕಂದಿನಿಂದಲೂ ಓದುವ ಹುಚ್ಚು. ಹೊಸತೇನನ್ನಾದರೂ ಸಾಧಿಸಬೇಕೆಂಬ ಹುಮ್ಮಸ್ಸು. ಸಮಾಜದಲ್ಲಿ ಬದಲಾವಣೆ ತರಬೇಕೆನ್ನುವ ತುಡಿತದಿಂದಾಗಿಯೇ ಆಕೆ ಮೊದಲು ಕಾಲಿಟ್ಟದ್ದು ಪತ್ರಿಕೋದ್ಯಮಕ್ಕೆ. ‘ದ ಡೈಲಿ’ (ಇಂಡಿಯಾ), ‘ಇಂಡಿಯನ್ ಎಕ್ಸ್‌ಪ್ರೆಸ್’ ದೈನಿಕಗಳಲ್ಲಿ ದುಡಿದ ಅವರಿಗೆ ಸಮಾಜದ ವಿವಿಧ ಮಗ್ಗುಲುಗಳ ಪರಿಚಯವಾದದ್ದು ಇಲ್ಲೇ. ಸಮಾಜದ ನೈಜ ಸಮಸ್ಯೆಗಳನ್ನು ಬಿಂಬಿಸಲು, ಅವುಗಳಿಗೆ ಪರಿಹಾರ ಹುಡುಕಲು ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿದ್ದು ಮಾಡುತ್ತಿರುವುದು ಸಾಲದೇನೋ ಎಂಬ ಭಾವ ಆಗಾಗ ಕಾಡುತ್ತಿತ್ತು. ಹಾಗೆ ಕಾಡುತ್ತಿದ್ದ ಈ ಭಾವನೆ ಗಟ್ಟಿಯಾದದ್ದು ‘ಬಿಸಿನೆಸ್ ಇಂಡಿಯಾ’ ನಿಯತಕಾಲಿಕದಲ್ಲಿ ಕೆಲಸ ಮಾಡುತ್ತಿದ್ದಾಗ. ಅಪರಾಧವೆಂಬುದು ಜಾತಿಯಿಂದ ಜಾತಿಗೆ ಬದಲಾಗದು. ಅದು ಜಾತಿ ಆಧಾರಿತವಲ್ಲ. ಅಪರಾಧವೆಂದರೆ ಅಪರಾಧ ಮಾತ್ರ. ಅದಕ್ಕೆ ಜಾತಿ, ಲಿಂಗತ್ವಗಳ ಸಂಬಂಧವಿಲ್ಲ ಎಂಬುದು ಅವರ ಗಟ್ಟಿ ನಂಬುಗೆ.

1992ರಲ್ಲಿ ನಡೆದ ಕೋಮುಗಲಭೆ ಅವರನ್ನು ಸಂಪೂರ್ಣ ಅಲುಗಾಡಿಸಿಬಿಟ್ಟಿತು. ಬದಲಾವಣೆಗೆ ಬರಹವಷ್ಟೇ ಸಾಲದೇನೋ ಎನ್ನಿಸಿದ ತಕ್ಷಣ ಮುಖ್ಯವಾಹಿನಿ ಪತ್ರಿಕೋದ್ಯಮದಿಂದ ಹೊರಬಂದರು. ಸಾಮಾಜಿಕ ಕಾರ್ಯಕರ್ತೆಯಾಗಿ ಪರಿವರ್ತನೆಯಾದರು. ಸಮಾಜದ ಪರಿವರ್ತನೆಗಾಗಿ ಬದ್ಧತೆಯಿಂದ ಮತ್ತು ಸಮರ್ಪಣಾಭಾವದಿಂದ ದುಡಿಯತೊಡಗಿದರು. ಸಹೋದ್ಯೋಗಿ ಜಾವೆದ್ ಅನಂದ್ ಜತೆ ಸೇರಿ ಕೋಮುವಾದದ ವಿಷಯಗಳ ವಿಶ್ಲೇಷಣೆ, ಅಧ್ಯಯನಶೀಲ ಬರಹಗಳು ಮತ್ತುಅಭಿವೃದ್ಧಿಪರ ವಿಷಯಗಳ ವಕಾಲತ್ತು ನಡೆಸುವ ಸಲುವಾಗಿ 'ಕಮ್ಯುನಲ್ ಕಾಂಬ್ಯಾಟ್' ಪತ್ರಿಕೆ ಆರಂಭಿಸಿದರು.

ತೀಸ್ತಾ ಅವರ ಸಮಾಜಸೇವೆ, ಹೋರಾಟಗಳಲ್ಲಿ ಸಮಾನ ಆಸಕ್ತಿಯನ್ನು ಹಂಚಿಕೊಂಡು ಸಹೋದ್ಯೋಗಿಯಾಗಿದ್ದ ಜಾವೇದ್ ಆನಂದ್ ಮುಂದೆ ಅವರ ಬಾಳಸಂಗಾತಿಯೂ ಆದರು. ಈ ಸಂಗಮದಿಂದ ಮಾನವಹಕ್ಕುಗಳ ರಕ್ಷಣೆಗಾಗಿ ಇವರ ಹೋರಾಟ ಇನ್ನಷ್ಟು ಚುರುಕು ಪಡೆದುಕೊಂಡಿತು. ಅದಕ್ಕಾಗಿ 'ಸಬರಂಗ್ ಟ್ರಸ್ಟ್' ಮತ್ತು 'ಸಿಟಿಜನ್ಸ್ ಫಾರ್ ಜಸ್ಟಿಸ್ ಆಂಡ್ ಪೀಸ್' ಸಂಸ್ಥೆಗಳನ್ನು ಕಟ್ಟಿದರು.

ಕೋಮುವಾದದ ವಿರುದ್ಧದ ಈ ಹೋರಾಟದಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಳ್ಳುವಾಗ ಎದುರಾಗಬಹುದಾದ ಅಪಾಯಗಳ ಸಂಪೂರ್ಣ ಅರಿವಿದ್ದರೂ ಅವರು ತಮ್ಮ ನಿಲುವಿನಿಂದ ಎಂದೂ ಹಿಂದೆ ಸರಿಯಲಿಲ್ಲ. ಗುಲ್ಬರ್ಗ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಸ್ಥಳದಲ್ಲಿ ನಡೆದ ಭೀಕರ ನರಮೇಧದಲ್ಲಿ ನೊಂದವರ ಕುಟುಂಬಗಳಿಗೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಹಗಲು ರಾತ್ರಿಯೆನ್ನದೆ ದುಡಿಯತೊಡಗಿದರು.

ನರಮೇಧ ನಡೆದು ನೂರಾರು ಅಮಾಯಕ ಜೀವಗಳು ಬೆಂಕಿಗೆ ಆಹುತಿಯಾದ ಗುಲ್ಬರ್ಗ್ ಸೊಸೈಟಿಯ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಸಬರಂಗ್ ಮತ್ತು ಸಿಜೆಪಿ ನಿರ್ಧರಿಸಿದ್ದವು. ಈ ಸಂಬಂಧ ದೇಣಿಗೆ ಹಣ ಸಂಗ್ರಹಕ್ಕಾಗಿ ವಿವಿಧ ಮಾರ್ಗೋಪಾಯಗಳನ್ನು ಕೈಗೊಂಡಿದ್ದವು. ಇದರ ಅಂಗವಾಗಿಯೇ ಮುಂಬಯಿಯಲ್ಲಿ ‘ಆರ್ಟ್ ಫಾರ್ ಹ್ಯುಮಾನಿಟಿ’ ಹೆಸರಿನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು ೮೦ ಪ್ರಖ್ಯಾತ ಕಲಾವಿದರು ತಮ್ಮ ಕಲಾಕೃತಿಗಳನ್ನು ದೇಣಿಗೆ ನೀಡಿದರು. ಎಲ್ಲ ಕಲಾ ಕೃತಿಗಳು ಮಾರಾಟವಾಗಿ ಕೋಟಿ ರೂಪಾಯಿಗಳಿಗೂ ಹೆಚ್ಚು ದೇಣಿಗೆ ಸಂಗ್ರಹವಾಯಿತು.

ತೀಸ್ತಾರ ಮಾನವೀಯ ಕೆಲಸವನ್ನು ಗುರುತಿಸಿ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ‘ಪದ್ಮಶ್ರೀ’ಯಿಂದ ಹಿಡಿದು ‘ನ್ಯೂಮರ್ ಬರ್ಗ್ ಹ್ಯೂಮನ್ ರೈಟ್ ಅವಾರ್ಡ್’ವರೆಗೆ, ‘ಪ್ರಾಕ್ಸ್‌ಕ್ರಿಸ್ಟಿ ಪೀಸ್ ಅವಾರ್ಡ್’ ಸೇರಿದಂತೆ ನೂರಾರು ಪ್ರಶಸ್ತಿಗಳ ಗರಿ ಅವರ ಮುಡಿಯೇರಿದವು.

ಗುಲ್ಬರ್ಗ್ ಸೊಸೈಟಿ ನರಮೇಧ ಪ್ರಕರಣದಲ್ಲಿ ತೀಸ್ತಾ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಹೋರಾಟ ನಡೆಸುತ್ತಿದ್ದು, ಇದರ ಪರಿಣಾಮವನ್ನು ತಾನು ಎದುರಿಸಬೇಕಾಗುತ್ತದೆ ಎಂಬುದು ಅವರಿಗೆ ಅರಿವಿತ್ತು. 'ನನ್ನನ್ನು ಉಳಿಯಗೊಡುವುದಿಲ್ಲ, ಮೋದಿ ಪ್ರಧಾನಿಯಾದರೆ ವಕೀಲೆಯಾಗಿ, ಮಾನವಹಕ್ಕುಗಳ ಹೋರಾಟ ಗಾರ್ತಿಯಾಗಿ ನನ್ನ ಕತೆ ಮುಗಿದಂತೆಯೇ' ಎಂದು ಮಾಧ್ಯಮಗಳು, ಆತ್ಮೀಯರಲ್ಲಿ ಹಲವು ಬಾರಿ ಅಳಲು, ಆತಂಕ ತೋಡಿ ಕೊಂಡಿದ್ದರು.ಇದಕ್ಕೆ ಪೂರಕವೆಂಬಂತೆ ಮೋದಿ ಪ್ರಧಾನಿಯಾಗುತ್ತಲೇ ತೀಸ್ತಾರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸುವ ತಂತ್ರಗಳು ಚಾಲನೆ ಪಡೆದವು. ಇದರ ಭಾಗವಾಗಿಯೇ ಕೋಮುಗಲಭೆಯ ಸ್ಮರಣಿಕೆಗಳ ವಸ್ತು ಸಂಗ್ರಹಾಲಯ ಸ್ಥಾಪಿಸುವ ಉದ್ದೇಶದಿಂದ ಸಂಗ್ರಹಿಸಿದ್ದ ಹಣವನ್ನು ತೀಸ್ತಾ ವಿಮಾನ ಹಾರಾಟ, ವಿದೇಶ ಪ್ರವಾಸ ಮತ್ತು ಐಷಾರಾಮಿ ವಸ್ತುಗಳ ಖರೀದಿಗೆ ದುರುಪಯೋಗಪಡಿಸಿ ಕೊಂಡಿದ್ದಾರೆ ಎಂದು ಆರೋಪಿಸಿ ಆಕೆಯ ಮೇಲೆ ಮೊಕದ್ದಮೆ ಹೂಡಲಾಯಿತು. ಇದಕ್ಕೆ ತೀಸ್ತಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಉಪಾಯವಾಗಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ತೀಸ್ತಾ ಕೊಟ್ಟ ವಿವರಣೆಗಳನ್ನು, ಸಾಕ್ಷ್ಯಾಧಾರಗಳನ್ನು ಪರಿಗಣಿಸದ ಗುಜರಾತ್ ಹೈಕೋರ್ಟ್ ಆಕೆಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತ್ತು. ಹೀಗೆ ನಿರಾಕರಿಸಿದ ಕೆಲವೇ ನಿಮಿಷಗಳಲ್ಲಿ ಆಕೆಯನ್ನು ಬಂಧಿಸಲು ಗುಜರಾತ್ ಪೊಲೀಸರು ಆಕೆಯ ಮುಂಬೈ ನಿವಾಸಕ್ಕೆ ದಾಳಿ ಎಂದಾದರೆ ಗುಜರಾತ್ ಸರಕಾರ ಆಕೆಯನ್ನು ಶತಾಯಗತಾಯ ಬಲಿಪಶು ಮಾಡಲು ಎಷ್ಟೊಂದು ಆತುರ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ತೀಸ್ತಾ ಸಿಗಲಿಲ್ಲ ಮತ್ತು ಆಕೆ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು.

ತೀಸ್ತಾ ಹೀಗೆ ಸಂಕಷ್ಟಕ್ಕೆ ಸಿಲುಕಿದಾಗ ದೇಶ ವಿದೇಶದ ಅನೇಕ ಪ್ರಖ್ಯಾತ ಬುದ್ಧಿಜೀವಿಗಳು ಆಕೆಯ ಬೆನ್ನಿಗೆ ನಿಂತರು. ಅಮೆರಿಕದ ಪ್ರಸಿದ್ಧ ಚಿಂತಕ ನೋಮ್ ಚೋಮ್ಸ್‌ಕಿ, ಇತಿಹಾಸತಜ್ಞರಾದ ರೊಮಿಲಾ ಥಾಪರ್, ಇರ್ಫಾನ್ ಹಬೀಬ್ ಮೊದಲಾದವರು ಇವರಲ್ಲಿ ಸೇರಿದ್ದು, ‘ಇದು ಸ್ಪಷ್ಟವಾಗಿ ಧ್ವೇಷ ಸಾಧನೆಯ ಒಂದು ಹುನ್ನಾರ, ಜಾಕಿಯಾ ಜಾಫ್ರಿ ಅವರು ನರೇಂದ್ರ ಮೋದಿ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರುವ ಪ್ರಯತ್ನದ ಭಾಗವಾಗಿಯೇ ಈ ತಂತ್ರ ಬಳಸಲಾಗುತ್ತಿದೆ’ ಎಂದು ಅವರು ಅರೋಪಿಸಿದ್ದರು.

ತೀಸ್ತಾರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಅವಮಾನಿಸುವ,  ಚಿತ್ರಹಿಂಸೆಗೀಡು ಮಾಡುವ ಗುಜರಾತ್ ಸರಕಾರದ ಸದ್ಯದ ಕುತಂತ್ರ ವಿಫಲವಾಗಿದ್ದು ತೀಸ್ತಾರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಹೀಗೆ ಆದೇಶ ಹೊರಡಿಸುವಾಗ, ‘ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಮುಂದೆ ಆಗಸದಲ್ಲಿರುವ ಎಲ್ಲ ನಕ್ಷತ್ರಗಳು, ಚೀನಾದಲ್ಲಿರುವ ಎಲ್ಲಾ ಚಹಾ, ಸಾಗರದಲ್ಲಿರುವ ಎಲ್ಲ ಮುತ್ತುಗಳು ಕೂಡಾ ಲೆಕ್ಕಕ್ಕಿಲ್ಲ' ಎಂದು ಅಂದು ಆಡಿದ ಮಾತುಗಳು ಭಾರತದ ನ್ಯಾಯಾಂಗದ ಮೇಲೆ ವಿಶ್ವಾಸ ಮತ್ತು ಅಭಿಮಾನ ಹೆಚ್ಚುವಂತೆ ಮಾಡಿದೆ.

ತೀಸ್ತಾರ ಕೆಲಸಗಳ ಬಗ್ಗೆ ಸಹಾನುಭೂತಿಯುಳ್ಳವರೂ ಈಕೆ ಅತಿಯಾಗಿ ಮಾತನಾಡುತ್ತಾಳೆ ಎಂದು ಗೊಣಗಿದಾಗ ಖ್ಯಾತ ಚಿಂತಕ ಶಿವ ವಿಶ್ವನಾಥನ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಒಂದು ಲೇಖನವನ್ನೇ (ದಿ ವ್ಯಾಲ್ಯೂ ಆಫ್ ರಾಂಟ್ ಆಂಡ್ ರೇವ್), ಬರೆದರು. ಆ ಮಾತುಗಳು ಹೀಗಿವೆ:

ಹಿಂಸೆಗೆ ತುತ್ತಾದವರ ಪರವಾಗಿ ದೊಡ್ಡ ಗಂಟಲಲ್ಲಿ ಚೀರಾಡುತ್ತಾರೆ ಎನ್ನುವುದು ತೀಸ್ತಾರ ಬಗೆಗಿನ ತಕರಾರು. ಆದರೆ ಏನು ಮಾಡುವುದು, ನಮ್ಮ ಸಮಾಜದ ಸಭ್ಯರು ಗುಜರಾತ್ ಹಿಂಸೆಯ ಬಗ್ಗೆ ದಿವ್ಯ ಮೌನ ತಾಳಿರುವಾಗ, ಈ ಬಗೆಯ ಚೀರಾಟವೇ ತಕ್ಕ ಉತ್ತರವಾಗಿದೆ. ತೀಸ್ತಾ ಮಾಡುವ ಗದ್ದಲ ನಮಗೆ ತೀರಾ ಅಪ್ರಿಯವಾದದ್ದು. ಆದರೆ ಅದು ನೊಂದವರನ್ನು ವಹಿಸಿಕೊಂಡು ಅವರು ನುಡಿಯುತ್ತಿರುವ ಸಾಕ್ಷಿ ಎಂಬುದೂ ನೆನಪಿರಲಿ... ನೊಂದವರ ನೋವು ನಿಮ್ಮನ್ನು ತಟ್ಟುತ್ತಿಲ್ಲವೇ? ಎಂದು ಚುಚ್ಚುವ ಅಧಿಕೃತ ಸಂತಾಪ ಸೂಚಕಿಯ ಹಾಗೆ ತೀಸ್ತಾ ಆಡುತ್ತಾರೆ. ಪದೇ ಪದೇ ಅದನ್ನೇ ಎತ್ತಿ ಆಡಿ ರಂಪ-ರಗಳೆ ಮಾಡುತ್ತಾರೆ. ಇದರಿಂದ ನಮಗೆ ತುಂಬಾ ಕಿರಿಕಿರಿಯಾಗುತ್ತದೆ-ಇದೆಲ್ಲ  ಸರಿ. ಹಾಗಂತ ಮುಚ್ಚಿಟ್ಟ ಸತ್ಯಗಳನ್ನು ಜಗಜ್ಜಾಹೀರು ಪಡಿಸುವವರ ಮಾತುಗಳು ಸಂಗೀತದಷ್ಟು ಸುಶ್ರಾವ್ಯವಾಗಿರುವುದಿಲ್ಲ ಎಂಬ ಅರಿವು ನಮಗೆ ಬೇಡವೇ!... ತಮ್ಮ ಕಣ್ಣೆದುರೇ ನಡೆಯುತ್ತಿರುವ ಹಿಂಸೆಯನ್ನು ದೇಶಾವರಿ ಎಂದು ಉಪೇಕ್ಷಿಸುವ ಜನರಿಂದ ತುಂಬಿರುವ ನಮ್ಮ ಸಮಾಜವು ತೀಸ್ತಾರಂಥವರ ಅತಿರೇಕದ ವರ್ತನೆಗೆ ಸದಾ ಋಣಿಯಾಗಿರಬೇಕು.

ಮಂಗಳೂರಿನಲ್ಲಿ ನಡೆಯಲಿರುವ ‘ಸಹಬಾಳ್ವೆ ಸಾಗರ’ ಸಮಾವೇಶದಲ್ಲಿ ತೀಸ್ತಾ ಸೆಟಲ್ವಾಡ್ ಭಾಗವಹಿಸುತ್ತಿರುವುದು ಸೌಹಾರ್ದಪ್ರಿಯರಾದ ನಮಗೆಲ್ಲ ಆನೆಬಲ ತಂದುಕೊಟ್ಟಿದ್ದು, ಇದೊಂದು ಅತ್ಯಂತ ಸಂತೋಷದ ಸಂಗತಿಯಾಗಿದೆ.

share
ಗುಲಾಬಿ ಬಿಳಿಮಲೆ
ಗುಲಾಬಿ ಬಿಳಿಮಲೆ
Next Story
X