ರಾಜ್ಯದಲ್ಲಿ ಫೆ.13, 20 ರಂದು ಜಿ.ಪಂ, ತಾಪಂ ಚುನಾವಣೆ

ಬೆಂಗಳೂರು, ಜ.18: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಫೆ.13ರಂದು ಮತ್ತು ಫೆ.20 ಎರಡನೆ ಹಂತದ ಚುನಾವಣೆ ನಡೆಯಲಿದ್ದು, .ಫೆ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವ ಬೆನ್ನಲ್ಲೆ ಚುನಾವಣಾ ಆಯೋಗವು ಚುನಾವಣೆಗೆ ದಿನ ನಿಗದಿ ಮಾಡಿದೆ.
ಜನವರಿ 25ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. 26 ಜಿಲ್ಲಾ ಪಂಚಾಯತ್‌ಗಳ 926 ಸ್ಥಾನ ಮತ್ತು 175 ತಾಲೂಕು ಪಂಚಾಯತ್‌ಗಳ 3,884 ಸ್ಥಾನಗಳಿಗೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ.ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಸುದ್ದಿಗಾರರಿಗೆ ತಿಳಿಸಿದರು.
ಫೆ.13ರಂದು ಮೊದಲ ಹಂತದ ಚುನಾವಣೆ : ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಕಾರವಾರ, ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಗದಗ ಜಿಲ್ಲಾ ಹಾಗೂ ತಾಲೂಕು ಪಂಚಾಯತ್.
ಫೆ.20 ಎರಡನೆ ಹಂತದ ಚುನಾವಣೆ :ಹಾಸನ, ಮಂಡ್ಯ, ಯಾದಗಿರಿ, ಚಾಮರಾಜನಗರ, ಬಳ್ಳಾರಿ, ಕೊಡಗು, ಚಿಕ್ಕಮಗಳೂರು, ಮಂಗಳೂರು, ಉಡುಪಿ ಹಾಗೂ ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳ ಜಿಲ್ಲಾ ಮತ್ತು ತಾಲೂಕು ಪಂಚಾಯತ್.
ನಾಲ್ಕು ಜಿಲ್ಲೆಗಳಲ್ಲಿ ಚುನಾವಣೆ ಇಲ್ಲ
ಹೈಕೋರ್ಟ್ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಗುಲ್ಬರ್ಗಾ, ರಾಯಚೂರು, ಬೀದರ್ ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿಲ್ಲ.
ಚುನಾವಣಾ ವೇಳಾ ಪಟ್ಟಿ
ನೀತಿ ಸಂಹಿತೆ ಜಾರಿ : ಜನವರಿ .18
ಅಧಿಸೂಚನೆ : ಜನವರಿ . 25ರಂದು
ನಾಮಪತ್ರ ಸಲ್ಲಿಕೆಗೆ ಕಡೆದಿನ :ಫೆಬ್ರವರಿ 1
ನಾಮಪತ್ರಗಳ ಪರಿಶೀಲನೆ :ಫೆಬ್ರವರಿ 2
ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಫೆಬ್ರವರಿ .4
ಮೊದಲ ಹಂತದ ಚುನಾವಣೆ ಫ್ರೆಬ್ರವರಿ 13
ಎರಡನೆ ಹಂತದ ಚುನಾವಣೆ ಫೆಬ್ರವರಿ 20
ಫಲಿತಾಂಶ ಪ್ರಕಟ: , ಫೆಬ್ರವರಿ 23







