ಜಾತಿ ಗೊತ್ತಿಲ್ಲದ ಯುವಕನಿಗೆ ಉಗ್ರಪ್ಪರಿಂದ ಉದ್ಯೋಗ..!

ಬೆಂಗಳೂರು, ಜ. 18: ತನ್ನ ಜಾತಿಯೇ ಗೊತ್ತಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯಮೂಲದ ಯುವಕ ರಘು ಅವರಿಗೆ ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ತಾತ್ಕಾಲಿಕ ಹುದ್ದೆಯೊಂದನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಘು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕೆ ಆತ ನಿಗೆ ಜಾತಿ ಪ್ರಮಾಣ ಪತ್ರ ದೊರೆತಿರಲಿಲ್ಲ. ಹೀಗಾಗಿ ರಘು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮಂಡ್ಯ ಮೂಲದ ರಘು ಅವರ ತಾಯಿ ಮೂಗಿಯಾಗಿದ್ದು, ಆಕೆಯ ಮೇಲೆ ನಡೆದ ಅತ್ಯಾಚಾರದ ಪರಿಣಾಮವಾಗಿ ಹುಟ್ಟಿದ ರಘು ಬಾಲ ಮಂದಿರದಲ್ಲಿ ಬೆಳೆದಿದ್ದ. ಇದೀಗ ಪ್ರಾಯಕ್ಕೆ ಬಂದಿರುವ ಆತನಿಗೆ ತನ್ನ ಜಾತಿಯೇ ಗೊತ್ತಿಲ್ಲ. ತಾಯಿಯನ್ನು ಕೇಳಲು ಆಕೆ ಮೂಗಿಯಾಗಿದ್ದಾಳೆ ಎಂದು ಉಗ್ರಪ್ಪ ತಿಳಿಸಿದರು.
ಎಸೆಸೆಲ್ಸಿ ವರೆಗೆ ವ್ಯಾಸಂಗ ಮಾಡಿರುವ ಮಂಡ್ಯದ ರಘು ನಗರದಲ್ಲಿ ‘ಮೋರ್’ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದು, ಸರಕಾರಿ ಉದ್ಯೋಗಕ್ಕಾಗಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದ. ಸೂಕ್ತ ದಾಖಲೆ ಕೊರತೆ ಹಿನ್ನೆಲೆಯಲ್ಲಿ ಆತನಿಗೆ ಜಾತಿ ಪ್ರಮಾಣ ಪತ್ರ ದೊರೆತಿಲ್ಲ ಎಂದು ಹೇಳಿದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ಸಮಿತಿಯ ಅಧ್ಯಕ್ಷರೂ ಆಗಿರುವ ತಾನು, ಯುವಕ ರಘು ಅವರಿಗೆ ತಾತ್ಕಾ ಲಿಕವಾಗಿ ‘ಡಿ’ ದರ್ಜೆ ನೌಕರಿಯನ್ನು ನೀಡಿದ್ದು, 10,500 ರೂ.ವೇತನ ನೀಡಲಾ ಗುವುದು ಎಂದು ತಿಳಿಸಿದರು.





