ಕೆವಿಜಿ ಕಾಲೇಜಿಗೆ ನಾಲ್ಕು ರ್ಯಾಂಕ್
ಸುಳ್ಯ, ಜ.18: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕಳೆದ ಎಪ್ರಿಲ್‌ನಲ್ಲಿ ನಡೆಸಿದ 2015ರ ಸಾಲಿನ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿಗೆ ನಾಲ್ಕು ರ್ಯಾಂಕ್ ಲಭಿಸಿದೆ. ಅರವಳಿಕೆ ಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಆಯೇಷಾ ಗೋಯಲ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಿವಿ, ಮೂಗು, ಗಂಟಲು ಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಶೆರ್ರಿ ಜೋಸೆಫ್ 5ನೆ ರ್ಯಾಂಕ್ ಪಡೆದಿದ್ದಾರೆ. ಚರ್ಮ ಲೈಂಗಿಕ ಮತ್ತು ಕುಷ್ಠ ರೋಗ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಶೆರಿನ್ ಮೇರಿ ಜೋನ್ ಎಂಟನೆ ರ್ಯಾಂಕ್ ಪಡೆದಿದ್ದಾರೆ. ರೇಡಿಯೊ ಡಯಾಗ್ನಾಸಿಸ್ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಶೃಂಗ ತೇಜಸ್ವಿ ಒಂಬತ್ತನೆ ರ್ಯಾಂಕ್ ಪಡೆದಿದ್ದಾರೆ.
Next Story





