ತೋಡಾರು: ಜಷ್ನ್ನೆೇ ರಬೀಹ್ ಮೀಲಾದ್ ಸಂಗಮ
ತೋಡಾರು, ಜ.18: ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ವಿದ್ಯಾರ್ಥಿ ಸಂಘಟನೆ ‘ಶಮ್ಸ್’ ಆಯೋಜಕತ್ವದಲ್ಲಿ ಜಷ್ನೇ ರಬೀಹ್ ಮೀಲಾದ್ ಸಂಗಮವು ಇತ್ತೀಚೆಗೆ ತೋಡಾರು ಜಂಕ್ಷನ್‌ನಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು. ತೋಡಾರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಸಲೀಂ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ತ್ವಾಹ ಜಿಫ್ರಿ ತಂಙಳ್ ಅಡ್ಯಾರ್ ಕಣ್ಣೂರು ದುಆ ಮಾಡಿದರು. ಸಂಸ್ಥೆಯ ಉಪಪ್ರಾಂಶುಪಾಲ ರಫೀಕ್ ಅಹ್ಮದ್ ಹುದವಿ ಕೋಲಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮ್ಯಾನೇಜರ್ ಇಸ್ಹಾಕ್ ಹಾಜಿ, ತೋಡಾರು ಜಮಾಅತ್ ಅಧ್ಯಕ್ಷ ಎಂ.ಎ.ಎಸ್. ಅಬೂಬಕರ್ ಹಾಜಿ , ಸಂಸ್ಥೆಯ ಪ್ರಾಧ್ಯಾಪಕ ಮಾಸ್ಟರ್ ರಾಫಿ ವಯನಾಡ್ ಶುಭ ಹಾರೈಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕವಾದ ಬುರ್ದಾ, ಕವ್ವಾಲಿ, ಪಂಚಭಾಷಾ ಮದ್ಹ್‌ಗಾಯನ, ಪ್ರಭಾಷಣ ಮತ್ತು ಕಥಾಪ್ರಸಂಗಗಳನ್ನೊಳಗೂಂಡ ವೈವಿಧ್ಯಮಯವಾದ ಇಸ್ಲಾಮಿಕ್ ಕಲಾ ಸಾಹಿತ್ಯ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ‘ಮೌಸಮಿಲ್ ಫುನೂನ್-2016’ ಮೀಲಾದ್ ಸ್ಪರ್ಧಾಕೂಟದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಜುಬೈಲ್ ಸಮಿತಿಯ ಅಧ್ಯಕ್ಷ ಮುಝಮ್ಮಿಲ್, ಮಕ್ಕಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಉಪ್ಪಿನಂಗಡಿ, ಮಕ್ಕಾ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ವಿಟ್ಲ, ಅಬುಧಾಬಿ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಅರಿಮೂಲೆ, ಸಂಸ್ಥೆಯ ಸಂಚಾಲಕ ಸಲೀಂ ಹಂಡೇಲು, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಮತ್ತು ನೌಶಾದ್ ಹಾಜಿ ಸೂರಲ್ಪಾಡಿ ಉಪಸ್ಥಿತರಿದ್ದರು.ಶಮ್ಸ್ ಅಧ್ಯಕ್ಷ ಲುಕ್ಮಾನುಲ್ ಹಕೀಂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸ್ವಾಬಿರ್ ನಿರೂಪಿಸಿ, ವಂದಿಸಿದರು.





