ಬಂಟ್ವಾಳ: ಸಚಿವ ರಮಾನಾಥ ರೈಗೆ ಸನ್ಮಾನ

ಬಂಟ್ವಾಳ, ಜ.18: ತಾಲೂಕಿನ ಪೊಳಲಿ, ಕರಿಯಂಗಳ ಮತ್ತು ಅಮ್ಮುಂಜೆ ಗ್ರಾಮಸ್ಥರ ಪರವಾಗಿ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ಸರ್ವಮಂಗಳ ಕಲ್ಯಾಣ ಮಂಟಪದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಪಂ ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ, ನಿವೃತ್ತ ಶಿಕ್ಷಕ ರಾಮ ಭಟ್, ದೇವಳದ ಮೊಕ್ತೇಸರ ಸೂರ್ಯನಾರಾಯಣ ರಾವ್, ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಪ್ರಧಾನ ಅರ್ಚಕ ಮಾಧವ ಭಟ್, ಸುಬ್ರಹ್ಮಣ್ಯ ತಂತ್ರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಬಡಗಬೆಳ್ಳೂರು ಗ್ರಾಪಂ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಯೋಗೀಶ್, ಮನಪಾ ಸದಸ್ಯರಾದ ಪ್ರಕಾಶ್ ಸಾಲಿಯಾನ್, ಅಬ್ದುಲ್ ಲತೀಫ್, ಅಡ್ಡೂರು ಗ್ರಾಪಂ ಮಾಜಿ ಅಧ್ಯಕ್ಷ ಯು.ಬಿ.ಇಬ್ರಾಹೀಂ, ಕರಿಯಂಗಳ ಪಂಚಾಯತ್ ಸದಸ್ಯೆ ವೀಣಾ ಆಚಾರ್ಯ, ಶಾಕೀರ್ ಬಡಕಬೈಲು, ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.ಕರಿಯಂಗಳ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅಭಿನಂದನಾ ಭಾಷಣಗೈದರು. ಚಂದ್ರಹಾಸ ಪಲ್ಲಿಪ್ಪಾಡಿ ಸ್ವಾಗತಿಸಿದರು, ರಾಜು ಕೋಟ್ಯಾನ್ ವಂದಿಸಿದರು. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.





