ಸುರತ್ಕಲ್ ಟೋಲ್‌ಬೂತ್‌ನಲ್ಲಿ ಮಂಗಳೂರು ನೋಂದಣಿಯ ವಾಹನಗಳಿಗೆ ಶುಲ್ಕವೇಕೆ?
ಸುರತ್ಕಲ್‌ನ ಹೆದ್ದಾರಿಯಲ್ಲಿ ಸ್ವಲ್ಪ ಸಮಯದ ಹಿಂದೆ ಜನರ ವಿರೋಧದ ನಡುವೆ ಟೋಲ್ ಬೂತ್ ಸ್ಥಾಪಿಸಲಾಯಿತು. ಆದರೆ ಸ್ಥಳೀಯ ವಾಹನಗಳಿಗೆ ಅಂದರೆ ಕೆಎ-19ನಿಂದ ಶುರುವಾಗುವ ಮಂಗಳೂರು ರಿಜಿಸ್ಟ್ರೇಷನ್ ಇರುವ ಯಾವುದೇ ವಾಹನಗಳಿಗೆ ಟೋಲ್ ವಸೂಲು ಮಾಡದೆ ಉಚಿತವಾಗಿ ಬಿಡಲಾಗುತ್ತದೆ ಎಂದು ಹೆದ್ದಾರಿ ಅಧಿಕಾರಿಗಳು ಹಾಗೂ ಟೋಲ್ ಗುತ್ತಿಗೆದಾರರು ಈ ಮೊದಲೇ ಪತ್ರಿಕಾ ಹೇಳಿಕೆ ನೀಡಿದ್ದರು.
ಆದರೆ ಅಲ್ಲಿ ಈಗ ಮಂಗಳೂರು ರಿಜಿಸ್ಟ್ರೇಷನ್ ಇರುವ ವಾಹನಗಳಿಗೂ ಬಲವಂತದಿಂದ ಟೋಲ್ ವಸೂಲು ಮಾಡಲಾಗುತ್ತಿದೆ. ಇದೇ ರವಿವಾರ ನಾವು ಸಮಾರಂಭವೊಂದಕ್ಕೆ ಈ ಹೆದ್ದಾರಿಯಿಂದ ಹೋಗುವಾಗಲೂ, ಬರುವಾಗಲೂ ನಮ್ಮ ಮಂಗಳೂರು ರಿಜಿಸ್ಟ್ರೇಷನ್ ಇರುವ ಕಾರಿಗೂ ಟೋಲ್ ವಸೂಲು ಮಾಡಿದರು. ಅಲ್ಲಿ ಹಿಂದಿ ಮಾತನಾಡುವ ಬಿಹಾರಿಗಳನ್ನು ಕೆಲಸಕ್ಕೆ ನೇಮಿಸಲಾಗಿದೆ. ಅವರಿಗೆ ನಾವು ಮಾತನಾಡಿದ್ದು ಅರ್ಥವೇ ಆಗುವುದಿಲ್ಲ. ಅದಕ್ಕಿಂತಲೂ ಹೆಚ್ಚು ಕೆಟ್ಟ ವಿಷಯವೆಂದರೆ ಸುರತ್ಕಲ್ಲಿನ ಟೋಲ್ ಶುಲ್ಕವು ಬಿ.ಸಿ.ರೋಡಿನ ಬ್ರಹ್ಮರಕೊಟ್ಲ ಟೋಲ್ ಶುಲ್ಕದ ಎರಡು ಪಟ್ಟು ಇದೆ. ಎರಡೂ ಕಡೆ ಒಬ್ಬನೇ ವ್ಯಕ್ತಿಯ ಟೋಲ್ ಗುತ್ತಿಗೆ ಇದ್ದರೂ ಟೋಲ್ ಶುಲ್ಕದಲ್ಲಿ ಇಷ್ಟೊಂದು ವಿಪರೀತ ವ್ಯತ್ಯಾಸವೇಕೆ? ಮಂಗಳೂರು ರಿಜಿಸ್ಟ್ರೇಷನ್ ಇರುವ ವಾಹನಗಳಿಗೆ ಯಾಕೆ ಟೋಲ್ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೆದ್ದಾರಿ ಅಧಿಕಾರಿಗಳು, ಸುರತ್ಕಲ್ ಶಾಸಕರು ಮತ್ತು ಗುತ್ತಿಗೆದಾರರು ಸಾರ್ವಜನಿಕ ವಿವರಣೆ ಕೊಡುವ ಅಗತ್ಯವಿದೆ. ಅವರಿಂದ ವಿವರಣೆ ಪಡೆಯುವುದು ಮಂಗಳೂರು ನಗರದ ವಾಹನ ಮಾಲಕರ ಹಕ್ಕು ಸಹಾ ಆಗಿದೆ ಎಂಬುದು ನೆನಪಿರಲಿ.





