ಮಾನನಷ್ಟ: ಕೋರ್ಟ್‌ಗೆ ಹಾಜರಾದ ಅಸ್ಸಾಂ ಮುಖ್ಯಮಂತ್ರಿ
ಹೊಸದಿಲ್ಲಿ,ಜ.18: ಬಿಜೆಪಿ ನಾಯಕರೊಬ್ಬರು ತನ್ನ ವಿರುದ್ಧ ಹೂಡಿದ 100 ಕೋಟಿ ರೂ. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು.
ಇಲ್ಲಿನ ಸಿವಿಲ್ ನ್ಯಾಯಾಧೀಶರ ಮುಂದೆ ಗೊಗೊಯ್ ಹಾಜರಾದಾಗ, ಅವರ ಸಂಪುಟ ಸಹದ್ಯೋಗಿಗಳು ಹಾಗೂ ಕೆಲವು ಕಾಂಗ್ರೆಸ್ ಶಾಸಕರು ಜೊತೆಗಿದ್ದರು. ನ್ಯಾಯಾಲಯದ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಗೊಗೊಯ್ ಪರ ಘೋಷಣೆಗಳನ್ನು ಕೂಗಿದರು.
ನ್ಯಾಯಾಧೀಶರ ಮುಂದೆ ಹಾಜರಾದ ಗೊಗೊಯ್ ಆನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ, ಱಱ ‘‘ನ್ಯಾಯಾಲಯವು ಪ್ರಕರಣದ ಮುಂದಿನ ಆಲಿಕೆಯನ್ನು ಫೆಬ್ರವರಿ 8ಕ್ಕೆ ನಿಗದಿಪಡಿಸಿದೆ. ಆಗ ಮೊಕದ್ದಮೆಯ ವಿರುದ್ಧ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುವೆ’’ಎಂದು ತಿಳಿಸಿದರು.
ಮುಖ್ಯಮಂತ್ರಿ ಗೊಗೊಯ್ ಅವರು, ಶಾರದಾ ಚಿಟ್‌ಫಂಡ್ ಹಾಗೂ ಲೂಯಿಸ್ ಬರ್ಗರ್ ಪ್ರಕರಣಗಳಲ್ಲಿ ತನ್ನ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆಂದು ಆಪಾದಿಸಿ, ಬಿಜೆಪಿ ಶಾಸಕ ಹಿಮಂತ ಬಿಶ್ವಾ ವರ್ಮಾ ಅವರು 100 ಕೋಟಿ ರೂ. ಪರಿಹಾರ ಕೇಳಿ, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.





