ಬುರೈದ: ಹುಬ್ಬು ರಸೂಲ್ ಕಾರ್ಯ ಕ್ರಮ

ಬುರೈದ: ಇಂಡಿಯಾ ಫ್ರೆಟಿನಿ೯ಟಿ ಫೋರಂ ಬುರೈದ ಘಟಕವು ಆಯೋಜಿಸಿದ ಸೀರತುನ್ನಬಿ ಅಬಿಯಾನದ ಅಂಗವಾಗಿ ಪ್ರವಾದಿ ನಬಿ (ಸ.ಅ) ರವರ ಜೀವನ ಮತ್ತು ಸಂದೇಶಸಾರುವ “ ಹುಬ್ಬು ರಸೂಲ್ ” ಎಂಬ ಕಾರ್ಯ ಕ್ರಮ ಜ.14 ರಂದು ಬುರೈದ ಖಳಿದಿಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಎಫ್ ಎಫ್ ಬುರೈದ ಇದರ ಪ್ರದಾನ ಕಾರ್ಯದರ್ಶಿ ಜಮಾಲ್ ಅಡ್ಧೂರ್ ರವರು ವಹಿಸಿದ್ಧರು. ಸಹೀದ್ ಪುಂಜಲ್ ಕಟ್ಟೆ ರವರ ಕೀರತ್ ನಿಂದ ಕಾರ್ಯಕ್ರಮ ಪ್ರಾರಂಭವಾಹಿತು.
ಐಎಫ್ಎಫ್ ಕೇರಳ ಜಿಲ್ಲಾ ಸಮಿತಿ ಸದಸ್ಯರಾದ ಹಾರಿಸ್ ಮೌಲವಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ , ದಿಕ್ಸೂಚಿ ಬಾಷಣ ಮಾಡಿದರು.
ಪ್ರವಾದಿ ನಬಿ (ಸ.ಅ) ರವರ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು. ಐಕ್ಯತೆಗೆ ಅಲ್ಲಾಹನ ಸಹಾಯ ಯಾವಾಗಲು ಇರುತದೆ, ಬದರ್ ಯುದ್ದದಲ್ಲಿ 313 ಸಹಬಿಗಳು ಒಂದು ಸಾವಿರ ಶತ್ರುಗಳನ್ನು ಅಲ್ಲಾಹನ ಸಹಾಯದಿಂದ ಎದುರಿಸಿದರು . ಆಗ ಸಹಬಿಗಳಲ್ಲಿ ಐಕ್ಯತೆ ಇತ್ತು ಎಂದರು. ಈಗ ನಮ್ಮ ಮುಸ್ಲಿಂ ಸಮಾಜದಲ್ಲಿ ಐಕ್ಯತೆ ಕೊರತೆ ಎದ್ದು ಕಾಣುತಿದೆ . ಪರಸ್ಪರ ಐಕ್ಯತೆಯನ್ನು ಕಾಪಾಡಿಕೊಂಡು ಮುಸ್ಲಿಂ ಸಮುದಾಯದ ಒಳಿತಿಗಾಗಿ ದುಡಿಯಬೇಕು ಎಂದು ಕರೆಕೊಟ್ಟರು.
ಐ ಎಫ್ ಎಫ್ ಬುರೈದ ಇದರ ಪ್ರದಾನ ಕಾರ್ಯದರ್ಶಿ ಜಮಾಲ್ ಅಡ್ಧೂರ್ ತಮ್ಮ ಅಧ್ಯಕ್ಷ ಬಾಷಣ ದಲ್ಲಿ ಐ ಎಫ್ ಎಫ್ ಸೌದಿ ಅರೇಬಿಯದಲ್ಲಿ ಪ್ರವಾಸಿಗಳ ಸಮಸ್ಸೆ ಪರಿಹರಿಸಲು ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ಬುರೈದದಲ್ಲಿ ಹಲವಾರು ಸಂಗಟನೆಗಳು ನಮೊಂದಿಗೆ ಕೈಜೋಡಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಐಎಸ್ಎಫ್ ಬುರೈದ ಜಿಲ್ಲಾ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಕುಕ್ಕುವಲ್ಲಿ , ಗಲ್ಫ್ ಕಮಿಟಿ ಅಡ್ಧೂರ್ ಇದರ ಅಧ್ಯಕ್ಷರಾದ ಜಿ. ಎಂ. ಮೊಹಮ್ಮದ್ ಅಡ್ಧೂರ್ , ಯುವ ಉದ್ಯಮಿ ಅಶ್ರಫ್ ಬದ್ರಿಯನಗರ ವೇದಿಕೆ ಯಲ್ಲಿ ಉಪಸ್ಥಿತರಿದ್ದರು
ಅಮಿನ್ ಪುಂಜಲ್ ಕಟ್ಟೆರವರು ಅತಿಥಿಗಳನ್ನು ಸ್ವಾಗತಿಸಿ, ಅಬ್ದುಲ್ ಖದರ್ ಹೈಪರ್ ಪಾಂಡಾ ರವರು ದಾನ್ಯ ವಾದ ಅರ್ಪಿಸಿದರು , ಅಯ್ಯುಬ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.









