ಎಂಎಲ್‌ಸಿ ರೇವಣ್ಣರಲ್ಲಿ "ಅಣ್ಣಾ ನನಗೊಂದು ಅವಕಾಶ ಕೊಡಿ " ಎಂದು ಕೇಳಿದ ಭೈರತಿ ಸುರೇಶ

ಬೆಂಗಳೂರು, ಜ.19: "ಅಣ್ಣಾ ನನಗೊಂದು ಅವಕಾಶ ಕೊಡಿ" ಎಂದು ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೇಳಿದ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿ ಭೈರತಿ ಸುರೇಶ್‌ರನ್ನು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಬೈದು ಕಳುಹಿಸಿದ ಘಟನೆ ವರದಿಯಾಗಿದೆ.
ವಿಧಾನ ಪರಿಷತ್ ಸದಸ್ಯ ರೇವಣ್ಣ ಅವರು ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಭೈರತಿ ಸುರೇಶ್ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ರೇವಣ್ಣ ಮನೆಗೆ ತೆರಳಿದ ಭೈರತಿ ಸುರೇಶ್ ಅವರು ಮಾತುಕತೆಯ ವೇಳೆ ರೇವಣ್ಣರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೊಂದು ಅವಕಾಶ ಕೊಡುವಂತೆ ಕೇಳಿದರೆನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ರೇವಣ್ಣ " ನಿಮಗೆ ಹೆಬ್ಬಾಳದಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಸಾಧ್ಯವಿಲ್ಲ. ನೀವು ಬೇರೆ ಕ್ಷೇತ್ರದವರು, ಸಿಎಂಗೆ ತೊಂದರೆ ಮಾಡಿದ್ದೀರಿ. ಇಲ್ಲಿ ಯಾಕೆ ಅವಕಾಶ ಕೇಳುತ್ತಿರಿ.? ಎಂದು ಬೈದು ಕಳುಹಿಸಿದರೆಂದು ಟಿವಿ ವಾಹಿನಿಯೊಂದು ವರದಿ ಮಾಡಿದೆ.





