ಮೂಡುಬಿದಿರೆ : ರಾಷ್ಟ್ರಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನ್ ಅತ್ಲೆಟಿಕ್ಸ್ ಕ್ರೀಡಾಕೂಟ

ರಾಷ್ಟ್ರಮಟ್ಟದಲ್ಲಿ ಅರಳಿದ ಆಳ್ವಾಸ್ ಪ್ರತಿಭೆಗಳು
ಮೂಡುಬಿದಿರೆ: ದಿನಾಂಕ 09.01.2016ರಿಂದ 12.01.2016ರವರೆಗೆ ಆಂಧ್ರಪ್ರದೇಶದ ಗುಡಿವಾಡದಲ್ಲಿ ನಡೆದ ರಾಷ್ಟ್ರಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನ್ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪ್ರೌಢಶಾಲೆ ಮೂಡುಬಿದಿರೆ 02 ಚಿನ್ನ, 01 ಬೆಳ್ಳಿ ಪದಕ, 01 ಕಂಚಿನ ಪದಕಗಳನ್ನು ಪಡೆದು ಒಟ್ಟು 04 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ ಭೂಮಿಕಾ ಡಿ.,400 ಮೀ ದ್ವಿತೀಯ, 4400 ರಿಲೇ ಪ್ರಥಮ, ಜ್ಯೋತ್ಸ್ನಾ 100ಮೀ ತೃತೀಯ, 4100 ರಿಲೇ ಪ್ರಥಮ,
ಸುಪ್ರಿತ ಎಸ್.ಬಿ. ಎತ್ತರ ಜಿಗಿತ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.
Next Story





