ಗುಟ್ಟಾಗಿ ನೆರವೇರಿತು ರೋಹಿತ್ ಮೃತದೇಹದ ಅಂತ್ಯಕ್ರಿಯೆ

ಹೈದರಾಬಾದ್ , ಜ.19: ಹೈದರಾಬಾದ್ ವಿವಿಯ ಹಾಸ್ಟೇಲ್ ಕೊಠಡಿಯಲ್ಲಿ ರವಿವಾರ ಆತ್ಮಹತ್ಯೆಗೆ ಶರಣಾದ ಹೈದ್ರಾಬಾದ್ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವಮುಲಾ ಮೃತದೇಹದ ಅಂತ್ಯಕ್ರಿಯೆಯನ್ನು ಪೊಲೀಸರು ಗುಟ್ಟಾಗಿಯೇ ಮಾಡಿದ್ದಾರೆ
ಅಂಬರ್‌ಪೇಟ್ ಸ್ಮಶಾನದಲ್ಲಿ ಮೃತದೇಹದ ಅಂತ್ಯಕ್ರಿಯೆ ಮಾಡಲಾಗಿದೆ. ಹೈದ್ರಬಾದ್‌ನಲ್ಲಿ ರೋಹಿತ್ ಊರಲ್ಲಿ ಅಂತ್ಯ ಸಂಸ್ಕಾರ ಮಾಡಬೇಕೆಂದು ಕುಟುಂಬದವರು ಬಯಸಿದ್ದರು. ಆದರೆ ಪೊಲೀಸರ ಒತ್ತಾಯಕ್ಕೆ ಮಣಿದು ಅಂಬರ್‌ಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅಂತ್ಯ ಸಂಸ್ಕಾರದ ವೇಳೆ ರೋಹಿತ್‌ರ ಕೆಲವೇ ಮಂದಿ ಬಂಧುಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

Next Story





