ಕಾಸರಗೋಡು : ಸೆಪ್ಟಿಕ್ ಟ್ಯಾಂಕ್ ಗಿಳಿದ ತಾಯಿ , ಪುತ್ರ ಸೇರಿದಂತೆ ಮೂವರ ಮೃತ್ಯು.
ಕಾಸರಗೋಡು : ಸೆಪ್ಟಿಕ್ ಟ್ಯಾಂಕ್ ಗಿಳಿದ ತಾಯಿ , ಪುತ್ರ ಸೇರಿದಂತೆ ಮೂವರ ಮೃತ್ಯು. ಕೇರಳದ ಕಣ್ಣೂರು ನಲ್ಲಿ ಇಂದು ಸಂಜೆ ನಡೆದ ಘಟನೆ .
ಕಣ್ಣೂರು ಚಕ್ಕರಕ್ಕಲ್ ಪಲ್ಲಿಪಾಯಲ್ ಎಂಬಲ್ಲಿ ನಡೆದ ದಾರುಣ ಘಟನೆ .ಸತಿ ( ೫೦) ಪುತ್ರ ರತೀಶ್ ( ೨೮) ಮತ್ತು ಕೂಲಿ ಕಾರ್ಮಿಕ ಮುನೀರ್ ( ೩೫) ಮ್ರತಪಟ್ಟ ವರು.
ಸತಿ ಯವರ ಮನೆಯ ಶೌಚ ಗುಂಡಿ ದುರಸ್ತಿಗೊಳಿಸಲು ಇಳಿದ ಮುನೀರ್ ಕುಸಿದು ಬಿದ್ದಿದ್ದು, ಇವರನ್ನು ರಕ್ಷಿಸಲು ರತೀಶ್ ಇಳಿದಿದ್ದು , ಇವರೂ ಕುಸಿದು ಬಿದ್ದರು. ಗಾಬರಿ ಗೊಂಡ ಸತಿ ಇವರನ್ನು ರಕ್ಷಸಲು ಕೆಳಗಿಳಿದಿದ್ದು ಅವರು ಕೂಡಾ ಕುಸಿದು ಬಿದ್ದರು ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮೂವರನ್ನು ಮೇಲಕ್ಕೆತ್ತಿ ದರೂ ಜೀವ ಉಳಿಸಲಾಗಲಿಲ್ಲ.
Next Story





