ಬೆಂಗ್ರೆ ಕಸಬ: ಸಹಾರ ಶಾಲೆಯ ವಾರ್ಷಿಕೋತ್ಸವ

ಮಂಗಳೂರು, ಜ. 19: ಸಹಾರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಬೆಂಗ್ರೆ ಕಸಬ ಇದರ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಶಾಲಾ ಆವರಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಗ್ರೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಸನಬ್ಬ ಹಾಜಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಸಬ ಬೆಂಗ್ರೆ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅನುರಾಧ ಎನ್.ಎಸ್., ಎ.ಆರ್.ಕೆ.ಹಿರಿಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಕೀನಾ ಬಾನು, ಶಿಕ್ಷಣಾಭಿವೃದ್ಧಿ ಸಂಸ್ಥೆಯ ಸದಸ್ಯರಾದ ಬಿಲಾಲ್ ಮೈದಿನ್, ಮಾಜಿ ಕಾರ್ಪೊರೇಟರ್ ಫಾರೂಕ್, ಮಂಡಳಿ ಸದಸ್ಯರಾದ ಎಂ.ಬಿ.ಇಸ್ಮಾಯೀಲ್, ಎಂ.ಬಿ.ಸಲೀಂ, ಉದ್ಯಮಿ ಶಹೀರ್, ಜಲೀಲ್ ಹಾಗೂ ಶಾಲಾ ಸಂಚಾಲಕ ಅಬ್ದುಲ್ ರಶೀದ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಖ್ಹಾಲಿಸ್ ನಿಝಾರ್ ಸ್ವಾಗತಿಸಿದರು
Next Story





