ಕೇರಳದ ಮುಹಮ್ಮದ್ ಶಮ್ನಾಡ್ ಸಹಿತ 25 ಮಂದಿ ಚಿಣ್ಣರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಹೊಸದಿಲ್ಲಿ,ಜ.19: ಕೇರಳದ ಮುಹಮ್ಮದ್ ಶಮ್ನಾಡ್ ಸೇರಿದಂತೆ 22 ಬಾಲಕರು ಹಾಗೂ ಮೂವರು ಬಾಲಕಿಯರನ್ನು ವರ್ಷದ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಇಬ್ಬರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ದೊರೆತಿದೆ.
ರಾಷ್ಟ್ರೀಯ ಶೌರ್ಯ ಪ್ರಶಸ್ತಿಯ ಪರಮೋಚ್ಚ ಪುರಸ್ಕಾರವಾದ ಭಾರತ ಪ್ರಶಸ್ತಿಯು, ಮಹಾರಾಷ್ಟ್ರದ ಗೌರವ್ ಕಾವ್‌ಡುಜಿ ಸಹಸ್ರಬುದ್ಧೆಗೆ ಮರಣೋತ್ತರವಾಗಿ ಲಭಿಸಿದೆ. ತನ್ನ ನಾಲ್ವರು ಸ್ನೇಹಿತರನ್ನು ರಕ್ಷಿಸಿದ ಸಂದರ್ಭದಲ್ಲಿ ಆತ ಪ್ರಾಣವನ್ನು ಕಳೆದುಕೊಂಡಿದ್ದ. ಸರಯೂ ನದಿಯಲ್ಲಿ ನೀರುಪಾಲಾದ ತನ್ನ ಸ್ನೇಹಿತನನ್ನು ರಕ್ಷಿಸುವ ಪ್ರಯತ್ನದಲ್ಲಿ ಮೃತಪಟ್ಟ 13 ವರ್ಷ ವಯಸ್ಸಿನ ಶಿವಾಂಶ್ ಸಿಂಗ್‌ಗೂ ಭಾರತ್ ಪುರಸ್ಕಾರ ಲಭಿಸಿದೆ.
ಪ್ರತಿಷ್ಠಿತ ಗೀತಾ ಚೋಪ್ರಾ ಪ್ರಶಸ್ತಿಗೆ 8 ವರ್ಷದ ಬಾಲಕಿ ಕು.ಶಿವಂಪೇಟ್ ರುಚಿತಾ ಆಯ್ಕೆಯಾಗಿದ್ದಾರೆ. ತನ್ನ ಶಾಲಾಬಸ್‌ಗೆ ರೈಲು ಢಿಕ್ಕಿ ಹೊಡೆದ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಆಕೆಗೆ ಈ ಪ್ರಶಸ್ತಿ ದೊರೆತಿದೆ. ಹುಲಿಯೊಂದಿಗೆ ಹೋರಾಡಿ ತನ್ನ ತಾಯಿಯನ್ನು ರಕ್ಷಿಸಿದ 16 ವರ್ಷದ ಅರ್ಜುನ್‌ಸಿಂಗ್‌ಗೆ ಸಂಜಯ್‌ಚೋಪ್ರಾ ಪ್ರಶಸ್ತಿ ದೊರೆತಿದೆ.
ಕೇರಳದ ಮುಹಮ್ಮದ್ ಶಮ್ನಾಡ್, ಅಪ್ರತಿಮ ಸಾಹಸ ಪ್ರದರ್ಶಿಸಿ, ಕೆರೆಗೆ ಬಿದ್ದ ಒಂದೂವರೆ ವರ್ಷದ ಬಾಲಕಿ ರಿಯಾ ಾತಿಮಾಳನ್ನು ರಕ್ಷಿಸಿದ್ದಕ್ಕಾಗಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ವಿವಿಧ ಸಚಿವಾಲಯಗಳು/ಇಲಾಖೆಗಳ ಎನ್‌ಜಿಓ ಸಂಸ್ಥೆಗಳ ಪ್ರತಿನಿಗಳು ಹಾಗೂ ಭಾರತೀಯ ಶಿಶುಕಲ್ಯಾಣಮಂಡಳಿಯ ಪದಾಕಾರಿಗಳನ್ನೊಳಗೊಂಡ ಉನ್ನತ ಸಮಿತಿಯು ಶೌರ್ಯ ಪ್ರಶಸ್ತಿಗೆ 25 ಮಕ್ಕಳನ್ನು ಆಯ್ಕೆ ಮಾಡಿದೆ.
ಜನವರಿ 24ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿಯೂ, ಈ ಚಿಣ್ಣರು ಪಾಲ್ಗೊಳ್ಳಲಿದ್ದಾರೆ.







