ಎಂ ಆರ್ ಪಿ ಎಲ್ ಕೋಕ್ ಸಲ್ಪರ್ ಘಟಕದಿಂದ ಹೊರಬಿಡುತ್ತಿರುವ ಹಾರುಬೂದಿ ಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ

ಮಂಗಳೂರು,ಜ.19: ಎಂ ಆರ್ ಪಿ ಎಲ್ ಕೋಕ್ ಸಲ್ಪರ್ ಘಟಕದಿಂದ ಹೊರಬಿಡುತ್ತಿರುವ ಹಾರುಬೂದಿ ಇಂದು ರಾತ್ರಿ ಜೋಕಟ್ಟೆ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
ಜೋಕಟ್ಟೆ ಗ್ರಾಮದ ಹರಿಕೆರೆ , ನಿರ್ಮುಂಜೆಗಳಲ್ಲಿ ಕೋಕ್ ಹುಡಿಯ ಭಾರಿ ಪ್ರಮಾಣದಲ್ಲಿ ಕಾಣಿಸಿದ್ದು ತೀವ್ರವಾಗಿ ಸುರಿದ ಹಾರುಬೂದಿಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಪ್ರತಿನಿತ್ಯ ಹಾರುಬೂದಿ ಬೀಳುವುದು ಸಾಮನ್ಯವಾಗಿದ್ದರೂ ಇಂದು ಭಾರಿ ಪ್ರಮಾಣದಲ್ಲಿ ಹಾರುಬೂದಿ ಸುರಿದಿದೆ. ಈ ಬಗ್ಗೆ ಹೋರಾಟ ನಡೆಸುತ್ತಿರುವ ಡಿವೈಎ್ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಪತ್ರಿಕೆಯೊಂದಿಗೆ ಮಾತನಾಡಿ ಈ ರೀತಿ ಭಾರಿ ಪ್ರಮಾಣದ ಹಾರುಬೂದಿ ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತಲೆ ಇರುತ್ತದೆ. ಆದರೆ ಎಂಆರ್‌ಪಿಎಲ್ ಕಂಪೆನಿ ಈ ಬಗ್ಗೆ ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲ . ರಾಜ್ಯ ಸರ್ಕಾರ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ನೇತೃತ್ವದಲ್ಲಿ ರಾಜಕೀಯ ಸಮಿತಿ ಮತ್ತು ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿಯ ಅೀನದಲ್ಲಿ ತಜ್ಞರ ಸಮಿತಿಯನ್ನು ರಚಿಸಿದರು ಈ ಸಮಿತಿಗಳಿಂದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೆ ಪ್ರಯತ್ನ ಆಗಿಲ್ಲ. ಕೇವಲ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳನಷ್ಟೆ ಮಾಡುತ್ತಿದೆ ಎಂದು ಹೇಳಿದ್ದಾರೆ.










