ಪತಿಯಿಂದ ಬೆದರಿಕೆ: ಪತ್ನಿ ದೂರು
ಪುತ್ತೂರು, ಜ.19: ಪತಿ ತನ್ನ ತವರು ಮನೆಗೆ ಆಗಮಿಸಿ ಬೆದರಿಕೆ ಹಾಕಿರುವುದಾಗಿ ಪತ್ನಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ದಿಲ್‌ಶಾನ ಎಂಬವರು ದೂರು ನೀಡಿದ ಮಹಿಳೆ. ತನ್ನ ಪತಿ ಬಂಟ್ವಾಳ ತಾಲೂಕಿನ ಪುಣಚ ನಿವಾಸಿ ಶರೀಫ್ ಎಂಬಾತ ಸೋಮವಾರ ರಾತ್ರಿ ವಳತ್ತಡ್ಕದ ತವರು ಮನೆಗೆ ಆಗಮಿಸಿ ಬೆದರಿಕೆ ಒಡ್ಡಿರುವುದಾಗಿ ಅವರು ದೂರಿನಲ್ಲಿ ಆರೋಪಿಸಿದ್ದಾರೆ. 3 ವರ್ಷಗಳ ಹಿಂದೆ ದಿಲ್‌ಶಾನರನ್ನು ಶರೀಫ್ ವಿವಾಹವಾಗಿದ್ದ. ಗಂಡನ ಕಿರುಕುಳದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದಿಲ್‌ಶಾನ ಗಂಡನ ಮನೆ ತೊರೆದು ತವರು ಮನೆಯಲ್ಲಿ ವಾಸಿಸುತ್ತಿದ್ದರು. ದಿಲ್‌ಶಾನ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





