ಖತೀಬರ ಕೊಠಡಿಯಿಂದ ಕಳವು
ಪುತ್ತೂರು, ಜ.19: ಸಂಪ್ಯ ಜುಮಾ ಮಸೀದಿಯ ಖತೀಬ್ ಹಮೀದ್ ದಾರಿಮಿ ಅವರ ಕೊಠಡಿಯಿಂದ ನಗದು ಕಳವು ನಡೆದ ಘಟನೆ ಸೋಮವಾರ ನಡೆದಿದೆ.
ಸಂಜೆ ನಮಾಝಿಗೆಂದು ಮಸೀದಿಗೆ ತೆರಳುವ ವೇಳೆ ಈ ಕೃತ್ಯ ನಡೆಸಲಾಗಿದೆ. ಖತೀಬರ ಕೊಠಡಿಯ ಬೀಗ ಮುರಿದು ಕಪಾಟಿನಲ್ಲಿದ್ದ 27 ಸಾವಿರ ರೂ. ನಗದು, ಎರಡು ಬೆಲೆಬಾಳುವ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ.
ಮಸೀದಿಯ ಪಕ್ಕದಲ್ಲೇ ಖತೀಬರ ಕೊಠಡಿಯಿದ್ದು, ಸಂಜೆ ವೇಳೆ ಮಸೀದಿಗೆ ಕೇರಳ ನೋಂದಣಿಯ ಮಾರುತಿ ಕಾರೊಂದು ಬಂದಿತ್ತು. ಕಾರು ಬಂದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಂಪ್ಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





