ರೋಹಿತ್ ಸಾವು ಪ್ರಕರಣ; ತುಮಕೂರು: ಸಿಬಿಐ ತನಿಖೆಗೆ ಒತ್ತಾಯ

ತುಮಕೂರು, ಜ.19: ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾದ ವರನ್ನು ಬಂಧಿಸಲು ಹಾಗೂ ಘಟನೆಯನ್ನು ಸಿಬಿಐ ತನಿಖೆಗೆ ವಹಿ ಸುವಂತೆ ಒತ್ತಾಯಿಸಿ ದಲಿತ ವಿದ್ಯಾರ್ಥಿಗಳು ಹಾಗೂ ಮುಖಂಡರು ಮಂಗಳವಾರ ನಗರದ ಟೌನ್‌ಹಾಲ್ ಎದುರು ಧರಣಿ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಒಕ್ಕೂಟದ ಮುಖಂಡರಾದ ಶಂಕರ್ ಮಾತನಾಡಿದರು. ಧರಣಿಯಲ್ಲಿ ದಲಿತ ಮುಖಂಡರಾದ ರಾಮಾಂಜಿ, ರಾಮಕೃಷ್ಣಪ್ಪ, ಬಿ ಶಾಂತರಾಜು, ಕೇಬಲ್ ರಘು, ಗಾಂಧಿರಾಜ್, ಜಾನಿ, ರಂಗಧಾಮಯ್ಯ, ಸೋಮಶೇಖರ್, ರಂಗಸ್ವಾಮಿ, ಲಕ್ಷ್ಮೀ ರಂಗಯ್ಯ, ಶಶಿಕಾಂತರಾವ್ ಮತ್ತಿತರರು ಪಾಲ್ಗೊಂಡಿದ್ದರು.
Next Story





