ಪಿಕಪ್‌ಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಗಂಭೀರ
ಸುಳ್ಯ, ಜ.19: ಪಿಕಪ್‌ಗೆ ಬೈಕ್ ಢಿಕ್ಕಿ ಹೊಡೆದು ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯದ ಓಡಬಾಯಿ ಎಂಬಲ್ಲಿ ನಡೆದಿದೆ.
ಓಡಬಾಯಿ ಪೆಟ್ರೋಲ್ ಬಂಕ್‌ಗೆ ತಿರುಗುತ್ತಿದ್ದ ಪಿಕಪ್‌ಗೆ ಬೈಕ್ ಢಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಸವಾರರಾದ ಕೂಟೇಲು ಕಾಲನಿಯ ಬಾಲಸುಬ್ರಹ್ಮಣ್ಯ ಎಂಬವರ ಪುತ್ರ ಕರುಣಾಕರ ಹಾಗೂ ಸುಬ್ರಹ್ಮಣ್ಯ ಎಂಬವರ ಪುತ್ರ ಮುರುಗೇಶ್ ಗಾಯಗೊಂಡಿದ್ದು ಈ ಪೈಕಿ ಕರು ಣಾಕರ ಎಂಬವರ ಸ್ಥಿತಿ ತೀರಾ ಚಿಂತಾಜನಕವಾಗಿದೆ. ಇಬ್ಬರನ್ನು ಸುಳ್ಯ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.
Next Story





