Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ19 Jan 2016 11:43 PM IST
share

ಇಂದು ರಾಷ್ಟ್ರಮಟ್ಟದ ಯೂತ್‌ಫೆಸ್ಟ್
 ಮಂಗಳೂರು, ಜ.19: ನಗರದ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಟೀರಿಯರ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ಹಾಗೂ ಎಂಬಿಎ ಸ್ನಾತಕೋತ್ತರ ವಿಭಾಗದ ಸಹಯೋಗದೊಂದಿಗೆ ಜ.20ರಂದು ರಾಷ್ಟ್ರ ಮಟ್ಟದ ಯೂತ್ ಫೆಸ್ಟ್ ಡಿಸೈನ್ ಫಿಯೆಸ್ಟ್-2016 ಸ್ಪರ್ಧೆ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ದೇಶದ ಯಾವುದೇ ರಾಜ್ಯದ ಪದವಿ ಪೂರ್ವ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಗುರುತಿನ ಚೀಟಿಯೊಂದಿಗೆ ಆಗಮಿಸಿ ಪಾಲ್ಗೊಳ್ಳಬಹುದು.
ಸ್ಪರ್ಧೆಯಲ್ಲಿ ಫ್ಯಾಶನ್ ಶೋ, ಗ್ರೂಪ್ ಡ್ಯಾನ್ಸ್, ಎನ್‌ಗ್ರೇವ್, ವಿಂಡೊ ಡಿಸ್‌ಪ್ಲೇ, ಕ್ಲೆ ಮಾಡೆಲಿಂಗ್, ಮೊಡೆಲ್ ಮೇಕಿಂಗ್, ಲುಮಿನರಿ, ಎಸ್ಸೆಸರಿ ಮೇಕಿಂಗ್, ಪೋಸ್ಟರ್ ಡಿಸೈನ್, ಟ್ರೆಷರ್ ಹಂಟ್ ಇತ್ಯಾದಿ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಮನೋಸ್ಥೈರ್ಯ, ಅಭಿವ್ಯಕ್ತಿತ್ವ ಮತ್ತು ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸಿ ಹೊಸತನ ಮತ್ತು ಅವಿಷ್ಕಾರಿ ಮನೋಭಾವನೆಗೆ ಹೆಚ್ಚು ಒತ್ತು ಕೊಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.


ಅನುವಾದಿತಕೃತಿ ಬಿಡುಗಡೆ
ಮಂಗಳೂರು, ಜ.19: ಲೇಖಕ ಇಸ್ಮಾಯೀಲ್ ಶಾಫಿ ಕನ್ನಡಕ್ಕೆ ಅನುವಾದಿಸಿದ ಕುರ್ ಆನ್ ವ್ಯಾಖ್ಯಾನಕಾರ ಮುಹಮ್ಮದ್ ಅಮಾನಿ ಮೌಲವಿ ರಚಿಸಿದ ಸೂರಾ: ಅಲ್ಮುಲ್ಕ್ ಮತ್ತು ಅಲ್ಖಲಮ್ಗಳ ಶಬ್ದಾರ್ಥ ಮತ್ತು ವ್ಯಾಖ್ಯಾನ ಕೃತಿಯನ್ನು ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್
 ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುರ್ರಝಾಕ್ ಇತ್ತೀಚೆಗೆ ತಲಪಾಡಿಯ ಅಬ್ರಾರ್ ಮಸೀದಿಯ ಬಳಿ ನಡೆದ ಸಲಫಿ ಸಮಾವೇಶದಲ್ಲಿ ಬಿಡುಗಡೆಗೊಳಿಸಿದರು.
ಅಬ್ರಾರ್ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಜಿ.ಅಬ್ಬಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಲಫಿ ಅಸೋಸಿಯೇಶನ್‌ನ ರಿಯಾದ್ ಘಟಕದ ಅಧ್ಯಕ್ಷ ಮೂಸಾ ತಲಪಾಡಿ, ಸಲಫಿ ಮೂವ್ಮೆಂಟ್ನ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬೂಬಕರ್ ಪಾಂಡೇಶ್ವರ, ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ವೌಲವಿ ಜೌಹರ್ ಐನಿಕ್ಕೋಡ್, ವೌಲವಿ ಅಶ್ರಫ್ ಇಸ್ಲಾಹಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟಿ.ಇಸ್ಮಾಯೀಲ್ ತಲಪಾಡಿ ಸ್ವಾಗತಿಸಿದರು. ಅರ್ಶದ್ ಮೂಸಾ ವಂದಿಸಿದರು.

ಜ.22: ರಸಪ್ರಶ್ನೆ ಸ್ಪರ್ಧೆ
ಮಂಗಳೂರು, ಜ.19: ರೋಟರಿ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ರೋಟರಿ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟವು ಜ.22ರಂದು ಸಂಜೆ 7:30ಕ್ಕೆ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.
 ರೋಟರಿ ಜಿಲ್ಲಾ 3180ಕ್ಕೆ ಒಳಪಟ್ಟ ಕ್ಲಬ್‌ನ 2 ಸದಸ್ಯರನ್ನೊಳಗೊಂಡ ತಂಡದ ಹೆಸರನ್ನು ಜ.21ರೊಳಗೆ ನೋಂದಾಯಿಸಬಹುದು. ಮಾಹಿತಿಗಾಗಿ ಸ್ಪರ್ಧಾ ಕೂಟದ ನಿರೂಪಕ ರೊ ಡಾ. ದೇವದಾಸ್ ರೈ ಅವರನ್ನು ಮೊ.ಸಂ.98450 81145 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಜ.24: ಕ್ರಿಕೆಟ್ ಪಂದ್ಯ
ವಿಟ್ಲ, ಜ.19: ಫ್ರೆಂಡ್ಸ್ ಅಳಕೆಮಜಲು ಆಶ್ರಯದಲ್ಲಿ 7 ಜನರ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯ ಜ.24ರಂದು ಇಲ್ಲಿನ ಶಾಲಾ ಮೈದಾನದಲ್ಲಿ ನಡೆಯಲಿದೆ. ಮಾಹಿತಿಗೆ ಮೊ.ಸಂ.: 9740402424/ 7760717108ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ. ಮುಲ್ಕಿ: ವೌಲಿದ್ ಮಜ್ಲಿಸ್ ಮುಲ್ಕಿ, ಜ.19: ಇಲ್ಲಿನ ಅಲ್ ಮದ್ರಸತ್ತುನ್ನೂರಿಯ ಕೇಂದ್ರ ಮದ್ರಸದ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್‌ಬಿವಿ ಇದರ ಆಶ್ರಯದಲ್ಲಿ ಬೈತಡ್ಕ ಅಬ್ದುಲ್ಲ ದಾರಿಮಿಯ ನೇತೃತ್ವದಲ್ಲಿ ವೌಲಿದ್ ಮಜ್ಲಿಸ್ ಜರಗಿತು. ಜಮಾಅತ್ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ, ಕಾರ್ಯದರ್ಶಿ ಮುಹಮ್ಮದ್ ಹುಸೈನ್, ಕೆ.ಎಂ. ಶರೀಫ್ ಇಂದಾನಿ, ಎಂ.ಕೆ. ಮುಹಮ್ಮದಲಿ ಹಾಜಿ ಕಾರ್ನಾಡ್, ಅಬ್ದುರ್ರಝಾಕ್ ದೊಡ್ಡಮನೆ, ಬಶೀರ್, ಹಸನ್ ಬಾವ ಮುಲ್ಕಿ, ಇನಾಯತ್ ಚರಂತಿಪೇಟೆ, ಮಾನಾಕ ಮುಲ್ಕಿ, ಶರೀಫ್ ಕನ್ನಂಗಾರ್, ಇಮ್ತಿಯಾಝ್ ಕಾರ್ನಾಡ್, ಸಲೀಂ ಬಸ್ತಿಕಟ್ಟೆ, ಎಸ್ಕೆಎಸ್‌ಬಿವಿ ಪದಾಧಿಕಾರಿಗಳಾದ ನಿಫಾನ್, ಶಾಹುಲ್ ಹಮೀದ್, ಮುಹಮ್ಮದ್‌ಶಾಂ, ನಸೀಫ್, ಅಬ್ದುರ್ರಝಾಕ್, ತಮೀಮ್ ಮತ್ತಿತರರು ಉಪಸ್ಥಿತರಿದ್ದರು


ಜೆಡಿಎಸ್‌ಗೆ ಸೇರ್ಪಡೆ
ವಿಟ್ಲ, ಜ.19: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಬ್ರಾಹೀಂ ಕೈಲಾರ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಮ್ಮುಖ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭ ಮುಹಮ್ಮದ್ ಕುಂಞಿ ವಿಟ್ಲ, ಇಕ್ಬಾಲ್ ಎಲಿಮಲೆ, ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ, ರಾಮ್‌ಗಣೇಶ್, ಪಕ್ಷ ಪ್ರಮುಖರಾದ ರತ್ನಾಕರ ಸುವರ್ಣ, ಜಯಕರ ಆಳ್ವ, ಎ.ಕೆ. ಹಸೈನಾರ್, ಉಮರ್ ಫಾರೂಕ್ ಸುಳ್ಯ ಉಪಸ್ಥಿತರಿದ್ದರು. 

ಧ್ವಜ ದಿನಾಚರಣೆ
 ಮಂಗಳೂರು, ಜ.19: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ)ನ ಅಖಿಲ ಭಾರತ ಸಮ್ಮೇಳನವು ಜ.22ರಿಂದ 25ರವರೆಗೆ ರಾಜಸ್ಥಾನದ ಸಿಖಾರ್‌ನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಬಟ್ಟೆದಡಿ ಘಟಕದ ವತಿಯಿಂದ ಕುತ್ತಾರ್ ತೇವುಲದಲ್ಲಿ ಧ್ವಜ ದಿನ ಆಚರಿಸಲಾಯಿತು. ಈ ಸಂದರ್ಭ ಮಿಥುನ್ ಕುತ್ತಾರ್, ಜೀವನ್‌ರಾಜ್ ಕುತ್ತಾರ್, ನಿತಿನ್ ಕುತ್ತಾರ್, ಅವಿನಾಶ್, ಸುಪ್ರಿತ್, ಲಿಮಿತಾ, ದೀಕ್ಷಾ, ಅಕ್ಷಯ್, ಸಂಕೇತ್, ದೀಕ್ಷಿತ್, ವಿಕಾಸ್ ಉಪಸ್ಥಿತರಿದ್ದರು.


ಜೋಡುಕರೆ ಕಂಬಳದ ಫಲಿತಾಂಶ
ಉಡುಪಿ, ಜ.19: ಇಲ್ಲಿನ ಅಡ್ವೆ ನಂದಿಕೂರಿನ 25ನೆ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳೋತ್ಸವ ಫಲಿತಾಂಶ ಹೀಗಿವೆ. ವಿವರಗಳು: ಹಗ್ಗ ಹಿರಿಯ ವಿಭಾಗ: ಪ್ರ- ಮಾಳ ಆನಂದ ಶೆಟ್ಟಿ ಅವರ ಕೋಣಗಳು (ಓಡಿಸಿದವರು ನಿಶಾಂತ್ ಶೆಟ್ಟಿ), ದ್ವಿ-ಕಾರ್ಕಳ ಜೀವನ್‌ದಾಸ್ ಅಡ್ಯಂತಾಯರ ಕೋಣಗಳು (ಓಡಿಸಿದವರು ಕೊಕ್ಕರ್ಣೆ ಸುರೇಶ್ ನಾಯ್ಕಿ). ಹಗ್ಗ ಕಿರಿಯ: ಪ್ರ- ಕಾಂತಾವರ ರಘುನಾಥ ದೇವಾಡಿಗ (ಓಡಿಸಿದವರು ಪ್ರವೀಣ್ ಕೋಟ್ಯಾನ್), ದ್ವಿ-ಸಾಚಿ ಅನಿಲ್ ಶೆಟ್ಟಿ (ಓಡಿಸಿದವರು ರೋಹಿತ್‌ಕುಮಾರ್).
ನೇಗಿಲು ಹಿರಿಯ: ಪ್ರ-ಬಾಡ ಪೂಜಾರಿ (ಓಡಿಸಿದವರು ಇರ್ವತ್ತೂರು ಆನಂದ), ದ್ವಿ- ಬೋಳದಗುತ್ತು ಸತೀಶ್ ಶೆಟ್ಟಿ (ಓಡಿಸಿದವರು ಹಕ್ಕೇರಿ ಸುರೇಶ್ ಶೆಟ್ಟಿ). ನೇಗಿಲು ಕಿರಿಯ: ಪ್ರ-ಮೂಡುಬಿದಿರೆ ಹರ್ಷವರ್ಧನ ಪಡಿವಾಳ್ (ಓಡಿಸಿದವರು ರೋಹಿತ್‌ಕುಮಾರ್), ದ್ವಿ- ಬೋಳದಗುತ್ತು ಸತೀಶ್ ಶೆಟ್ಟಿ (ಓಡಿಸಿದವರು ಮರೋಡಿ ಶ್ರೀಧರ).
 ಮೇಲ್‌ಹಲಗೆ: ಪ್ರ- ತೆಕ್ಕಟ್ಟೆ ಆನಂದ ದೇವಾಡಿಗ (ಓಡಿಸಿದವರು ಶೀರೂರು ಗೋಪಾಲ ನಾಯ್ಕೆ), ದ್ವಿ- ಬೋಳಾರ ತ್ರಿಶಾಲ್ ಪೂಜಾರಿ (ಓಡಿಸಿದವರು ಲೋಕಯ್ಯ ಗೌಡ). ಕನೆಹಲಗೆ: ಬಾರಕೂರು ಶಾಂತರಾಮ ಶೆಟ್ಟಿ (ಓಡಿಸಿದವರು ಮಂದಾರ್ತಿ ಶೀರೂರು ಗೋಪಾಲ ನಾಯ್ಕಿ) ಹಾಗೂ ವಾಮಂಜೂರು ನವೀನ್‌ಚಂದ್ರ ಆಳ್ವ (ಓಡಿಸಿದವರು ಶೀರೂರು ನಾರಾಯಣ ನಾಯ್ಕಿ)ರ ಕೋಣಗಳಿಗೆ ಸಮಾನ ಬಹಮಾನ.
ಬಹುಮಾನ ವಿತರಣ ಸಮಾರಂಭದಲ್ಲಿ ಉದ್ಯಮಿ ಎಸ್.ಕೆ. ಸಾಲ್ಯಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಇನ್ನ ಮುದ್ದಾಣು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೇರ್ಕಳ ತ್ಯಾಂಪಣ್ಣ ಶೆಟ್ಟಿ ಉಪಸ್ಥಿತರಿದ್ದರು.

ಅಲ್-ಸಫರ್ ಫ್ರೆಂಡ್ಸ್‌ನ ವಾರ್ಷಿಕೋತ್ಸವ

ವಿಟ್ಲ, ಜ.19: ಬಂಟ್ವಾಳ-ಕೆಳಗಿನಪೇಟೆಯ ಅಲ್-ಸಫರ್ ಫ್ರೆಂಡ್ಸ್‌ನ 15ನೆ ವಾರ್ಷಿಕೋತ್ಸವ ಕಾರ್ಯಕ್ರಮವು ಇಲ್ಲಿನ ಮುಹಮ್ಮದ್ ಅಲಿ ರಸ್ತೆಯ ಮುಸ್ಲಿಮ್‌ಬಝಾರ್‌ನಲ್ಲಿ ನಡೆಯಿತು. ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಸಿ.ಎಂ.ಅನ್ಸಾರ್ ಫೈಝಿ ಬುರ್ಹಾನಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ಹಾಜಿ ಇಸ್ಮಾಯೀಲ್ ಅರಬಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭಾ ಸದಸ್ಯ ಮೂನಿಶ್ ಅಲಿ ಅಹ್ಮದ್, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಅಧ್ಯಕ್ಷ ಹಾರೂನ್ ರಶೀದ್, ಪಳಲುದ್ದೀನ್ ವ್ಯಾಯಾಮ ಶಾಲಾ ಅಧ್ಯಕ್ಷ ಸೈಯದ್ ಮುಹಮ್ಮದ್ ಶಕೀಲ್, ಪಿಎಫ್‌ಐ ಬಂಟ್ವಾಳ ಅಧ್ಯಕ್ಷ ಯಾಕೂಬ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎ. ಮುಹಮ್ಮದ್, ಜಮಾಅತೆ-ಇಸ್ಲಾಮಿ ಹಿಂದ್ ಬಂಟ್ವಾಳ ವರ್ತುಲ ಅಧ್ಯಕ್ಷ ಜಿ.ಎಂ. ಹಮೀದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಅಬ್ದುಲ್ಲತೀಫ್ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫ್ರೆಂಡ್ಸ್ ಪದಾಧಿಕಾರಿಗಳಾದ ಫಾರೂಕ್, ಯಾಸಿರ್, ಶಂಸೀರ್, ಶುಕೂರ್, ಕುರ್ಶಿದ್, ನಿಝಾಂ, ಜಾಬಿರ್, ಇಕ್ಬಾಲ್, ಸಮೀರ್, ಸಾಬಿತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಹತ್ತು ಸಾವಿರ ರೂ. ಚೆಕ್‌ನ್ನು ಯತೀಂ ಫಂಡ್‌ಗಾಗಿ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಎಂ.ಎಚ್.ಆರ್.ಹಂಝ ಮುಸ್ಲಿಯಾರ್ ತಂಡದವರಿಂದ ‘ಕಣ್ಣೀರಿಂಡೆ ಮನಿಯರ’ ಎಂಬ ವಿಷಯದಲ್ಲಿ ಕಥಾ ಪ್ರಸಂಗ ನಡೆಯಿತು. ಅಲ್-ಸಫರ್ ಫ್ರೆಂಡ್ಸ್ ಸದಸ್ಯ ಇರ್ಶಾದ್ ಸ್ವಾಗತಿಸಿದರು. ಕಾರ್ಯದರ್ಶಿ ರಿಝ್ವಾನ್ ವಂದಿಸಿದರು.

ಮತದಾರರ ಪಟ್ಟಿ ಲೋಪದೋಷ ಸರಿಪಡಿಸಲು: ಸಚಿವ ಖಾದರ್ ಸೂಚೆ
ಮಂಗಳೂರು, ಜ.19: ಮಂಗಳೂರು ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಕೆಲವೊಂದು ಲೋಪದೋಷಗಳಿರುವುದಾಗಿ ಕ್ಷೇತ್ರದ ಮತದಾರರು ದೂರು ಸಲ್ಲಿಸುತ್ತಿದ್ದು, ಈಬಗ್ಗೆ ಗ್ರಾಮಕರಣಿಕರು ಸೂಕ್ತ ಕ್ರಮಕೈಗೊಂಡು ಮತದಾರರ ಪಟ್ಟಿಯ ಲೋಪಗಳನ್ನು 10 ದಿನಗಳೊಳಗಾಗಿ ಸರಿಪಡಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕೆಲವು ತಾಂತ್ರಿಕ ಕಾರಣಗಳಿಂದ ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಜನಹಿತ ಯೋಜನೆಗಳ ಸೌಲಭ್ಯಗಳು ಯೋಗ್ಯ ಫಲಾನುಭವಿಗಳಿಗೆ ದೊರಕುತ್ತಿಲ್ಲ ಎಂದು ತಿಳಿಸಿದ ಸಚಿವರು, ಬಿಪಿಎಲ್ ಪಡಿತರ ಚೀಟಿಗಳನ್ನು ಯೋಗ್ಯ ಫಲಾನುಭವಿಗಳಿಗೆ ಹಂಚುವಲ್ಲಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಯಾವುದೇ ಕಾರಣಕ್ಕೂ ಸಂಬಂಧವಿಲ್ಲದ 3ನೆ ವ್ಯಕ್ತಿಯ ಸೂಚನೆ ಸಲಹೆ ಮೇರೆಗೆ ಪಟ್ಟಿಯಿಂದ ತೆಗೆದು ಹಾಕದೆ ಮತದಾರರ ಮನೆಗೆ ಗ್ರಾಮಕರಣಿಕರು ಖುದ್ದು ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ಪಡೆದು ಹೆಸರುಗಳನ್ನು ಪಟ್ಟಿಗೆ ಸೇರಿಸುವ ಅಥವಾ ತೆಗೆದು ಹಾಕುವ ಬಗ್ಗೆ ಕ್ರಮ ವಹಿಸುವಂತೆ ಗ್ರಾಮಕರಣಿಕ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಆರ್.ಬಿ. ಶಿವಶಂಕರಪ್ಪ, ತಾಪಂ ಇಒ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.


ಇರ್ವತ್ತೂರು: ಬುರೂಝ್ ಶಾಲಾ ವಾರ್ಷಿಕೋತ್ಸವ
ಬಂಟ್ವಾಳ, ಜ.19: ಎಲ್ಲ ಜಾತಿ, ಧರ್ಮ ಮತ್ತು ಮತಗಳು ಒಗ್ಗೂಡಿ ಒಂದೇ ಹೆಸರಿನಲ್ಲಿ ವಿದ್ಯಾರ್ಥಿಗಳು ಎಂದು ಕರೆಯಲ್ಪಡುವ ಶಾಲೆಯು ನಿಜಕ್ಕೂ ಪ್ರಜಾಪ್ರಭುತ್ವದ ನೆಲೆಯಾಗಿದೆ ಎಂದು ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದ್ದಾರೆ. ತಾಲೂಕಿನ ಇರ್ವತ್ತೂರು ಸಮೀಪದ ರಝಾ ನಗರದ ಬುರೂಝ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 17ನೆ ವಾರ್ಷಿಕೋತ್ಸವ ಮತ್ತು ಪ್ರತಿಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಜಿಲ್ಲಾ ಕಂಬಳ ಸಮಿತಿ ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಯಶೋಧರ ಶೆಟ್ಟಿ, ತಾಪಂ ಸದಸ್ಯ ಬಿ.ಪದ್ಮಶೇಖರ ಜೈನ್, ರಮೇಶ್ ಕುಡ್ಮೇರ್, ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ಚಂದ್ರಶೇಖರ್ ರೈ, ಸದಸ್ಯೆ ಜಯಶ್ರೀ, ಪತ್ರಕರ್ತ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಧ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾ ಸ್ವಾಗತಿಸಿದರು. ಮುಖ್ಯಶಿಕ್ಷಕ ಲೋಕಯ್ಯ ಶಿಶಿಲ ವರದಿ ವಾಚಿಸಿದರು. ಶಿಕ್ಷಕಿ ಮಮತಾ ಆರ್. ಗೌಡ ವಂದಿಸಿದರು. ಶಿಕ್ಷಕಿಯರಾದ ಸಂಧ್ಯಾ ಶೆಟ್ಟಿ, ಎಸ್.ಪಿ.ರಝಿಯಾ, ಶೆಹನಾಝ್ ಕಾರ್ಯಕ್ರಮ ನಿರೂಪಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X