ಟೆಂಪೋ ಢಿಕ್ಕಿ: ಬೈಕ್ ಸವಾರ ಗಂಭೀರ
ಪುತ್ತೂರು, ಜ.19: ಆಪೆ ಟೆಂಪೋ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಮಾಣಿ ಮೈಸೂರು ರಾಜ್ಯ ರಸ್ತೆಯ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ನಡೆದಿದೆ. ಬೈಕ್ ಸವಾರ ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ಜಗದೀಶ್(18) ಗಾಯಗೊಂಡವರು. ಸಂಪ್ಯದ ಕಡೆಗೆ ತೆರಳುತ್ತಿದ್ದ ಆಪೆ ಟೆಂಪೋ ಮತ್ತು ಪುತ್ತೂರಿಗೆ ತೆರಳುತ್ತಿದ್ದ ಜಗದೀಶ್ ಅವರು ಚಲಾಯಿಸುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಜಗದೀಶ್ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





