ದ.ಕ.: ಜಿಪಂ-ತಾಪಂ ಚುನಾವಣೆ ಚುನಾವಣಾಧಿಕಾರಿಗಳ ನೇಮಕ
ಮಂಗಳೂರು, ಜ.19: ದಕ್ಷಿಣ ಕನ್ನಡ ಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಕ್ಷೇತ್ರಗಳಿಗೆ ತಾಲೂಕುವಾರು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿ ಕಾರಿಯನ್ನು ನೇಮಿಸಲಾಗಿದೆ.
ದ.ಕ. ಜಿಪಂ ಚುನಾವಣೆಗೆ ಮಂಗಳೂರು ತಾಲೂಕು ಚುನಾವಣಾಧಿಕಾರಿಯಾಗಿ ಯೋಗೀಶ್ ಎಚ್.ಆರ್., ಸಹಾಯಕ ಚುನಾವಣಾಧಿಕಾರಿಯಾಗಿ ಜೀನ್ ಮೇರಿ ತಾವ್ರೋ, ಬಂಟ್ವಾಳ ತಾಲೂಕಿನ ಚುನಾವಣಾಧಿಕಾರಿ ಯಾಗಿ ಡಾ.ಅಶೋಕ್ ಡಿ.ಆರ್., ಸಹಾಯಕ ಚುನಾವಣಾ ಧಿಕಾರಿಯಾಗಿ ಎಸ್.ಕೆ. ಸಿದ್ದರಾಜು, ಬೆಳ್ತಂಗಡಿ ತಾಲೂಕಿನ ಚುನಾವಣಾಧಿಕಾರಿಯಾಗಿ ರಾಜು ಮೊಗವೀರ, ಸಹಾಯಕ ಚುನಾವಣಾಧಿಕಾರಿಯಾಗಿ ಮೋಹನ್‌ಕುಮಾರ್, ಪುತ್ತೂರು ತಾಲೂಕು ಚುನಾವಣಾಧಿಕಾರಿಯಾಗಿ ರಾಜೇಂದ್ರ ಕೆ.ವಿ., ಸಹಾಯಕ ಚುನಾವಣಾಧಿಕಾರಿಯಾಗಿ ನಯೀಮ್ ಹುಸೈನ್, ಸುಳ್ಯ ತಾಲೂಕು ಚುನಾವಣಾಧಿಕಾರಿಯಾಗಿ ಅರುಣಪ್ರಭ, ಸಹಾಯಕ ಚುನಾವಣಾಧಿಕಾರಿ ಭವಾನಿಶಂಕರ್ ನೇಮಕ ಗೊಂಡಿದ್ದಾರೆ.
ತಾಪಂ ಚುನಾವಣೆಗೆ ಮಂಗಳೂರು ತಾಲೂಕು ಚುನಾವಣಾಧಿಕಾರಿಗಳಾಗಿ ಮುಹಮ್ಮದ್ ಇಸಾಕ್, ಆರ್.ವಿ. ಶಿವಶಂಕರಪ್ಪ, ಜ್ಞಾನೇಶ್, ಉಸ್ಮಾನ್, ಸಹಾಯಕ ಚುನಾವಣಾಧಿಕಾರಿಯಾಗಿ ಮನೋಹರ್ ಕಾಮತ್, ಹೇಮಚಂದ್ರ, ಸುಂದರ ನಾಯ್ಕಾ, ವಸಂತ ಪಾಲನ್, ಬಂಟ್ವಾಳ ತಾಲೂಕು ಚುನಾವಣಾಧಿಕಾರಿಯಾಗಿ ಪಿ.ಎಫ್.ಮಿರಾಂದ, ನಾರಾಯಣ ಶೆಟ್ಟಿ, ಶೇಷಶಯನ, ಸಹಾಯಕ ಚುನಾವಣಾಧಿಕಾರಿಯಾಗಿ ಪ್ರಕಾಶ್, ಉಮೇಶ್, ಬಿ.ಎಸ್.ಮಂಜಪ್ಪ, ಬೆಳ್ತಂಗಡಿ ತಾಲೂಕು ಚುನಾವಣಾಧಿಕಾರಿಯಾಗಿ ಪ್ರಸನ್ನಮೂರ್ತಿ, ಸುಭಾಶ್ಚಂದ್ರ, ತಿಲಕ್‌ಪ್ರಸಾದ್ ಜಿ. ಸಹಾಯಕ ಚುನಾವಣಾಧಿಕಾರಿಯಾಗಿ ಗಣೇಶ್ ಪೂಜಾರಿ, ಚಿದಾನಂದ ಹೂಗಾರ್, ಶಿವಪ್ರಕಾಶ್, ಪುತ್ತೂರು ತಾಲೂಕು ಚುನಾವಣಾಧಿಕಾರಿಯಾಗಿ ಸಣ್ಣರಂಗಯ್ಯ, ಜಿ.ಎಸ್.ಶಶಿಧರ, ಹರೀಶ್ ಜಿ.ಎನ್., ಸಹಾಯಕ ಚುನಾವಣಾಧಿಕಾರಿಯಾಗಿ ಗಣಪತಿ ಭಟ್, ಜತ್ತಪ್ಪ ಗೌಡ, ಪ್ರಮೋದ್, ಸುಳ್ಯ ತಾಲೂಕು ಚುನಾವಣಾಧಿಕಾರಿಯಾಗಿ ಅನಂತಶಂಕರ್ ಬಿ., ಸಹಾಯಕ ಚುನಾವಣಾಧಿಕಾರಿಯಾಗಿ ಕೆಂಪಲಿಂಗಯ್ಯರನ್ನು ನೇಮಕ ಮಾಡಲಾಗಿದೆ.





