ಸೊಮಾಲಿಯದಲ್ಲಿ ಮೃತ ಸೈನಿಕರ ದೇಹಗಳು ಕೆನ್ಯಕ್ಕೆ
ನೈರೋಬಿ (ಕೆನ್ಯ), ಜ.19: ಸೊಮಾಲಿಯದಲ್ಲಿ ಬಂಡುಕೋರರಿಂದ ಹತರಾದ ಕೆನ್ಯ ಸೈನಿಕರ ಮೃತದೇಹಗಳನ್ನು ಸೋಮವಾರ ರಾತ್ರಿಯ ಹೊತ್ತಿಗೆ ಕೆನ್ಯ ರಾಜಧಾನಿ ನೈರೋಬಿಗೆ ತರಲಾಗಿದೆ.
ನಾಲ್ವರು ಸೈನಿಕರ ಮೃತದೇಹಗಳನ್ನು ಇಲ್ಲಿಗೆ ತರಲಾಗಿದೆ.
ಆದಾಗ್ಯೂ, ಮೃತಪಟ್ಟ ಸೈನಿಕರ ಸಂಖ್ಯೆಯನ್ನು ಕೆನ್ಯ ಸರಕಾರ ಬಿಡುಗಡೆಮಾಡಿಲ್ಲ.
‘‘ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೈನಿಕರನ್ನು ಬರಮಾಡಿಕೊಳ್ಳುವ ನಿರೀಕ್ಷೆಯಿದೆ’’ ಎಂದು ರಕ್ಷಣಾ ಸಚಿವೆ ರೇಶಲಿ ಒಮಾಮೊ ಹೇಳಿದರು.
ನೈರುತ್ಯ ಸೊಮಾಲಿಯದಲ್ಲಿರುವ ಆಫ್ರಿಕನ್ ಒಕ್ಕೂಟ ಸೇನೆಯ ನೆಲೆಯ ಮೇಲೆ ಅಲ್-ಶಬಾಬ್ ಉಗ್ರರು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದರು. ಹತ್ತಕ್ಕೂ ಅಧಿಕ ಗಾಯಾಳುಗಳನ್ನು ರವಿವಾರ ಮತ್ತು ಸೋಮವಾರ ವಾಪಸ್ ಕೆನ್ಯಕ್ಕೆ ತರಲಾಗಿದೆ.
Next Story





