‘ಅಮ್ಮಾ’ಕಾಲ್ ಸೆಂಟರ್‌ಗೆ ಚಾಲನೆ
ಚೆನ್ನೈ, ಜ.19: ಅಮ್ಮಾ ಕಾಲ್ ಸೆಂಟರ್ ಹಾಗೂ 1100 ಉಚಿತ ಸಹಾಯವಾಣಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಾಲನೆ ನೀಡಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಕಂಡುಬರುವ ಕುಂದುಕೊರತೆಗಳು ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಸಾರ್ವಜನಿಕರು ಇದನ್ನು ಬಳಸಬಹುದಾಗಿದೆ. ಸಚಿವಾಲಯದಲ್ಲಿರುವ ತನ್ನ ಚೇಂಬರ್‌ನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ನೂತನ ಯೋಜನೆಯನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ ಪ್ರತಿದಿನ 15,000 ಕರೆಗಳನ್ನು ಸ್ವೀಕರಿಸಲು 138 ಕರೆ ನಿರ್ವಾಹಕರನ್ನು ನೇಮಕಮಾಡಲಾಗಿದೆ. ಅಗತ್ಯಕ್ಕೆ ಅನುಸಾರವಾಗಿ ಕರೆ ಸ್ವೀಕರಿಸುವವರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.
Next Story





