ಪುತ್ತೂರು: ಅಕ್ರಮ ಗುಡಿಸಲು ತೆರವು
ಪುತ್ತೂರು, ಜ.19: ನಗರಸಭೆಯ ಆಶ್ರಯ ನಿವೇಶನಕ್ಕಾಗಿ ಇತ್ತೀಚೆಗೆ ನಗರಸಭಾ ವ್ಯಾಪ್ತಿಯ ಬಲ್ನಾಡು ಎಂಬಲ್ಲಿ ಕಾದಿರಿಸಿದ 3.5ಎಕ್ರೆ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ನಗರಸಭೆ ಪೌರಾಯುಕ್ತೆ ರೇಖಾ ಜೆ.ಶೆಟ್ಟಿ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಆಶ್ರಯ ನಿವೇಶನಕ್ಕಾಗಿ ಇತ್ತೀಚೆಗೆ ಬಲ್ನಾಡಿನಲ್ಲಿ 3.5 ಎಕ್ರೆ ಸ್ಥಳವನ್ನು ಖಾದಿರಿಸಲಾಗಿತ್ತು. ಈ ಜಾಗದಲ್ಲಿ ಕೆಲವರು ಗುಡಿಸಲು ಕಟ್ಟಿಕೊಂಡು, ಸ್ಥಳಕ್ಕೆ ಸುಣ್ಣ ಬಳಿದು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಅರಿತ ನಗರಸಭೆ ಪೌರಾಯುಕ್ತೆ, ಕಂದಾಯ ಅಧಿಕಾರಿಗಳು ಮತ್ತು ನಗರಸಭೆ ಎಂಜಿನಿಯರ್ ಹಾಗೂ ಪೌರಕಾರ್ಮಿಕರು ತೆರಳಿ ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸಿದರು. ಪುತ್ತೂರು ನಗರ ಠಾಣೆಯ ಎಎಸ್ಸೈ ರಾಮ ನಾಯ್ಕ, ಸಿಬ್ಬಂದಿ ಉದಯ, ಕೃಷ್ಣಪ್ಪ ಬಂದೋಬಸ್ತ್ ನೀಡಿದ್ದರು.
Next Story





