ಇಂದು ಎಸ್‌ಸಿಡಿಸಿಸಿ ಬ್ಯಾಂಕ್ ತೊಕ್ಕೊಟ್ಟು ಶಾಖೆಯ ಸ್ಥಳಾಂತರ
ಮಂಗಳೂರು, ಜ.19: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ನ ತೊಕ್ಕೊಟ್ಟು ಶಾಖೆಯನ್ನು ತೊಕ್ಕೊಟ್ಟು ಒಳಪೇಟೆ, ಓವರ್ ಬ್ರಿಡ್ಜ್ ಬಳಿಯ ಯು.ಎಸ್.ಕಾಂಪ್ಲೆಕ್ಸ್‌ನ ಒಂದನೆ ಮಹಡಿಗೆ ಸ್ಥಳಾಂತರಗೊಂಡಿದ್ದು, ಜ.20ರಿಂದ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಮತ್ತು ಆರ್‌ಟಿಜಿಎಸ್ ಮತ್ತು ನೆಫ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಬ್ಯಾಂಕಿನ ಪ್ರಕಟನೆ ತಿಳಿಸಿದೆ.
Next Story





