ಉದ್ಯಾವರ: ದುಆ-ದ್ಸಿಕ್ರ್ ಮಜ್ಲಿಸ್

ಕುಂಜತ್ತೂರು, ಜ.19: ಉದ್ಯಾವರ ಮಖಾಂ ಉರೂಸ್ ಪ್ರಯುಕ್ತ ಸೋಮವಾರ ರಾತ್ರಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ದುಆ ಮಜ್ಲಿಸ್‌ಗೆ ನೇತೃತ್ವ ನೀಡಿದರು.
ಅಬ್ದುಲ್ ಹಮೀದ್ ಪೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ನಡೆಸಿದರು.
ಬಳಿಕ ಅಸ್ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ದ್ಸಿಕ್ರ್ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಉರೂಸ್ ಸಮಿತಿ ಅಧ್ಯಕ್ಷ ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಪೂಕುಂಞಿ ತಂಙಳ್, ಇಬ್ರಾಹೀಂ ಉಮರ್ ಹಾಜಿ, ಹುಸೈನ್ ಮುಸ್ಲಿಯಾರ್, ಅಹ್ಮದ್ ಮದನಿ, ಅಲಿಕುಟ್ಟಿ, ಅಚ್ಚಿಕುಂಞಿ ಸಹಿತ ಹಲವರು ಉಪಸ್ಥಿತರಿದ್ದರು. ಜ.20ರಂದು ಉದ್ಯಾವರ ಖತೀಬ್ ಅಬ್ದುಲ್ ಸಲಾಂ ಮದನಿ ದುಆಗೈಯುವರು. ರಾತ್ರಿ 8ಕ್ಕೆ ಇ.ಪಿ.ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.
Next Story





