ಸರ್ಟಿಫಿಕೇಟ್ ಕೋರ್ಸ್
ಉಡುಪಿ, ಜ.19: ಫೆ.1ರಿಂದ ಮಣಿಪಾಲ ವಿವಿ ಆಶ್ರಯದಲ್ಲಿ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದಲ್ಲಿ ಎರಡು ತಿಂಗಳ ಸಂಜೆ ಸರ್ಟಿಫಿಕೇಟ್ ಕೋರ್ಸ್ ಆರಂಭಗೊಳ್ಳಲಿದೆ. ಈ ಕೋರ್ಸ್ ಗಾಂಧೀಜಿಯವರ ಆಮೂಲಾಗ್ರ ಅಧ್ಯಯನ ಮತ್ತು ವರ್ತಮಾನದ ಸವಾಲುಗಳಿಗೆ ಮಹಾತ್ಮಾ ಗಾಂಧಿಯವರ ಪರ್ಯಾಯಗಳನ್ನು ಶೋಧಿಸುತ್ತದೆ. ತನ್ನ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳುವ ಉದ್ದೇಶವುಳ್ಳ ಪ್ರತಿಯೊಬ್ಬರಿಗೂ ಉಪಯುಕ್ತವಾಗಬೇಕೆಂಬ ನಿಟ್ಟಿನಲ್ಲಿ ಈ ಕೋರ್ಸ್ ಮಾ.30ರಂದು ಮುಕ್ತಾಯಗೊಳ್ಳುತ್ತದೆ.
ಎಂಟು ವಾರಗಳ ಈ ಕೋರ್ಸ್‌ನಲ್ಲಿ 1. ಗಾಂಧೀಜಿಯವರ ಜೀವನ, ತತ್ವಜ್ಞಾನ, ನೀತಿ ಮತ್ತು ರಾಜಕೀಯ. 2. ಶಾಂತಿ: ರಾಷ್ಟ್ರೀಯ ಮತ್ತು ಜಾಗತಿಕ. 3. ಆರ್ಥಿಕತೆ, ಪರಿಸರ, ವಿಜ್ಞಾನ, ತಂತ್ರಜ್ಞಾನ ಮತ್ತು ಆರೋಗ್ಯ. 4. ಪತ್ರಿಕೋದ್ಯೋಗ, ಸಾಹಿತ್ಯ, ಕಲೆ ಮತ್ತು ಸೌಂದರ್ಯಶಾಸ್ತ್ರ. 5. ಮಹಿಳೆ, ದಲಿತರು ಮತ್ತು ಸಿದ್ಧಾಂತಗಳು. 6. ಶಿಕ್ಷಣ ಮತ್ತು ಸಮಾಜಕಾರ್ಯ. 7. ನಾಯಕತ್ವ ಮತ್ತು ನಿರ್ವಹಣೆ. 8.ಜಾಗತೀಕರಣ ಮತ್ತು ಸಾಮಾಜಿಕ ಚಳವಳಿಗಳು ಈ ವಿಷಯಗಳನ್ನು ಚರ್ಚಿಸಲಾಗುವುದು.
ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿದ್ದು, ತರಗತಿಗಳು ವಾರದಲ್ಲಿ ನಾಲ್ಕುದಿನ (ಮಂಗಳವಾರದಿಂದ ಶುಕ್ರವಾರದವರೆಗೆ) ಸಂಜೆ 5:30 ರಿಂದ 7 ಗಂಟೆಯವರೆಗೆ ನಡೆಯಲಿವೆ. ವಿದ್ಯಾರ್ಹತೆ 10+2 ಶಿಕ್ಷಣ. ತರಗತಿಗಳು ನಡೆಯುವ ಸ್ಥಳ ಹಳೆಯ ಟ್ಯಾಪ್ಮಿ ಕಟ್ಟಡ ಮಣಿಪಾಲ ಪೋಸ್ಟ್ ಆಫೀಸ್‌ನ ಹಿಂಭಾಗ, ಮಣಿಪಾಲ- 576104. ವಿವರಗಳಿಗೆ varadesh.gange@manipal.edu ಈ ವಿಳಾಸಕ್ಕೆ ಬರೆದು ಅಥವಾ ದೂ.ಸಂ: 0820-2922996ನ್ನು ಸಂಪರ್ಕಿಸಬಹುದು ಅಥವಾ www.manipal.edu (events) ಮೂಲಕವೂ ಪಡೆಯಬಹುದು ಎಂದು ಕೇಂದ್ರದ ಪ್ರಕಟನೆ ತಿಳಿಸಿದೆ.





