ಮೂಡುಬಿದಿರೆ : ರಸ್ತೆ ಸುರಕ್ಷತಾ ಸಪ್ತಾಹ

ಮೂಡುಬಿದಿರೆ : ಜೆಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಪೊಲೀಸ್ ಇಲಾಖೆ ಮೂಡುಬಿದಿರೆ ಇವುಗಳ ಅಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಶಾಲಾ ಮಕ್ಕಳಿಂದ ಜಾಗ್ರತಿ ಮೂಡಿಸುವ ಕಾರ್ಯ ಕ್ರಮವು ಬುಧವಾರ ಬೆಳಿಗ್ಗೆ ತಹಶೀಲ್ದಾರ್ ಕಛೇರಿ ಬಳಿ ನಡೆಯಿತು.
ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ವಿದ್ಯಾರ್ಥಿಗಳು ಗುಲಾಬಿ ಹೂವನ್ನು ನೀಡಿ ದಯವಿಟ್ಟು ಧರಿಸಿ ಪ್ರಾಣವನ್ನು ಉಳಿಸಿ ಎಂದು ವಿನಂತಿಸಿದರು. ಜೆಸಿಐ ಅಧ್ಯಕ್ಷೆ ರಶ್ಮಿತಾ ಯುವರಾಜ ಜ್ಯೆನ್ ಹಾಗೂ ಸದಸ್ಯರು ಮತ್ತು ರೋಟರ್ಯಾಕ್ಟ್ ಅಧ್ಯಕ್ಷ ಮಹಮ್ಮದ್ ಅರಿಫ್ ಉಪಸ್ಥಿತರಿದ್ದರು.


Next Story





