ಪಾಕ್‌ನಲ್ಲಿ ಬಚಾಖಾನ್ ವಿವಿ ಮೇಲೆ ಉಗ್ರರ ದಾಳಿ ; ಓರ್ವ ಪ್ರೊಫೆಸರ್ ಸೇರಿದಂತೆ 22ಬಲಿ

ಪೇಶಾವರ, ಜ.20: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಇಂದು ಬೆಳಗ್ಗೆ ಇಲ್ಲಿನ ಬಚಾಖಾನ್ ವಿವಿಗೆ ಉಗ್ರರು ದಾಳಿ ನಡೆಸಿದ ಪರಿಣಾಮ 22 ಮಂದಿ ಬಲಿಯಾಗಿದ್ದಾರೆ.
ಓರ್ವ ಪ್ರೊಫೆಸರ್ ,ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಸೇರಿದಂತೆ 22 ಮಂದಿ ಬಲಿಯಾಗಿದ್ದಾರೆ. ಗುಂಡೇಟಿನಿಂದ 60ರಿಂದ 70ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
4 ಉಗ್ರರನ್ನು ಪಾಕ್‌ಸೇನೆ ಹೊಡೆದುರುಳಿಸಿದೆ.ಇನ್ನೂ10 ಉಗ್ರರು ವಿವಿ ಆವರಣದಲ್ಲಿ ಅಡಗಿಗೊಂಡಿದ್ದಾರೆ ಎಂದು ತಿಳಿದು ಬಂದಿದೆ
ಖೈಬರ್ ಪ್ರಾಂತ್ಯ ಚರ್ಸಾಡ್ಡಾದಲ್ಲಿರುವ ವಿವಿಗೆ ಪ್ರವೇಶಿಸಿದ ಉಗ್ರರು ತರಗತಿಗಳಿಗೆ ನುಗ್ಗಿ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ.ವಿವಿ ಆವರಣದಲ್ಲಿ 7 ಕಡೆಗಳಲ್ಲಿ ಬಾಂಬ್ ಹಾಗೂ ಗ್ರೇನೆಡ್‌ಗಳನ್ನು ಸ್ಫೋಟಿಸಿದ್ದಾರೆ. ಬಚಾಖಾನ್ ವಿವಿ ಆವರಣ ಆವರಣ ಅಕ್ಷರಶ: ರಣಾಂಗಣವಾಗಿದೆ.
ವಿವಿಯಲ್ಲಿ ಪಾಕ್ ಸೇನಾಪಡೆ , ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ.ತೆಹ್ರೀಕ್ ಎ ತಾಲಿಬಾನ್ ದಾಳಿಯ ಹೊಣೆಹೊತ್ತುಕೊಂಡಿದೆ.





