ರೋಹಿತ್ ಆತ್ಮಹತ್ಯೆ ಪ್ರಚೋದನೆ ಖಂಡಿಸಿ ಪ್ರತಿಭಟನೆ

ಮಂಗಳೂರು, ಜ.20: ಹೈದರಾಬಾದಿನಲ್ಲಿ ಸಂಶೋಧಕ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಇವರ ಆತ್ಮಹತ್ಯೆಯ ಪ್ರಚೋದನೆಯನ್ನು ಖಂಡಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಎಸ್‌ಎಫ್‌ಐ, ಡಿವೈಎಫ್‌ಡಿ, ಕರ್ನಾಟಕ ದಲಿತ ಹಕ್ಕುಗಳ ಸಮಿತಿ, ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಚಾರವಾದಿ ಸಂಘಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವೂ ಸೇರಿದಂತೆ ಹಲವು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳಿವೆ. ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ, ವೈಚಾರಿಕತೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಅವರು ಆಗಾಗ ಹಮ್ಮಿಕೊಳ್ಳುತಿತಿದ್ದರು. ಅಂಥ ವಿದ್ಯಾರ್ಥಿಗಳ ಮೇಲೆ ತೀವೃಗಾಮಿತ್ವದ ಹಾಗೂ ದೇಶದ್ರೋಹದ ದೂರು ದಾಖಲಿಸಿರುವುದು ಅಲ್ಲಿನ ಸ್ಥಾಪಿತ ಹಿತಾಸಕ್ತಿಗಳ ಕೃತ್ಯ ಎಂದರು.
ಚಿಂತಕ ಪ್ರೊ ಭೂಮಿಗೌಡ, ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ)ರು ಹಿರಿಯ ಮುಖಂಡರಾದ ಎಂ. ದೇವರಾಜ್, ಪಿಯುಸಿಎಲ್‌ನ ಹಿರಿಯ ಮುಖಂಡರಾದ ಪಿ.ಬಿ. ಡೇಸಾ, ಡಿವೈಎಫ್‌ಐ ರಾಜ್ಯಸಮಿತಿ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕರಾದ ಲಿಂಗಪ್ಪ ನಂತೂರು, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖಂಡರಾದ ವಾಸುದೇವ ಉಚ್ಚಿಲ್ ಮಾತನಾಡಿದರು.
ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷ ಡಿ.ಎ. ಪ್ರಸನ್ನ, ನಿವೃತ್ತ ಪ್ರಾಧ್ಯಾಪಕ ಪ್ರೊ. ನರಸಿಂಹ ಮೂರ್ತಿ, ಮಕ್ಕಳ ಹಕ್ಕುಗಳ ಸಂಘಟನೆಯ ರೆನ್ನಿ ಡಿಸೋಜ, ರಂಗ ಕಲಾವಿದ ನಾದಾ ಮಣಿನಾಲ್ಕೂರು, ನೆಹರೂ ಯುವಕೇಂದ್ರದ ಸಂಘಟಕ ರಘುವೀರ್ ಹಾಗೂ ಎಸ್‌ಎಫ್‌ಐ ದಲಿತ ಹಕ್ಕುಗಳ ಸಮಿತಿಯ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಸ್‌ಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ನಿತಿನ್ ಕುತಾತಿರ್ ಸ್ವಾಗತಿಸಿ ಪ್ರಾಸಾತಿವಿಕ ಮಾತನಾಡಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ವಂದಿಸಿದರು.










