ಮದ್ರಸದಲ್ಲಿ ಅರಬಿಕ್-ಉರ್ದು ಬದಲಿಗೆ ಇಂಗ್ಲಿಷ್ - ಹಿಂದಿ ಮಾಧ್ಯಮ: ಶಿವ ಸೇನೆ ಮೋದಿಗೆ ಹುಕುಂ !

ಮುಂಬೈ, ಜ.20: ಭಾರತದಲ್ಲಿ ಮದ್ರಸ ಶಿಕ್ಷಣದಲ್ಲಿ ಉರ್ದು ಮತ್ತು ಅರೆಬಿಕ್ ಮಾಧ್ಯಮವನ್ನು ನಿಷೇಧಿಸಬೇಕು. ಇವುಗಳ ಬದಲಿಗೆ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮವನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಶಿವಸೇನೆ ಪ್ರಧಾನಿ ನರೇಂದ್ರ ಮೋದಿಗೆ ಶಿವ ಸೇನೆ ಸಲಹೆ ನೀಡಿದೆ.
ಪ್ರಧಾನಿ ಮೋದಿ ಅವರು ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರೊನ್ ಅವರಂತೆ ಈ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕು. ಬ್ರಿಟನ್‌ನ ನಿರ್ಧಾರದಂತೆ ಭಾರತವೂ ಮದ್ರಸದಲ್ಲಿ ಧಾರ್ಮಿಕ ಶಿಕ್ಷಣವನ್ನು ಉರ್ದು ಮತ್ತು ಅರಬಿಕ್ ಮಾಧ್ಯಮದ ಬದಲಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೀಡಿದರೆ ಭಾರತಕ್ಕೆ ಹೆಚ್ಚಿನ ಪ್ರಯೋಜನವಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಬುಧವಾರ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು ತಮ್ಮ ಬೇಳೆ ಬೇಯಿಸಲು ಅವಿದ್ಯಾವಂತ ಮುಸ್ಲಿಂ ಮಹಿಳೆಯರನ್ನು ಬಳಸುತ್ತಿದ್ದಾರೆ ಎಂಬ ಬ್ರಿಟನ್ ಸರಕಾರದ ವಾದವನ್ನು ಸಾಮ್ನಾ ಸಮರ್ಥಿಸಿಕೊಂಡಿದೆ. ಬ್ರಿಟನ್ ಇತ್ತೀಚೆಗೆ ವಲಸಿಗರ ವೀಸಾ ನೀತಿಯನ್ನು ಕಠಿಣಗೊಳಿಸಿತ್ತು. ಯಾರಿಗೆ ಇಂಗ್ಲಿಷ್ ಗೊತ್ತಿಲ್ಲವೊ ಅವರಿಗೆ ಗರಿಪಾರು ಎಚ್ಚರಿಕೆ ನೀಡಿತ್ತು. ಇತರ ದೇಶಗಳಿಂದ ವಲಸೆ ಬಂದಿರುವ ಮುಸ್ಲಿಂ ಮಹಿಳೆಯರಿಗೆ ಭಾಷಾ ಕೌಶಲ್ಯದ ಸುಧಾರಣೆಗೆ 20 ಮಿಲಿಯನ್ ಪೌಂಡ್ ಮೊತ್ತದ ಯೋಜನೆ ಪ್ರಕಟಿಸಿತ್ತು.
ಕೇಂದ್ರ ಸರಕಾರ ಏಕರೂಪ ನಾಗರಿಕ ಸಂಹಿತೆ ಮತ್ತು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸಾಮ್ನಾ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.
.







