ಜ. 26 ರಂದು ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ 13 ನೆ ವರ್ಷದ ಸಂಭ್ರಮಾಚರಣೆ
ಬೆಳ್ತಂಗಡಿ: ಅನ್ಯಾನ್ಯ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿರುವ ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ 13 ನೇ ವರ್ಷದ ಸಂಭ್ರಮಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಸೇವಾ ಕಾರ್ಯಗಳ ಲೋಕಾರ್ಪಣೆ ಜ. 26 ರಂದು ಕನ್ಯಾಡಿಯ ಜ್ಞಾನಗಂಗಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಭಾರತೀಯ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಲೆಬೆಟ್ಟು ವನದುರ್ಗಾ ದೇವಸ್ಥಾನದ ಮೊಕ್ತೇಸರ ಕಾಂತಾಜೆ ಈಶ್ವರ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪನ್ಯಾಸಕ ಎನ್. ನಟೇಶ್ ಮುಖ್ಯ ಭಾಷಣ ನಡೆಯಲಿದೆ.
ಧರ್ಮಸ್ಥಳ ಮತ್ತು ಉಜಿರೆ ಜಿ.ಪಂ.ಗೆ ಒಳಪಟ್ಟ 21 ಗ್ರಾಮಗಳ ತಲಾ ಒಂದು ಶಾಲೆಯ ವಾಚನಾಲಯಕ್ಕೆ ರೂ. 5000 ಮೌಲ್ಯದ ಪುಸ್ತಕಗಳು, ತಾಲೂಕಿನ 6 ಶಾಲೆಗಳ ವಾಚನಾಲಯಕ್ಕೆ ರೂ. 20,000 ಮೌಲ್ಯದ ಕಪಾಟು ಮತ್ತು ಪುಸ್ತಕಗಳು, ತಾಲೂಕಿನ 25 ಅರ್ಹ ಮನೆಗಳಿಗೆ ತಲಾ ರೂ. 10,000 ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆ, ದೇಹದಾನಕ್ಕಾಗಿ ನೋಂದಾಯಿಸಲ್ಪಟ್ಟ ದಾನಿಗಳಿಗೆ ಸನ್ಮಾನ, ಸೇವಾ ಚಟುವಟಿಕೆಗಳಲ್ಲಲಿ ತೊಡಗಿರುವ ಸಮಾಜ ಸೇವಕರಿಗೆ ಗೌರವ ಸಮ್ಮಾನ ಕಾಯರ್ಯಕ್ರಮದ ದಿನ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಈಗಿನ ಕಾರ್ಯದರ್ಶಿ ಬಿ. ಕೃಷ್ಣಪ್ಪ ಗುಡಿಗಾರ್, ಪುರಂದರ, ಮುರಳೀಧರ ದಾಸ್ ಧರ್ಮಸ್ಥಳ ಇದ್ದರು.







