26ವರ್ಷಗಳ ಬಳಿಕ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಆರ್ಮಿಯ ಶ್ವಾನ ದಳ

ಹೊಸದಿಲ್ಲಿ, ಜ.20: ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಯೋಧರೊಂದಿಗೆ ಸೇನಾ ಶ್ವಾನಗಳು ಹೆಜ್ಜೆ ಹಾಕಲಿದೆ.
26 ವರ್ಷಗಳ ಬಳಿಕ ಮೊದಲ ಬಾರಿ ಸೇನಾ ಶ್ವಾನಗಳು ಪೆರೇಡ್‌ನಲ್ಲಿ ಭಾಗವಹಿಸುತ್ತಿದೆ.
ಒಟ್ಟು ೩೬ ಶ್ವಾನಗಳು ಪೆರೇಡ್‌ನಲ್ಲಿ ಹೆಜ್ಜೆ ಹಾಕಲಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಸೇನಾ ಶ್ವಾನಗಳಿಗೆ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಲು ತರಬೇತಿ ನೀಡಲಾಗುತ್ತಿದೆ. ಶ್ವಾನ ಅದರ ತರಬೇತಿದಾರನೊಂದಿಗೆ ದಿನನಿತ್ಯ 12 ಕಿ.ಮೀ ಕಾಲ ಕಾಲ್ನಡಿಗೆಯಲ್ಲಿ ಸಾಗಿ ತಾಲೀಮ್‌ನಲ್ಲಿ ಪಾಲ್ಗೊಳ್ಳುತ್ತದೆ. ಒಟ್ಟು 45 ನಿಮಿಷಗಳ ತಾಲೀಮ್ ಇರುತ್ತದೆ.
.ಎರಡು ವರ್ಷ ಪ್ರಾಯದ ಜರ್ಮನ್ ಶೆಫೇರ್ಡ್ "ಮಾಫಿಯಾ" ಶ್ವಾನ ದಳದ ಲೀಡರ‍್ .ಮಾಫಿಯಾ ಪೆರೇಡ್‌ನಲ್ಲಿ ಶ್ವಾನ ದಳದ ನಾಯಕತ್ವ ವಹಿಸಿಕೊಂಡು ಹೆಜ್ಜೆ ಹಾಕಲು ಕಾಯುತ್ತಿದೆ. ಆರ್ಮಿಯಲ್ಲಿ ಇದೊಂದು ಆಕ್ರಮಣಕಾರಿ ಶ್ವಾನವಾಗಿದೆ.
ಗಣರಾಜ್ಯೋತ್ಸವ ಪೆರೇಡ್‌ನಲ್ಲಿ 8 ಹೆಣ್ಣು ಶ್ವಾನಗಳು ಸೇರಿದಂತೆ ಒಟ್ಟು 36 ಶ್ವಾನಗಳು ಪಾಲ್ಗೊಳ್ಳಲಿದೆ. ಶ್ವಾನಗಳಿಗೆ ಪೆರೇಡ್ ವೇಳೆ ಗಾಯವಾಗದಂತೆ ಎಚ್ಚರವಹಿಸಲಾಗುತ್ತಿದೆ.





