ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ದಲಿತ-ದಲಿತೇತರ ಸಮುದಾಯದ ಮುಖಾಮುಖಿ ಇದಲ್ಲ: ಸಚಿವೆ ಇರಾನಿ

ಹೊಸದಿಲ್ಲಿ,ಜ.20: ಸಂಶೋಧನಾ ವಿಭಾಗದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವು ದೇಶಾದ್ಯಂತ ತೀವ್ರ ಸಂಚಲನವನ್ನೇ ಸೃಷ್ಟಿಸಿದೆ. ದಲಿತ ಹಾಗೂ ದಲಿತೇತರ ವಿದ್ಯಾರ್ಥಿಗಳ ಬಲಪ್ರದರ್ಶನಕ್ಕೆ ಇದು ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಆದಾಗ್ಯೂ ಇದು ದಲಿತ ಹಾಗೂ ದಲಿತೇತರ ವರ್ಗದ ನಡುವಿನ ಮುಖಾಮುಖಿಯಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ.
26 ವರ್ಷದ ವಿದ್ಯಾರ್ಥಿ ವೇಮುಲಾ ರವಿವಾರ ಹಾಸ್ಟೆಲ್‌ನಲ್ಲಿ ಫ್ಯಾನ್ಗೆ ನೇಣುಬಿಗಿದು ಆತ್ಮಹತ್ಯೆಗೈದಿದ್ದರು. ಇದು ವಿದ್ಯಾರ್ಥಿಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ‘‘ಇದು ದಲಿತ ಹಾಗೂ ದಲಿತೇತರ ವಿದ್ಯಾರ್ಥಿಗಳ ನಡುವಿನ ಮುಖಾಮುಖಿಯಲ್ಲ. ಹಲ್ಲೆಗೊಳಗಾದ ವಿದ್ಯಾರ್ಥಿಯೂ ದಲಿತ ಸಮುದಾಯಕ್ಕೆ ಸೇರಿದವರು’’ ಎಂದು ಅವರು ಹೇಳಿದ್ದಾರೆ. ಎಬಿವಿಪಿ ನಾಯಕನ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಸಿದಂತೆ ರೋಹಿತ್ ಹಾಗೂ ಇತರೆ ನಾಲ್ವರು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಅಮಾನತ್ತುಮಾಡಲಾಗಿತ್ತು. ಕಾರ್ಯಕಾರಿ ಸಮಿತಿಯ ಉಪ ಸಮಿತಿ ಶಿಾರಸಿನಂತೆ ಐವರು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ತಮ್ಮ ವಿಷಯಗಳ ತರಗತಿಗೆ ಹಾಗೂ ಅಗತ್ಯ ಕಾರ್ಯಾಗಾರಗಳಲ್ಲಿ ಭಾಗಿಯಾಗುವ ಅವಕಾಶವನ್ನು ಅವರಿಗೆ ನೀಡಲಾಗಿತ್ತು. ಕೆಲವೊಂದು ವರ್ಗದ ಜನರು ಪ್ರಕರಣವನ್ನು ಭಾವೋದ್ರೇಕಗೊಳಿಸುತ್ತಿದೆ.ದೇಶದಲ್ಲಿ ಗಲಭೆಯ ಕಿಚ್ಚು ಹಚ್ಚಲು ಹಾಗೂ ಜಾತಿ ಕಲಹವಾಗಿ ಪ್ರತಿಬಿಂಬಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಇರಾನಿ ಆರೋಪಿಸಿದ್ದಾರೆ. ರೋಹಿತ್ ವೇಮುಲಾರ ಆತ್ಮಹತ್ಯೆ ನೋಟ್‌ನ್ನು ಒಳಗೊಂಡ ಪೊಲೀಸ್ ದೃಢೀಕೃ ಪ್ರತಿಯನ್ನು ಪ್ರದರ್ಶಿಸಿದ ಇರಾನಿ, ಇದರಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಸಂಘಟನೆ ಅಥವಾ ಸಂಸದನ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದಿದ್ದಾರೆ.





