Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನ್ಯಾಯದಾನ, ಹೆಲ್ಮೆಟ್ ಮತ್ತು ಜಲ್ಲಿಕಟ್ಟು

ನ್ಯಾಯದಾನ, ಹೆಲ್ಮೆಟ್ ಮತ್ತು ಜಲ್ಲಿಕಟ್ಟು

ವಾರ್ತಾಭಾರತಿವಾರ್ತಾಭಾರತಿ20 Jan 2016 11:14 PM IST
share
ನ್ಯಾಯದಾನ, ಹೆಲ್ಮೆಟ್ ಮತ್ತು ಜಲ್ಲಿಕಟ್ಟು

 ನ್ಯಾಯದಾನದಲ್ಲಿ ವಿಳಂಬದ ಕುರಿತು ಎಲ್ಲರೂ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರನ್ನು, ಜನರೆಲ್ಲರೂ ಸೇರಿ ರೂಪಿಸುವ ಸಮಾಜವನ್ನು, ಸಮಾಜದ ಭೌಗೋಳಿಕ ಮಿತಿಯಾಗುವ ರಾಜ್ಯ/ದೇಶಗಳನ್ನು ಕಾಡುವ ಜ್ವಲಂತ ಸಮಸ್ಯೆಗಳ ಬಗ್ಗೆ, ಎಲ್ಲರೂ ಚಿಂತಿಸುವುದು ಸಹಜವೇ. ಆದರೆ ಪರಿಸ್ಥಿತಿಯ ಮರ್ಮವನ್ನರಿಯದೆ ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಅನೇಕ ಚಿಂತೆಗಳು ಮಾಡುತ್ತಿವೆ. ಈ ಚಿಂತೆಗಳಿಗೆ ‘ಚಿಂತನೆ’ಯೆಂಬ ಹೆಸರನ್ನೂ ಅಂತಹ ಚಿಂತಕರು ಇಟ್ಟುಕೊಳ್ಳುವುದೂ ಇದೆ. ಶೂನ್ಯ ಸಂಪಾದನೆಯಾಗಬೇಕಾದ ‘ಚಿಂತೆ’ ತನ್ನ ಶೂನ್ಯವನ್ನು ಕಳೆದುಕೊಂಡು ‘ಚಿತೆ’ಯಾಗಿ ಪರಿಣಮಿಸುವುದೂ ಇದೆ. ಎಲ್ಲರೂ ಎಲ್ಲ ವಿಚಾರಗಳ ಬಗ್ಗೆ ಮಾತನಾಡಕೂಡದು ಎಂದು ಫ್ರೆಂಚ್ ತತ್ವಶಾಸ್ತ್ರಜ್ಞ ಫುಕೋ ಹೇಳುತ್ತಾನೆ. ಅಂದರೆ ಅದಕ್ಕೂ ಒಂದು ಶಾಸ್ತ್ರೀಯ, ಅಥವಾ ನಿರ್ಮಿತ ಅಧಿಕಾರ ಬೇಕು ಎಂದು ಸೂಚನೆ. ಇದನ್ನು ಇನ್ನೂ ಪರಿಶೀಲಿಸಿದರೆ ಈ ಅಧಿಕಾರವನ್ನು ನೀಡುವವರು, ನಿರ್ಮಿಸುವವರು ಯಾರು ಎಂಬ ಪ್ರಶ್ನೆ ಹುಟ್ಟುತ್ತದೆ. ಪ್ರಾಯಃ ಇದಕ್ಕೆ ಇದಮಿತ್ಥಂ ಎಂಬ ಉತ್ತರವು ಭಾರತೀಯ ಸೆಲೆ-ನೆಲೆ-ಬೆಲೆಯಲ್ಲಿ ಸಿಕ್ಕದು. ದೇಶ-ಕಾಲದ ಪ್ರಜ್ಞೆಯೇ ಉತ್ತರ ನೀಡಬೇಕು. ಮತ್ತೆ ನ್ಯಾಯದಾನದ ಕುರಿತು ಚರ್ಚೆಗೆ ಮರಳಿದರೆ ಒಂದು ಸ್ಪಷ್ಟ ದೃಶ್ಯ ಕಾಣುತ್ತದೆ. ವಿವಾದದ ಸೃಷ್ಟಿ ಅತ್ಯಂತ ಸಹಜವೆಂದು ಜನ ತಿಳಿಯುತ್ತಾರೆ. ಜಗಳ ಯಾಕಾಯಿತು, ಅದನ್ನು ಹೇಗೆ ನ್ಯಾಯವಾಗಿ ಪರಿಹರಿಸಬಹುದು ಮತ್ತು ಅದು ಮರುಕಳಿಸದಂತೆ ಹೇಗೆ ಸಮಾಜವು ನಡೆಯಬಹುದು, ನುಡಿಯಬಹುದು, ತಡೆಯಬಹುದು ಎಂಬುದನ್ನು ಬಹುತೇಕ ಎಲ್ಲರೂ ಯೋಚಿಸುವುದೇ ಇಲ್ಲ. ಬದಲಾಗಿ ವಿವಾದ ಅಪರಿಹಾರ್ಯವೆಂಬಂತೆ ನ್ಯಾಯಾಲಯಗಳ ಮೆಟ್ಟಲು-ಬಾಗಿಲು ತೆರೆದಿದೆಯೆಂಬ ಕಾರಣಕ್ಕೇ ಅಲ್ಲಿಗೆ ತಲುಪಿ ನಂತರ ಪರಿಹಾರವನ್ನು ಯೋಚಿಸಲಾಗುತ್ತದೆ. ಇದು ಹೇಗೆಂದರೆ ಅಪಘಾತ ನಡೆಯುವ ಮತ್ತು ಅದನ್ನು ತಡೆಯುವ ಬಗ್ಗೆ ಚಿಂತಿಸದೆ ನಂತರ ಆಸ್ಪತ್ರೆಗಳಲ್ಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವಂತೆ. ಗುಣಪಡಿಸುವುದಕ್ಕಿಂತ ಪೂರ್ವನಿಯಂತ್ರಣವೇ ಒಳ್ಳೆಯದು (ಕ್ಟೃಛಿಛ್ಞಿಠಿಜಿಟ್ಞ ಜಿ ಚಿಛಿಠಿಠಿಛ್ಟಿ ಠಿಚ್ಞ ್ಚ್ಠ್ಟಛಿ) ಎಂಬುದು ನಮಗೆ ಯಾವಾಗ ಹೊಳೆಯುತ್ತದೆ?

ಈ ಹಿನ್ನೆಲೆಯಲ್ಲಿ ದೀರ್ಘಚಿಂತನೆಗೆ ಅವಕಾಶವಿದೆಯಾದರೂ ಮೂರ್ತ ನಿದರ್ಶನಗಳೆಂಬಂತೆ ಈಗಾಗಲೇ ಮಾಧ್ಯಮಗಳಲ್ಲಿ ಚರ್ಚಿತವಾದ ಎರಡು ಸಂಗತಿಗಳನ್ನು ಗಮನಿಸಬಹುದು:

ಮೊದಲನೆಯದು, ದ್ವಿಚಕ್ರವಾಹನಚಾಲಕರು (ವ್ಯಂಗ್ಯವೆನ್ನಿಸಿದರೂ ಸುಲಭ ಕನ್ನಡದಲ್ಲಿ ಮೋಟಾರು ಸೈಕಲ್‌ಸವಾರರು ಎನ್ನಬಹುದು!) ಮತ್ತು ಹಿಂಬದಿ ಸವಾರರು ಹೆಲ್ಮೆಟ್ (ಶಿರಸ್ತ್ರಾಣ) ಧರಿಸುವುದನ್ನು ಕಡ್ಡಾಯಗೊಳಿಸಿದ್ದು. ಮುಂಬದಿ ಸವಾರರೇನೋ ಹೆಲ್ಮೆಟ್ ಧರಿಸಬಹುದು; ಆದರೆ ಹಿಂಬದಿ ಸವಾರರು ಎಂಬ ಕಲ್ಪನೆಯೇ ಸಂಚಾರಿ(!) ಭಾವ. ಯಾರಾದರೂ ಡ್ರಾಪ್ ಕೊಡಬಹುದೆಂಬ ಆಸೆಯಿದ್ದರೆ ಪ್ರತಿಯೊಬ್ಬ ಪಾದಚಾರಿಯೂ ಕೈಯಲ್ಲಿ ಕೊಡೆ, ಟಾರ್ಚ್‌ಗಳಂತೆ ಒಂದು ಹೆಲ್ಮೆಟ್ ಹಿಡಿಯಬೇಕಾಗುತ್ತದೆ. ಇಲ್ಲವಾದರೆ ಮುಂಬದಿ ಸವಾರರಿಗೇ ಒಂದು ಹೆಚ್ಚುವರಿ ಹೆಲ್ಮೆಟ್‌ನ್ನು ಕಡ್ಡಾಯಗೊಳಿಸಬೇಕು. ಆದರೆ ಇದನ್ನು ಅಕ್ಷರಶಃ ಪಾಲಿಸುವುದರ ಯಥಾರ್ಥ ತೊಡಕುಗಳೇನೇ ಇರಲಿ, ಮುಂಬದಿ ಸವಾರರಂತೂ ಹೆಲ್ಮೆಟ್ ಧರಿಸಲೇಬೇಕಷ್ಟೇ! (ಹೆಲ್ಮೆಟ್‌ನಿಂದಾಗಿ ಹಿಂಬದಿ ಸೀಟು ಖಾಲಿಯಾಗಿ ಉಳಿಯಲೂ ಸಾಕು, ಪರವಾಗಿಲ್ಲ.)


ಇದು ಸರಕಾರದ ನಿರ್ಣಯವಲ್ಲ. ಹೆಲ್ಮೆಟ್ ಕಂಪೆನಿಗಳದ್ದೂ ಅಲ್ಲ. ಹೆಲ್ಮೆಟ್ ಧರಿಸಬೇಕಾದವರದ್ದಂತೂ ಅಲ್ಲವೇ ಅಲ್ಲ. ಬದಲಾಗಿ ಸರ್ವೋಚ್ಚ ನ್ಯಾಯಾಲಯದ್ದು. ಯಾವಾಗ ಪ್ರಾಣವನ್ನು ಕಾಪಾಡಿಕೊಳ್ಳಬೇಕಾದವರು ತಾವು ಚಿರಂಜೀವಿಗಳೆಂದು ಮತ್ತು ತಮ್ಮ ತಲೆಗಳನ್ನು ವಿಪರೀತ ಗಟ್ಟಿಯಿದೆಯೆಂದು, ನಂಬುತ್ತಾರೋ ಅಂತಹ ಸಂದರ್ಭದಲ್ಲಿ ಸಂವಿಧಾನದಡಿ ದುಡಿಯುವ ಕಾನೂನು ಪಾಲಕರು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಂದು ನಿರ್ಬಂಧಗಳನ್ನು ಹೇರಬೇಕಾದ್ದು ಅನಿವಾರ್ಯವಾಗುತ್ತದೆ. ಇದರಿಂದಾಗಿ ನೂರಾರು (ಭಾರತದಂತಹ ಬೃಹತ್ ಜನಸಂಖ್ಯೆ ಇರುವ ದೇಶದಲ್ಲಿ ನೂರಾರು ತನ್ನ ಸಂಖ್ಯಾಬೆಲೆಯನ್ನು ಕಳೆದುಕೊಂಡಿದೆ; ಅದನ್ನು ಸಾವಿರಾರು ಎಂದರೂ ಕಡಿಮೆಯೇ; ಲಕ್ಷಾನುಗಟ್ಟಲೆ ಎಂದರೆ ಸತ್ಯಕ್ಕೆ ಹತ್ತಿರ!) ಮನೆಗಳಲ್ಲಿ ಹರಿಯುವ ಕಣ್ಣೀರು, ಚಿಕಿತ್ಸೆಗಾಗಿ ಕೋಟಿಗಟ್ಟಲೆ ಹಣ ಅಪವ್ಯಯವಾಗುವುದು, ತಪ್ಪುತ್ತದೆ. ಮಿತಸಂಸಾರ ನಿಜಕ್ಕೂ ಹಿತಸಂಸಾರವಾಗಬಹುದು. ವಿಷಾದ ಮತ್ತು ತಮಾಷೆಯೆಂದರೆ ಈ ಕಾನೂನು ವಿವಾದಕ್ಕೆಡೆಯಾಗಿ ರುವುದು. ಈ ಕಡ್ಡಾಯದ ವಿರುದ್ಧ ಪ್ರತಿಭಟನೆಯೂ ನಡೆದಿದೆ. ಕಾನೂನಿನ ಪಾಲಕರೂ, ಪೋಷಕರೂ ಮತ್ತು ಅನುಷ್ಠಾನದೀಪಕರೂ ಇದನ್ನು ಎಷ್ಟು ತಿಳಿಗೊಳಿಸಲು ಸಾಧ್ಯವೋ ಅಷ್ಟೂ ತಿಳಿಗೊಳಿಸುತ್ತಿದ್ದಾರೆ. ಕರ್ನಾಟಕದಲ್ಲಿ ಈ ಕೆಲವು ದಿನಗಳಲ್ಲಿ ಆಗಿರುವ ಬೆಳವಣಿಗೆಗಳು ಬೆರಗನ್ನಲ್ಲ, ಹಾಸ್ಯವನ್ನು ಸೃಷ್ಟಿಸಿವೆ. ಪೊಲೀಸರು ಕೆಲದಿನ ಮೋಟಾರು ಸೈಕಲ್ ಸವಾರರಿಗೆ ತಿಳಿಹೇಳುತ್ತಾರಂತೆ. ನಂತರ ಕಾನೂನನ್ನು ಎತ್ತಿಹಿಡಿಯುತ್ತಾರಂತೆ! ಅಂದರೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಅನುಕೂಲ, ಆರೋಗ್ಯವನ್ನು ಗಮನಿಸದೆ ತಮ್ಮಿಷ್ಟವನ್ನಷ್ಟೇ ಗಮನಿಸುತ್ತಾರೆಂಬುದು ಸ್ಪಷ್ಟ. ನ್ಯಾಯಮೂರ್ತಿ ಕಾಟ್ಜು ಹೇಳುವಂತೆ ಈ ದೇಶದ 90 ಶೇಕಡಾ ಮಂದಿಗೆ ತಲೆಯಿಲ್ಲವೆಂಬುದು ಸತ್ಯವಿದ್ದರೆ ಹೆಲ್ಮೆಟ್ ಖಂಡಿತಾ ಬೇಡ! ಹೆಲ್ಮೆಟ್ ಇದ್ದರೂ ಅದನ್ನು ಮೋಟಾರ್‌ಸೈಕಲ್‌ನ ಹ್ಯಾಂಡಲ್‌ಗೆ ಸಿಕ್ಕಿಸಿ ಪೊಲೀಸರನ್ನು ಕಂಡಾಗಲಷ್ಟೇ ಧರಿಸುವವರು ಬಹಳಷ್ಟು ಮಂದಿ. ಈ ದಿವ್ಯ ನಿರ್ಲಕ್ಷ್ಯದಿಂದಾಗಿ ಮೂರ್ತ-ಅಮೂರ್ತ ಕಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾಗುವವರು ಅಪಘಾತದ ಬಲಿಪಶುಗಳು ಅಥವಾ ಅವರನ್ನು ಅವಲಂಬಿಸಿದ ಕುಟುಂಬ ಸದಸ್ಯರು ( ಠಿಛಿ ್ಚಛಿ ಞ ಚಿಛಿ
) ಮತ್ತು ಬೇಕಾಬಿಟ್ಟಿ ವಿಮೆಪರಿಹಾರ ನೀಡಬೇಕಾಗಿ ಬರುವ ವಿಮಾಕಂಪೆನಿಗಳು. ಅವರಾದರೂ ವಿಮಾಕಂತುಗಳನ್ನು ಹೆಚ್ಚಿಸಿ ತಮ್ಮ ನಷ್ಟಭರ್ತಿ ಮಾಡಿಕೊಳ್ಳಬಹುದು. ಪ್ರಾಣ ಕಳೆದುಕೊಂಡವರ ನಷ್ಟ ಎಲ್ಲಿ ಯಾರು ಭರ್ತಿ ಮಾಡುವವರು? ಈ ಬಲಿಪಶುಗಳು ಸವಾರರೇ ಆಗಬೇಕೆಂದಿಲ್ಲ, ಪಾದಚಾರಿಗಳೂ ಆಗಬಹುದು. ನಮ್ಮ ನಗರಗಳು ಮತ್ತು ವಾಹನಗಳು ಬೆಳೆಯುತ್ತಿರುವ ಭಯಾನಕ ವೇಗವನ್ನು ಗಮನಿಸಿದರೆ ರಸ್ತೆಗಿಳಿಯುವವರೆಲ್ಲರೂ ಮುಂದೊಂದು ದಿನ ಹೆಲ್ಮೆಟ್ ಧರಿಸಲೇಬೇಕೆಂಬ ಕಾನೂನು ಬಂದರೂ ಅಚ್ಚರಿಯಿಲ್ಲ.
ಇನ್ನೊಂದು ವಿಚಿತ್ರ ಮತ್ತು ದಾರುಣ ಪ್ರಸಂಗವೆಂದರೆ ತಮಿಳುನಾಡಿನ ಜಲ್ಲಿಕಟ್ಟು, ಮತ್ತು ಪ್ರಾಣಿಹಿಂಸೆಯ ಇಂತಹ ಅನೇಕ ಆಚರಣೆಗಳಿಗೆೆ ಸರ್ವೋಚ್ಚ ನ್ಯಾಯಾಲಯವು ನೀಡಿದ ತಡೆಯಾಜ್ಞೆ. ಕಳೆದ 4 ವರ್ಷಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನೆಲ್ಲೆಡೆ ಪೊಂಗಲ್ (ಕರ್ನಾಟಕದಲ್ಲಿ ಮಕರ ಸಂಕ್ರಾಂತಿ) ಸಂದರ್ಭದಲ್ಲಿ ನಡೆಯುವ ‘ಜಲ್ಲಿಕಟ್ಟು’ ಎಂಬ ಹೋರಿಗಳನ್ನು ಚಿತ್ರಹಿಂಸೆಗೊಳಪಡಿಸಿ ಮಣಿಸುವ ಮತ್ತು ಈ ಕಾರಣದಲ್ಲಿ ಮನುಷ್ಯರೂ ಸಾವು-ನೋವಿಗೊಳಗಾಗುವ ಹಿಂಸಾತ್ಮಕ ಕ್ರೀಡೆಯನ್ನು ನಿಷೇಧಿಸಿತು. ಇದರಿಂದ ಎಲ್ಲ ಪ್ರಾಣಿದಯಾಪರರಿಗೂ ಸಂತೋಷವಾಗಿದೆ. ಅದರಲ್ಲೂ ಗೋವುಗಳನ್ನು ತಾಯಿಯಂತೆ ಪೂಜಿಸುವ, ಗೋಹತ್ಯೆಯನ್ನು ನಿಷೇಧಿಸಬೇಕೆಂದು ಅವಿರತ ಹೋರಾಟಮಾಡುವ ಮತ್ತು ಈ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ (ಸ್ವಘೋಷಿತ) ಗೋಭಕ್ತರಿಗಂತೂ ಖಂಡಿತವಾಗಿ ಸಂತೋಷವಾಗಿದೆಯೆಂದು ನಂಬಲಾಯಿತು. ಆದರೆ ಈ ಗೋಗೌರವವು (ಅಯೋಧ್ಯೆಯ ರಾಮಮಂದಿರ ನಿರ್ಮಾಣದಂತೆ) ಒಂದು ರಾಜಕೀಯ ನಡೆಯೆಂಬುದನ್ನು ಈ ಪ್ರಸಂಗವು ವಿದಿತಗೊಳಿಸಿದೆ. ಕಳೆದ ವಾರ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಈ ನಿಷೇಧವನ್ನು ಅನೂರ್ಜಿತಗೊಳಿಸುವಂತೆ ಒಂದು ಆದೇಶವನ್ನು ಹೊರಡಿಸಿ ‘ಜಲ್ಲಿಕಟ್ಟು’ ಎಂಬ ಹಿಂಸೆಗೆ ಅನುವುಮಾಡಿಕೊಟ್ಟಿತು. ಈ ಬಗ್ಗೆ ಯಾವ ಗೋಭಕ್ತರೂ ಚಕಾರವೆತ್ತಲಿಲ್ಲ. ಇದಕ್ಕೆ ಕಾರಣವೆಂದರೆ ಸದ್ಯದಲ್ಲೇ ತಮಿಳುನಾಡಿನಲ್ಲಿ ಚುನಾವಣೆ ಬರಲಿದೆ. ಮತೀಯ ಶಕ್ತಿಗಳು ಇಂತಹ ಜನಪ್ರಿಯ ದೊಂಬರಾಟಗಳನ್ನು ದುರುಪಯೋಗಪಡಿಸಿಯೇ ಅಧಿಕಾರಕ್ಕೆ ಬರಲು ಯತ್ನಿಸುತ್ತವೆ. ಪ್ರತೀ ಗೋವಿನ ಹಿಂದೆಯೂ ಅಸಂಖ್ಯಾತ ಗೋಮುಖ ವ್ಯಾಘ್ರಗಳಿರುವುದರಿಂದ ಬಹುಪಾಲು ಜನರ ಈ ಹಿಂಸಾತ್ಮಕ ಅಭಿರುಚಿಯಲ್ಲಿ ಗೋವಿನಂತಹ ಗೋವನ್ನು ರಕ್ಷಿಸುವವರು ಯಾರು?


ಗೋಭಕ್ತರು ತೊಡಗುವ ಕುತರ್ಕವೆಂದರೆ ‘ಜಲ್ಲಿಕಟ್ಟು’ ಗೋಹತ್ಯೆಯಂತಲ್ಲ; ಜಸ್ಟ್ ಕ್ರೀಡೆ. ಹಿಂಸೆ ಮತ್ತು ಕ್ರೌರ್ಯಕ್ಕೆ ಇಂತಹ ಬದನೆಕಾಯಿ ಸೀಮೆಗಳನ್ನಿಟ್ಟುಕೊಂಡರೆ ದೇಶ ಯಾವ ಹಂತಕ್ಕೆ ತಲುಪೀತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಸಂವೇದನಾರಹಿತ ಭಾವಕ್ಕೆ ಎಲ್ಲ ವಿಚಾರಗಳನ್ನೂ ವಿಕಾರಗೊಳಿಸುವ ಶಕ್ತಿಯಿರುತ್ತದೆ. ವಿಶೇಷವೆಂದರೆ ಈ ಆದೇಶ ಬಂದ ತಕ್ಷಣ ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಸಿಗದಂತೆ ಯತ್ನಿಸಿತು. ಆದರೂ ಅದೃಷ್ಟವಶಾತ್ ದೇಶದ ಪ್ರಾಣಿಕಲ್ಯಾಣ ಮಂಡಳಿಯು (ಅದರ ಅಧ್ಯಕ್ಷರೂ ತಮಿಳುನಾಡಿನವರೇ!) ಸರ್ವೋಚ್ಚ ನ್ಯಾಯಾಲಯದಲ್ಲಿ ತಕ್ಷಣ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿತು. ಪರಿಸ್ಥಿತಿಯ ಗಂಭೀರತೆಯ ಅರಿವಾದ ಸರ್ವೋಚ್ಚ ನ್ಯಾಯಾಲಯವು ಕೇವಿಯಟ್ ಇದ್ದರೂ ತಡೆಯಾಜ್ಞೆ ನೀಡಿತು. ಈ ಬಾರಿಯ ಪೊಂಗಲ್ ನಿಜಕ್ಕೂ ಗೋವುಗಳಿಗೆ ಕಳೆದ 4 ವರ್ಷಗಳಂತೆ ಅರ್ಥಪೂರ್ಣ. ಏಕೆಂದರೆ ಚುನಾವಣೆ ಎದುರಿಗಿದ್ದರೂ ಗೋವುಗಳನ್ನು ಸರ್ವೋಚ್ಚ ನ್ಯಾಯಾಲಯವೂ ಅದಕ್ಕೆ ಕಾರಣವಾದ ಪ್ರಾಣಿರಕ್ಷಣಾ ಮಂಡಳಿಯೂ ರಕ್ಷಿಸಿವೆ! 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X