Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವೇಮುಲಾ ಸಾವು: ಉಪಕುಲಪತಿಗೊಂದು ಬಹಿರಂಗ...

ವೇಮುಲಾ ಸಾವು: ಉಪಕುಲಪತಿಗೊಂದು ಬಹಿರಂಗ ಪತ್ರ

ವಾರ್ತಾಭಾರತಿವಾರ್ತಾಭಾರತಿ20 Jan 2016 11:18 PM IST
share
ವೇಮುಲಾ ಸಾವು: ಉಪಕುಲಪತಿಗೊಂದು ಬಹಿರಂಗ ಪತ್ರ

ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯದ ವಿರುದ್ಧ, ಅದರಲ್ಲೂ ಮುಖ್ಯವಾಗಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಐದು ಮಂದಿ ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ಪಕ್ಷಪಾತ ಧೋರಣೆ ವಿರುದ್ಧ ವಿಶ್ವ ಚಿಂತಕ ಸಮುದಾಯದವರಾದ ನಾವು ನ್ಯಾಯಕ್ಕಾಗಿ ಈ ತುರ್ತು ಮನವಿ ಮಾಡಿಕೊಳ್ಳುತ್ತಿ ದ್ದೇವೆ. ಇದು ರಾಜಕೀಯ ಒತ್ತಡದ ಆದೇಶ. ಯುವ ಚೇತನಗಳು ತಮ್ಮ ಸ್ವಯಂರಕ್ಷಣೆ ಬಗ್ಗೆ ಮಾತನಾಡಲೂ ಅವಕಾಶ ನೀಡದೇ ಕೈಗೊಂಡ ಏಕಪಕ್ಷೀಯ ನಿರ್ಧಾರ. ಇದು ಈ ಹಿಂದೆ ವಿಶ್ವವಿದ್ಯಾನಿಲಯವೇ ಕೈಗೊಂಡಿದ್ದ ನಿರ್ಧಾರಕ್ಕೆ ತದ್ವಿರುದ್ಧವಾದುದು. ಈ ಯುವ ಮನಸ್ಸುಗಳ ಕ್ರಿಯಾಶೀಲತೆಯನ್ನು ಸಹಿಸದೆ, ರಾಜಕೀಯ ಸ್ಪರ್ಧಿಗಳು ಮಾಡಿದ್ದ ಆರೋಪವನ್ನು ಪರಿಶೀಲಿಸಿ ಶಿಷ್ಟಾಚಾರ ಸಮಿತಿ ನೀಡಿದ ಮೂಲ ವರದಿಯಲ್ಲಿ ಈ ವಿದ್ಯಾರ್ಥಿಗಳನ್ನು ನಿರಪರಾಧಿಗಳೆಂದು ಘೋಷಿಸಲಾಗಿತ್ತು.

ಈ ಪಕ್ಷಪಾತ ಧೋರಣೆಗೆ ಇದೀಗ ಭಯಾನಕ ಬೆಲೆ ತೆರುವಂತಾಗಿದೆ. ತೀರಾ ಭರವಸೆ ಮೂಡಿಸಿದ್ದ ಐವರು ಚಿಂತಕರ ಪೈಕಿ ಒಬ್ಬ, ರೋಹಿತ್ ವೇಮುಲಾ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಭವಿಷ್ಯವನ್ನು ಕಸಿದುಕೊಂಡ ಘಟನೆಯನ್ನು ಸಹಿಸಿಕೊಳ್ಳಲಾಗದೆ, ತನ್ನ ವೌಲ್ಯವನ್ನು ಸೀಮಿತಗೊಳಿಸಿದ್ದಕ್ಕಾಗಿ, ಆತನ ಶಬ್ದಗಳಲ್ಲೇ ವಿವರಿಸುವುದಾದರೆ, ಒಂದು ಮತವಾಗಿ ಹಾಗೂ ತಕ್ಷಣದ ಗುರುತಾಗಿ ಮಾಡಿದ್ದಕ್ಕಾಗಿ ಆತ ಜೀವ ಕಳೆದುಕೊಂಡಿದ್ದಾರೆ.
ಯಾವುದೇ ವೈಯಕ್ತಿಕ ಕ್ರಮಗಳು ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ ಎನ್ನುವುದು ಪ್ರಾಜ್ಞರಾದ ನಮಗೆ ತಿಳಿದಿದೆ. ಈ ಆತ್ಮಹತ್ಯೆ ವೈಯಕ್ತಿಕ ಕೃತ್ಯವಲ್ಲ. ಇದು ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಮೂಲಭೂತ ಹೊಣೆಗಾರಿಕೆಯನ್ನು ನಿರ್ವಹಿಸಲು, ಭಾರತದ ತುಳಿತಕ್ಕೊಳಗಾದ ಯವ ಸಮುದಾಯದ ಬೌದ್ಧಿಕ ಹಾಗೂ ವೈಯಕ್ತಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸಲು ವಿಫಲವಾದ ನಿದರ್ಶನ. ದೇಶದ ಪ್ರಮುಖ ಸಂಸ್ಥೆಗಳಲ್ಲಿ ವ್ಯಾಪಕವಾಗಿರುವ ಪಕ್ಷಪಾತ ಅಥವಾ ತಾರತಮ್ಯಕ್ಕೆ ಬಲಿಯಾದವರ ದೊಡ್ಡ ಪಟ್ಟಿಯಲ್ಲಿ ವೇಮುಲಾ ಕೂಡಾ ಸೇರಿದ್ದಾರೆ. ಇಂಥ ತಾರತಮ್ಯದಿಂದಾಗಿ ಖಿನ್ನತೆ ಹಾಗೂ ಆತ್ಮಹತ್ಯೆಗೆ ಹಲವು ಮಂದಿ ದಲಿತ ವಿದ್ಯಾರ್ಥಿಗಳು ತುತ್ತಾಗುತ್ತಿದ್ದಾರೆ. ಪರಿಣಾಮವಾಗಿ ವೌನವಾಗಿ ಅರ್ಧದಿಂದ ಕ್ಯಾಂಪಸ್ ತ್ಯಜಿಸಲು ಇದು ಕಾರಣವಾಗುತ್ತಿದೆ.
ದಕ್ಷಿಣ ಏಷ್ಯಾದ ಬುದ್ಧಿಜೀವಿಗಳಾಗಿ, ರೋಹಿತ್ ವೇಮುಲಾ ಅವರ ನಾಲ್ವರು ಸಹವರ್ತಿಗಳನ್ನು ತಕ್ಷಣ ವಿಶ್ವವಿದ್ಯಾನಿಲಯಕ್ಕೆ ಸೇರಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯದ ಆಡಳಿತವನ್ನು ಒತ್ತಾಯಿಸುತ್ತಿದ್ದೇವೆ. ಜತೆಗೆ ಆತನ ಕುಟುಂಬಕ್ಕೆ ನೆರವು ನೀಡಲು ಹಾಗೂ ಆತನ ಸಾವಿನ ಬಗ್ಗೆ ತ್ವರಿತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇವೆ. ಆದರೆ ಅದಷ್ಟೇ ಸಾಲದು. ಈಗ ನ್ಯಾಯ ಒದಗಿಸುವುದರ ಜೊತೆಗೆ ಭವಿಷ್ಯದಲ್ಲಿ ಯಾವುದೇ ಬಗೆಯ ಅನ್ಯಾಯಗಳಾಗದಂತೆ ತಡೆಯುವುದಾಗಿ ವಿಶ್ವವಿದ್ಯಾನಿಲಯ ಅಧಿಕಾರಿಗಳು ಭರವಸೆ ನೀಡಬೇಕು.
ಯಾವುದೇ ಶಿಕ್ಷಣ ಸಂಸ್ಥೆಗಳ ಭವಿಷ್ಯದ ದೃಷ್ಟಿಯಿಂದ, ನಾಗರಿಕ ಜೀವನ ಹಾಗೂ ಆರೋಗ್ಯಕರ ರಾಜಕೀಯ ಚರ್ಚೆಗೆ ಗಣನೀಯ ಕೊಡುಗೆ ನೀಡಿ, ವಿಶ್ವವಿದ್ಯಾನಿಲಯವನ್ನು ಕಲಿಕಾಸ್ಥಳ ಹಾಗೂ ವೈಯಕ್ತಿಕ ವರ್ಗಾವಣೆಯ ಸ್ಥಳವಾಗಿ ರೂಪಿಸಲು ರೋಹಿತ್‌ನಂಥ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪೋಷಿಸುವುದು ಅಗತ್ಯ. ಭಾರತದಲ್ಲಿ ಅತ್ಯಂತ ಜಾತೀಯ, ದ್ವೇಷದ ವಾತಾವರಣ ಇರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಇಂತಹ ವಿದ್ಯಾರ್ಥಿಗಳು ಪ್ರವೇಶಿಸಿದಾಗ, ಇಂತಹ ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ನೀಡಿ, ಅವರು ಪ್ರಬುದ್ಧರಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಡಬೇಕಾದ್ದು ಅನಿವಾರ್ಯ. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಜೀವವನ್ನು ಬಲಿದಾನ ಮಾಡಿದ ಹಿನ್ನೆಲೆಯಲ್ಲಿ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ತುರ್ತು ಹಾಗೂ ಸಮಗ್ರವಾಗಿ ದುರಸ್ತಿ ಅನಿವಾರ್ಯವಾಗಿದೆ.
ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ತಾರತಮ್ಯವನ್ನು ಬೆಳೆಸುವಲ್ಲಿ ರಾಜಕೀಯ ಮುಖಂಡರ ಹಸ್ತಕ್ಷೇಪ ಹಾಗೂ ಜಾತಿವಿರೋಧಿ ವಿದ್ಯಾರ್ಥಿ ಚಟುವಟಿಕೆಗಳ ಬಗ್ಗೆ ವಿಶ್ವವಿದ್ಯಾನಿಲಯ ಆಡಳಿತ ತೋರುತ್ತಿರುವ ದ್ವಿಮುಖ ನೀತಿಗಳು ಖಂಡಿತವಾಗಿಯೂ ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ಬೆಳೆಯುತ್ತಿರುವ ಇಮೇಜ್ ಹಾಗೂ ಗೌರವದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಲಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯವು ಅದರ ಮೂಲಭೂತ ಬದ್ಧತೆ ಅಥವಾ ಹೊಣೆಗಾರಿಕೆಯನ್ನು ನಿರ್ವಹಿಸಿ ವಿಶ್ವಾಸವನ್ನು ಮರು ಗಳಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇವೆ. ತಾರತಮ್ಯದ ಸಾಂಸ್ಥೀಕರಣ, ಎಲ್ಲ ವಿದ್ಯಾರ್ಥಿಗಳಿಗೆ ಗೌರವ ಹಾಗೂ ಸಹಾನುಭೂತಿಯಿಂದ ಬೋಧಿಸುವುದು ಹಾಗೂ ಇದರ ವಿರುದ್ಧದ ರಾಜಕೀಯ ಶಕ್ತಿಗಳಿಗೆ ಪ್ರತಿಭಟಿಸುವ ಮೂಲಕ ಮತ್ತೆ ತನ್ನ ಗೌರವವನ್ನು ಪಡೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ನಾವೆಲ್ಲರೂ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ.
- ಜಗತ್ತಿನ ವಿವಿಧ ದೇಶಗಳ 131 ಪ್ರಾಧ್ಯಾಪಕರು

(ಕೃಪೆ: ದ ವೈರ್)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X