ನೇರಳಕಟ್ಟೆ ಪ್ರತಿಭಾ ಪುರಸ್ಕಾರ

ವಿಟ್ಲ, ಜ.20: ಮಕ್ಕಳ ಶಿಕ್ಷಣದತ್ತ ಪೋಷಕರು ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಶಾಲೆಯ ಅಭಿವೃದ್ಧ್ದಿಯಲ್ಲೂ ಕೈ ಜೋಡಿಬೇಕು ಎಂದು ನೇರಳಕಟ್ಟೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರೋಹಿತಾಶ್ವ ಹೇಳಿದರು. ನೇರಳಕಟ್ಟೆಯ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಟ್ಲಮುಡ್ನೂರು ಗ್ರಾಪಂ ಉಪಾಧ್ಯಕ್ಷೆ ರೇವತಿ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ಲತೀಫ್ ನೇರಳಕಟ್ಟೆ, ಡಿ.ತನಿಯಪ್ಪ ಗೌಡ, ಶ್ರೀಧರ ರೈ, ಪ್ರೇಮನಾಥ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮಾಸ್ಟರ್ ಮಾತನಾಡಿದರು. ನೆಟ್ಲಮುಡ್ನೂರು ಗ್ರಾಪಂ ಸದಸ್ಯರಾದ ಸಮಿತಾ ಡಿ. ಪೂಜಾರಿ, ಪ್ರೇಮಾ, ಆರೋಗ್ಯ ಇಲಾಖೆಯ ಕಸ್ತೂರಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಭಾರತಿ ಹಾಗೂ ಸದಸ್ಯರು, ವಿದ್ಯಾರ್ಥಿ ನಾಯಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಜ್ಯೋತಿ ಬಿ., ನೃತ್ಯ ತರಬೇತುದಾರೆ ಕು. ಪುಣ್ಯಶ್ರೀ ಹಾಗೂ ದಾನಿ ಶ್ರೀಜಿತ್ ಪ್ರೇಮಲತಾ ಅವರನ್ನು ಸನ್ಮಾನಿಸಲಾಯಿತು.





